

ಕುಮಟಾ: ಭಗವಂತನನ್ನು ಕಾಣಲು ಸರಳತೆ, ಸಾತ್ವಿಕತೆ, ಸಜ್ಜನತೆಯ ಒಂದೇ ಮುಖ ಬೇಕು ಎಂದು ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.

ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ಚಾತುರ್ಮಾಸ್ಯ ವೃತಾಚರಣೆಯ 23ನೇ ದಿನದ ಕಾರ್ಯಕ್ರಮದಲ್ಲಿ ಹೊನ್ನಾವರದ ಮಾಗೋಡ ಮತ್ತು ಕುದ್ರಗಿ ಗ್ರಾಪಂ ಕೂಟದಿಂದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರ ಶ್ರೀಗಳು. ಮನುಷ್ಯನಲ್ಲಿ ಅನೇಕ ಮುಖಗಳಿವೆ. ಒಂದೊAದು ಮುಖ ಒಂದೊAದು ಸಂದರ್ಭದಲ್ಲಿ ಹೊರಗೆ ಬರುತ್ತದೆ. ಭಗವಂತನ ದರ್ಶನ ಪಡೆಯಲು ಒಂದೇ ಮುಖ ಬೇಕು. ಸರಳತೆ, ಸಾತ್ವಿಕತೆ ಮತ್ತು ಸಜ್ಜನತೆಯ ಒಂದೇ ಮುಖ ಬೇಕು. ಈ ಜಗತ್ತಿನಲ್ಲಿ ಬದುಕಲು ನಾವು ಅನೇಕ ಮುಖಗಳನ್ನು ಪ್ರದರ್ಶನ ಮಾಡಬಹುದಂತೆ. ಆದರೆ ಪೂರ್ಣ ಸತ್ಯ, ಧರ್ಮ, ಆನಂದದೆಡೆಗೆ ಹೋಗಲು ಒಂದೇ ಸಾತ್ವಿಕತೆಯ ಮುಖ ಬೇಕು.
ದೇವರ ನಾಮಗಳು, ಜಪಗಳು, ಮಂತ್ರಗಳು, ಆರಾಧನೆಗಳು ಭಗವಂತನ ಹತ್ತಿರ ಕೊಂಡೊಯ್ಯತ್ತದೆ. ಬೆಳಗಿನಿಂದ ಕತ್ತಲಿನವರೆಗಿನ ಕರ್ಮಗಳು ಶುದ್ಧವಾಗಿಬೇಕು. ಧೈರ್ಯದಲ್ಲಿ ಯಾವುಕ್ಕೂ ಹಿಂಜರಿಕೆ ಆಗಬಾರದು. ಪರಮಾತ್ಮನಲ್ಲಿ ಪೂರ್ಣ ಪ್ರೀತಿ ಇರಬೇಕು. ಆಗ ನಾವು ಭಗವಂತನಿಗೆ ಹತ್ತಿರವಾಗಲು ಸಾಧ್ಯ. ಅದಕ್ಕೆ ಈ ಚಾತುರ್ಮಾಸ್ಯ ಕಾರ್ಯಕ್ರಮ ಸಹಾಯಕಾರಿಯಾಗುತ್ತದೆ. ಧರ್ಮ ಜಾಗೃತಿಯ ಜೊತೆಗೆ ಭಕ್ತರಿಗೆ ಜ್ಞಾನ ನೀಡುವ ಕೈಕಂರ್ಯಗಳು ಕೂಡ ಇಲ್ಲ ನಡೆಯುತ್ತಿದೆ. ಇದರ ಪ್ರಯೋಜನ ಪಡೆಯುವಂತೆ ಶ್ರೀಗಳು ಕರೆ ನೀಡಿದರು.




ಯುವ ಬ್ರಿಗೇಡ್ ಸಂಸ್ಥಾಪಕ ಮತ್ತು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಯುವ ಬ್ರಿಗೇಡ್‌ನ ಕುಮಟಾ ತಂಡದೊAದಿಗೆ ಆಗಮಿಸಿ ಶ್ರೀಗಳ ದರ್ಶನ ಪಡೆದು, ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಓರ್ವ ಸಾದುವಿಗೆ ಮತ್ತು ಮಠಾಧೀಶರಿಗೆ ಚಾತುರ್ಮಾಸ್ಯ ಕೈಗೊಳ್ಳಲು ಹಲವು ಸ್ಥಳಗಳಿದ್ದರೂ ನಮ್ಮ ಊರನ್ನು ಆಯ್ಕೆ ಮಾಡಿಕೊಂಡಿರುವುದು ಮಹಾಭಾಗ್ಯ. ಚಾತುರ್ಮಾಸ್ಯದಿಂದ ಪ್ರತಿದಿನ ಗುರುಗಳ ದರ್ಶನ, ನಿತ್ಯ ಪ್ರವಚನಗಳ ಶ್ರವಣ ನಿಜಕ್ಕೂ ಮಹಾ ಭಾಗ್ಯ. ಆದರೆ ನಮ್ಮೆಲ್ಲರ ದಾರಿ ಗುರಿಯನ್ನು ಬಿಟ್ಟು ಚಲಿಸುತ್ತದೆ. ಹಾಗಾಗಿ ಭಗವಂತನೆಡೆಗೆ ಹೋಗುವ ಮಾರ್ಗ ತೋರಿಸಲು ತನ್ನೆಲ್ಲ ಶಕ್ತಿಯನ್ನು ತುಂಬಿ ಸದ್ಗುರುಗಳಾಗಿ ಗುರುಪೀಠದಲ್ಲಿ ಕೂರಿಸುತ್ತಾನೆ. ತನ್ನೆಡೆಗೆ ಬರುವ ಮಾರ್ಗವನ್ನು ಗುರುಗಳೇ ತೋರಿಸುತ್ತಾರೆ. ಜಗತ್ತನ್ನು ನಂಬಿ ಕೂತವರಿಗೆ ಗುರುಗಳ ಬಳಿ ಹೋಗಲು ಕೂಡ ಸಮಯ ವಿರುವುದಿಲ್ಲ. ಆ ದಿಕ್ಕಿನಲ್ಲಿ ಹೋಗುವ ಮನಸ್ಸು ಇಲ್ಲದಿದ್ದರೆ ಗುರುಗಳಾದರೂ ಏನು ಮಾಡುತ್ತಾರೆ. ನಿರಂತರ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಪ್ರಾಮಾಣಿಕವಾದ ವೈರಾಗ್ಯ ಮೂಡಿ, ಅದು ಆಧ್ಯಾತ್ಮಿಕ ಭಾವವನ್ನು ಜಾಗೃತಗೊಳಿಸುತ್ತದೆ. ಭಗವಂತನ ಮತ್ತು ಗುರುಗಳ ಮುಖವನ್ನು ಎಷ್ಟು ಸಾರಿ ನೋಡಿದರೂ ಸಾಕು ಎನಿಸುವುದಿಲ್ಲ. ಹಾಗಾಗಿ ಚಾತುರ್ಮಾಸ್ಯ ಭಾಗ್ಯವನ್ನು ಬದುಕನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳಿ. ನಮ್ಮ ಮುಂದಿನ ಪಿಳಿಗೆಗೆ ಧರ್ಮದ ಸಂಸ್ಕಾರ ಕಲಿಸಿ ಎಂದು ಅವರು ಕರೆ ನೀಡಿದರು.



ಚಾತುರ್ಮಾಸ್ಯದ 23ನೇ ದಿನದ ಕಾರ್ಯಕ್ರಮದಲ್ಲಿ ಹೊನ್ನಾವರ ತಾಲೂಕಿನ ಮಾಗೋಡು ಮತ್ತು ಕುದ್ರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಗೋಡು-1, ಮಾಗೋಡು-2, ಮಳ್ಳಿಕೇರಿ, ಬಜೆಕೇರಿ, ಕೊಡ್ಲಗದ್ದೆ, ಕುದ್ರಗಿ ಹಾಗೂ ತೆಂಗಾರ ಗ್ರಾಮದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಅಕ್ಷಯ ಏಕನಾಥ್ ನಾಯ್ಕ್ ದಂಪತಿ ರಜತಗಿರಿ ಹೊನ್ನಾವರ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು. ಸಮಸ್ತ ನಾಮಧಾರಿ ಸಮಾಜ ಬಾಳೆಮೆಟ್ಟು ಮಾಗೋಡು ಇವರು ಗುರು ಸೇವೆ ಸಲ್ಲಿಸಿದರು. ಬಳಿಕ ಗುರು ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಿದರು. ಮಧ್ಯಾಹ್ನ ನಡೆದ ಅನ್ನ ಪ್ರಸಾದ ವಿತರಣೆಯಲ್ಲಿ ಭಕ್ತರು ಪಾಲ್ಗೊಂಡು ಕೃತಾರ್ಥರಾದರು.
ಈ ಸಂದರ್ಭದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಅಧ್ಯಕ್ಷ ಎಚ್ ಆರ್ ನಾಯ್ಕ, ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಆರ್ ನಾಯ್ಕ, ಪ್ರಮುಖರಾದ ಟಿ ಟಿ ನಾಯ್ಕ ಹೊನ್ನಾವರ, ಸುರೇಶ ನಾಯ್ಕ ಹೆರವಟ್ಟಾ, ಪ್ರಶಾಂತ ನಾಯ್ಕ, ವೈಭವ ನಾಯ್ಕ, ವಿಶ್ವನಾಥ ನಾಯ್ಕ, ರಾಘವೇಂದ್ರ ನಾಯ್ಕ, ನಿತ್ಯಾನಂದ ನಾಯ್ಕ ಇತರೆ ಸೇವಾ ಕರ್ತರು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಯಶವಂತ ನಾಯ್ಕರು ನಡೆಸಿಕೊಟ್ಟರು.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ