ಶಿರಸಿ : ಕರ್ನಾಟಕ ರಕ್ಷಣಾ ವೇದಿಕೆ ಶಿರಸಿ ಸಿದ್ದಾಪುರ ಘಟಕದ ವತಿಯಿಂದ ಸಿದ್ದಾಪುರ ತಾಲೂಕಿನ ಕೊಂಡ್ಲಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಗೆ ಬರುವಂತ ಭಕ್ತಾದಿಗಳಿಗೆ ತಂಪು ಪಾನೀಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಿರಿಚಿಸಿದಪುರ ಘಟಕದ ಅಧ್ಯಕ್ಷರಾದ ಕಾರ್ತಿಕ್ ಅರಮನೆ
ನಾಗರಾಜ್ ಸಿದ್ದಾಪುರ ರಾಘು, ನಮನ್ ಜೋಗಿ, ಆನಂದ ದೊಡ್ಮನೆ, ಪ್ರತೀಕ್ ಉಪ್ಪೂರ್ ವೆಂಕಟೇಶ್ ನಾಯ್ಕ
ಚಂದ್ರು ಮಡಿವಾಳ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾರ್ತಿಕ್ ಅರಮನೆ ಮಾತನಾಡಿ ಮುಂದಿನ ದಿನಗಳಲ್ಲಿ ರಕ್ಷಣಾ ವೇದಿಕೆ ಶಿರಸಿ ಸಿದ್ದಾಪುರ ಘಟಕ ಸಾರ್ವಜನಿಕ ಸೇವೆಯಲ್ಲಿ ಪಾಲ್ಗೊಳ್ಳುತ್ತಾ ಸಮಾಜದ ಅಭಿವೃದ್ಧಿಯ ದಾರಿಯಲ್ಲಿ ಕೆಲಸವನ್ನು ಮಾಡುತ್ತದೆ ಎಂದು ತಿಳಿಸಿದರು.

ನಾಗರಾಜ್ ಸಿದ್ದಾಪುರ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಸಿರ್ಸಿ – ಸಿದ್ದಾಪುರ ಘಟಕದ ವತಿಯಿಂದ ಹಮ್ಮಿಕೊಂಡಿರುವಂತ ಈ ಕಾರ್ಯಕ್ರಮ ಅತಿ ಉತ್ತಮವಾಗಿದೆ ಮತ್ತು ಕಾರ್ತಿಕ್ ಅರಮನೆ ಅವರ ಪರಿಶ್ರಮ ಮತ್ತು ಉತ್ಸಾಹ ನಮ್ಮೆಲ್ಲ ಪದಾಧಿಕಾರಿಗಳು ಮಾಡುತ್ತಿರುವ ಸೇವೆ ಉತ್ತಮವಾಗಿದೆ ಮತ್ತು ಹೆಚ್ಚಿನ ಸೇವೆ ಕರ್ನಾಟಕ ರಕ್ಷಣಾ ವೇದಿಕೆ ಸಿರ್ಸಿ ಸಿದ್ದಾಪುರ ಘಟಕದಿಂದ ಆಗಲಿ ಎಂದು ಶುಭ ಹಾರೈಸಿದರು.
About The Author


More Stories
ಕಸ್ತೂರಿ ರಂಗನ್ ವರದಿ: ಸೂಕ್ಷ್ಮ ಪ್ರದೇಶ ಅಧ್ಯಯನಕ್ಕೆ ಸಮಿತಿ ರಚನೆ ಹಾಗೂ ಜನವಸತಿ ಪ್ರದೇಶ ಮುಕ್ತಗೊಳಿಸಲು ರವೀಂದ್ರ ನಾಯ್ಕ ಆಗ್ರಹ
ಶಿರಸಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ವರದಿ ತಿರಸ್ಕರಿಸಲು ಹಕ್ಕು ಒತ್ತಾಯ
ನದಿ ತಿರುವು ಯೋಜನಾ ವಿರೋಧಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯ: ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ