October 5, 2025

ತಾಳಮದ್ದಲೆ ಸರಣಿ ಕಾರ್ಯಕ್ರಮಕ್ಕೆ ಚಾಲನೆ

ಶಿರಸಿ : ಕಲಾ ಕ್ಷೇತ್ರದಲ್ಲಿ ಮೆಚ್ಚುಗೆ ಜೊತೆಗೆ ವಿಮರ್ಶೆ ಕೂಡ ಬರಬೇಕು. ಪರಿಣಿತ ಪ್ರೇಕ್ಷಕರು ಘಟ್ಟಿಯಾಗಿದ್ದಾರೆಂಬ ಪರಿಜ್ಞಾನ ಕಲಾವಿದರಿಗೆ ಇರಬೇಕು ಎಂದು ಯಕ್ಷಗಾನ ಕವಿ, ಅರ್ಥಧಾರಿ ದಿವಾಕರ ಹೆಗಡೆ ಕೆರೆಹೊಂಡ ಹೇಳಿದರು.

ನಗರದ ಟಿಎಂಎಸ್ ಸಭಾಂಗಣದಲ್ಲಿ ಯಕ್ಷಗಾನ ತಾಳಮದ್ದಲೆ ಅಧ್ಯಯನ ಮತ್ತು ಪ್ರದರ್ಶನ ಕೇಂದ್ರವಾದ ಶ್ರೀರಂಗಪಟ್ಟಣದ ಯಕ್ಷ ಕೌಮುದೀ ಟ್ರಸ್ಟ್ ಸಂಸ್ಥೆಯು ಅ.2ರಿಂದ 12ರವರೆಗೆ ಮಲೆನಾಡು, ಕರಾವಳಿಯ ವಿವಿಧೆಡೆ ತಾಳಮದ್ದಲೆ ಸರಣಿ ಆಯೋಜಿಸಲಾದ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆಸಕ್ತಿ ಇದ್ದವರನ್ನು ಕಲಾ ಕ್ಷೇತ್ರದಲ್ಲಿ ಅಲ್ಲಗಳೆಯದೇ ಬೆಂಬಲಿಸಬೇಕು, ಅವರನ್ನೂ ಬೆಳೆಸಬೇಕು. ಎದುರಿಗಿದ್ದವರು ಬರೀತಾರೆ ಎಂಬ ಎಚ್ಚರಿಕೆಯಲ್ಲಿ ಕಲೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ಪೌರಾಣಿಕ, ಯಕ್ಷಗಾನ, ಕಲೆಗೆ ಮರ್ಯಾದೆಗೆ ದಕ್ಕೆ ಆಗದಂತೆ ಆಗಬೇಕು. ಕಲೆಯ ಸಭ್ಯತೆ ನೆನಪಿಸುವ ಕಾರ್ಯ ವಿಮರ್ಶೆಗಳು ಎಚ್ಚರಿಸುವ ಮೂಲಕ ಕೂಡ ಆಗಬೇಕು ಎಂದರು. ಹುಬ್ಬಳ್ಳಿಯ ಐಎಸ್ ಆರ್ ಅಸಿಸ್ಟಂಟ್ ಕಮಿಷನರ್ ಶ್ರೀಕೃಷ್ಣ ಹೆಗಡೆ ಹೆಗಡೆ ಮರಿಯಜ್ಜನಮನೆ ಮಾತನಾಡಿ, ಕಲೆಯ ಬೆಳವಣಿಗೆಗೆ ಇಂಥ ಸರಣಿ ಕಾರ್ಯ ಮಾಡುತ್ತಿರುವದು ಅಭಿನಂದನೀಯ ಎಂದರು. ಕಲಾವಿದೆ ಡಾ. ವಿಜಯನಳಿನಿ ರಮೇಶ, ತಾಳಮದ್ದಳೆ ಪಾಶ್ಚಾತ್ಯ ರಂಗ ಸಿದ್ದಾಂತಗಳಿಗೆ ಪ್ರೇರಣೆ ಕೊಟ್ಟವು ಇವು. ಹೊರಗಿನವರಿಗೆ ಮಹತ್ವದ್ದು. ಆದರೆ, ನಮಗೆ ಸಮಯ ಕಳೆಯಲು ಇರುವ ಕಲೆ ಆಗಬಾರದು ಎಂದರು. ಯಕ್ಷ ಹೆಜ್ಜೆಯ ನಿರ್ಮಲಾ ಗೋಳಿಕೊಪ್ಪ, ತಾಳಮದ್ದಲೆ ಸರಣಿ ಕಲಿಯುವ ಮಕ್ಕಳಿಗೆ ಕೂಡ ಸಾಧನವಾಗಲಿ ಎಂದರು. ಟ್ರಸ್ಟ್ ಅಧ್ಯಕ್ಷ, ವಿದ್ವಾಂಸ ಮೈಸೂರಿನ ಗ. ನಾ. ಭಟ್, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಒಟ್ಟೂ 11 ದಿನಗಳ ಕಾಲ ಈ ಸರಣಿ ತಾಳಮದ್ದಲೆ ಏರ್ಪಡಿಸಲಾಗಿದೆ. ಯಕ್ಷ ಕೌಮುದಿ ಟ್ರಸ್ಟ್ ಯಕ್ಷಗಾನ, ತಾಳಮದ್ದಳೆ ಕ್ಷೇತ್ರದಲ್ಲಿ ಅನವರತ ಕಾರ್ಯ ಮಾಡುತ್ತಿದೆ. ಸರಣಿಯ ತಾಳಮದ್ದಳೆಯ ಮೂಲಕ ರಸ- ಭಾವ- ಧ್ವನಿ ವೈಚಾರಿಕತೆಗಳ ಸಂಗಮ, ಕಲಾಕೃತಿಗಳಾಗಿ ದರ್ಶನ – ಪ್ರದರ್ಶನ ಇಲ್ಲಾಗಲಿದೆ ಎಂದರು. ಹಿರಿಯ ಕಲಾವಿದರಾದ ಗಣರಾಜ ಕುಂಬಳೆ, ಸಹಕಾರಿ ರತ್ನ, ಟಿಎಂಎಸ್ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟಿಸರ ಇದ್ದರು. ಆಶಾ ಹೆಗಡೆ ನಿರ್ವಹಿಸಿದರು

About The Author

error: Content is protected !!