ಹೊನ್ನಾವರ :ಇಂದಿನ ಬಹುತೇಕ ಬರಹಗಾರರು ವಿಧಾನಸೌಧದ ಬಳಿ ಸುಳಿದಾಡುವುದನ್ನೇ ಸಾಧನೆ ಎಂದು ಕೊಂಡಿದ್ದಾರೆ. ನಾವು ಯಾರಿಗೂ ಅಧೀನರಾಗದ ಮನಸ್ಥಿತಿ ಕಾಪಾಡಿಕೊಳ್ಳಬೇಕು. ಇಂದಿನ ಬಹುತೇಕ ಲೇಖಕರು ಸ್ವಾಯತ್ತ ಪ್ರಜ್ಞೆ ಮತ್ತು ಸ್ವಂತಿಕೆಯ ಕೊರತೆಯಿಂದ ಬಳಲುತ್ತಿದ್ದಾರೆ. ಇದು ಇಂದಿನ ದುರಂತ ಎಲ್ಲವನ್ನೂ ಎದುರಿಸುವ, ಪ್ರಶ್ನಿಸುವ ಮನೋಭಾವದ ಜೊತೆಗೆ ಸಾಹಿತಿಗಳು ಸ್ವಾಯತ್ತ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಅವರು ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಂಘ, ಐ.ಕ್ಯೂ.ಎ.ಸಿ. ಅಭಿನವ ಬೆಂಗಳೂರು, ವಿ.ಸೀ. ಸಂಪದ ಬೆಂಗಳೂರು ಜೊತೆಗೂಡಿ ಏರ್ಪಡಿಸಿದ್ದ ‘ಜೀವಕಾರುಣ್ಯ ಪರಂಪರೆ ಮತ್ತು ವಿ.ಸೀತಾರಾಮಯ್ಯ’ ಎಂಬ ವಿಚಾರದ ಕುರಿತು ಆಯೋಜಿಸಿದ ೨ ದಿನಗಳ ರಾಷ್ಟಿçÃಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಯೌವನದ ಉತ್ಸಾಹ ಮತ್ತು ಹಿರಿಯರ ವಿವೇಕ ಒಟ್ಟಾಗಿ ಸಾಗಬೇಕು. ಈ ವಿಚಾರ ಸಂಕಿರಣದ ನೆಪದಲ್ಲಿ ಹಿರಿಯರ ವಿವೇಕ ಮತ್ತು ಪರಂಪರೆಯನ್ನು ನೆನಪಿಸಿಕೊಳ್ಳುವ ಪ್ರಯತ್ನ ನಡೆದಿರುವುದು ಶ್ಲಾಘನೀಯ. ವಿ.ಸೀ. ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ ಕಾಲೇಜಿನಲ್ಲಿ ಅರ್ಥಪೂರ್ಣ ವಿಚಾರ ಸಂಕಿರಣ ಏರ್ಪಡಿಸಿರುವುದು ಮತ್ತು ಕಾಲೇಜಿನ ಗ್ರಂಥಾಲಯಕ್ಕೆ‘ ವಿ.ಸೀ. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ’ಎAದು ಹೆಸರಿಟ್ಟಿರುವುದು ಸಂತಸ ತಂದಿದೆ. ಇದಕ್ಕೆ ಕಾರಣರಾದ ಎಂ.ಪಿ.ಇ. ಸೊಸೈಟಿಯನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು
ಅಭಿನವದ ನ. ರವಿಕುಮಾರ್ ಬೆಂಗಳೂರು ಮಾತನಾಡಿ, ವಿ.ಸೀ. ಅವರಕಾವ್ಯ ಮನುಷ್ಯತ್ವದ ಒಂದು ಘನತೆ ಮತು ್ತಆರ್ದ್ರತೆಗಳನ್ನು ಎತ್ತಿ ಹಿಡಿಯುತ್ತದೆ. ನಾಗರಾಜ ಹೆಗಡೆ ಅಪಗಾಲರು ಹೊನ್ನಾವರ ಮಣ್ಣಿಗೆ ಕಾರುಣ್ಯದ ಕಣ್ಣು ನೀಡಿ ವಿ.ಸೀ. ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ. ಇದು ನಿರಂತರವಾಗಿ ನಡೆಯಲಿ ಎಂದರು.
ವಿ.ಸೀ. ಅವರ ಮೊಮ್ಮಗ ಸುನೀಲ್ ಮಾತನಾಡಿ, ನಮ್ಮ ತಾತನದ್ದು ಕರುಣೆಯ ಹೃದಯ. ಸೈರಣೆಯೇ ಅವರ ಬಾಳಿನ ಮಂತ್ರವಾಗಿತ್ತು. ಅಜ್ಜನನ್ನು ಸ್ಮರಿಸಿದ ಪರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
ವೇದಿಕೆಯಲ್ಲಿ ಕೃಷ್ಣಮೂರ್ತಿ ಭಟ್ಟ ಶಿವಾನಿ, ಪ್ರೊ. ಡಿ. ಎಲ್. ಹೆಬ್ಬಾರ, ನರಸಿಂಹ ಪಂಡಿತ, ಡಾ. ಸುರೇಶ್‌ಎಸ್. ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಶಾಂತ ಮೂಡಲಮನೆ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಸುರೇಶ್ ಎಸ್. ವಂದಿಸಿದರು.
More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”