ಭಟ್ಕಳ: ಕಳೆದ ತಿಂಗಳಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲೆಯಾದ ತಮಿಳುನಾಡಿನ ಕೃಷ್ಣಗಿರಿ ಮೂಲದ 68 ವರ್ಷದ ವೆಟ್ಟಪ್ಪ ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಎಂಟು ದಿನಗಳ ಕಾಲ ಸಂರಕ್ಷಿಸಲಾಗಿತ್ತು.
ಪೊಲೀಸರು ಮೃತನ ಸಂಬAಧಿಕರನ್ನು ಹಲವು ಮಾರ್ಗಗಳಿಂದ ಸಂಪರ್ಕಿಸಿ ಮಾಹಿತಿ ನೀಡಿದರೂ, ಯಾರೂ ಮುಂದಕ್ಕೆ ಬಾರದ ಹಿನ್ನೆಲೆ ಮಾನವೀಯ ಹೊಣೆಗಾರಿಕೆಯಿಂದ ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಭಟ್ಕಳದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ಅಂತ್ಯಸAಸ್ಕಾರ ಕಾರ್ಯವನ್ನು ಸಮಾಜಸೇವಕ ಮಂಜು ನಾಯ್ಕ ಮುಟ್ಟಳ್ಳಿ, ನಗರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ದೇವು ನಾಯ್ಕ ಹಾಗೂ ಪುರಸಭೆಯ ಪೌರಕಾರ್ಮಿಕರ ಸಹಾಯದಿಂದ ನೆರವೇರಿಸಲಾಯಿತು. ಈ ವೇಳೆ ಲೈಫ್ ಕೇರ್ ಅಂಬುಲೆನ್ಸ್ ಚಾಲಕ ವಿನಾಯಕ ನಾಯ್ಕ, ಪೌರಕಾರ್ಮಿಕ ಹನುಮಾ, ಪೊಲೀಸ್ ಸಿಬ್ಬಂದಿ ಮಾಂತೇಶ್ ಪಮ್ಮಾರ್ ಮತ್ತು ವೀರಣ್ಣ ಬಳ್ಳಾರಿ ಉಪಸ್ಥಿತರಿದ್ದರು.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ