ಹೊನ್ನಾವರ : ಬಡಗುತಿಟ್ಟಿನ ಶೇಷ್ಠ ಕಲಾವಿರಲ್ಲಿ ಒರ್ವರಾದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಯಕ್ಷಾನುಭವನ ಕಥನ “ಯಕ್ಷಚಂದ್ರ” ಕೃತಿಯಲ್ಲಿ ಯಕ್ಷಗಾನ ಕಲಾವಿದರಿಗೆ ಅವಮಾನ ಆಗುವ ರೀತಿ ಪ್ರಕಟವಾಗಿದೆ. ಕಾನೂನು ಮೂಲಕ ಹೋರಾಟಕ್ಕೂ ಮೊದಲು, ಪುಸ್ತಕದಲ್ಲಿ ಬರೆದ ವಿಷಯಕ್ಕೆ ಚರ್ಚೆಗೆ ಬನ್ನಿ ಎಂದು ಕಲಾವಿದರು ಕಲಾಪ್ರೇಮಿಗಳು ಸವಾಲು ಹಾಕಿದ್ದಾರೆ.

ಹೊನ್ನಾವರ ಪಟ್ಟಣದ ಖಾಸಗಿ ಹೊಟೇಲನಲ್ಲಿ ಯಕ್ಷಗಾನ ಕಲಾವಿದರು, ಹಾಗೂ ಕಲಾಪ್ರೇಮಿಗಳು ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಯಕ್ಷಗಾನ ಅಕಾಡೆಮಿಯ ಸದಸ್ಯ ವಿದ್ಯಾಧರ ಜಲವಳ್ಳಿ ಮಾತನಾಡಿ ಕಳೆದ ಒಂದು ತಿಂಗಳಿನಿAದ ಯಕ್ಷ ಚಂದ್ರ ಪುಸ್ತಕದ ವಿವಾದ ಚರ್ಚೆ ಹುಟ್ಟು ಹಾಕಿದೆ. ಕೊಂಡದಕುಳಿಯವರ ವೈಯಕ್ತಿಕ ವಿರೋಧಿಗಳು ನಾವಲ್ಲ. ಆದರೆ ಅವರಿಂದ ಪ್ರಕಟವಾದ ಪುಸ್ತಕದ ವಿಚಾರಕ್ಕೆ ನಮ್ಮ ವಿರೋಧ ಇದೆ. ಜಿಲ್ಲೆಯ ಪ್ರಸುತ್ತ ಯಕ್ಷಾಗನದ ಲೆಜೆಂಡ್ ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ಅಂದರೆ ತಪ್ಪಾಗಲಾರದು. ಪುಸ್ತಕವು ಮುಂದಿನ ತಲೆಮಾರಿಗೆ ದಾರಿದೀಪವಾಗಬೇಕು. ಈ ಬೆಳವಣೆಗೆಯಿಂದ ಕಲಾ ಪ್ರಪಂಚಕ್ಕೆ ತಪ್ಪು ಸಂದೇಶ ಹೋಗಿದೆ. ನಮ್ಮನ್ನು ಅಗಲಿದ ಮೇರು ಕಲಾವಿದರ ಬಗ್ಗೆ ಬೌದ್ದಿಕ ಮಟ್ಟದ ಕುಸಿತವನ್ನು ತೋರಿಸುತ್ತದೆ. ಹೆಸರಾಂತ ಕಲಾವಿದರನ್ನು ಕೀಳಾಗಿ ತೋರಿಸಿದ್ದಾರೆ. ಈ ಪುಸ್ತಕವು ಕೊಂಡದಕುಳಿ ಬದುಕಿಗೊಂದು ಕಪ್ಪು ಚುಕ್ಕೆಯಾಗಿದ್ದು,
ಮುಂದಿನ ದಿನದಲ್ಲಿ ತಪ್ಪು ಒಪ್ಪದೇ ಹೊದರೆ, ಕಾನೂನು ರೀತಿಯಲ್ಲಿಯೂ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಕೆರಮನೆ ಶಿವಾನಂದ ಹೆಗಡೆ ಮಾತನಾಡಿ ಸಾಧನೆ ಮಾಡಿದ ಕಲಾವಿದರನ್ನು ಕೇವಲವಾಗಿ ಬಿಂಬಿಸಲಾಗಿದೆ. ಕಲಾವಿದರ ಪಾತ್ರ ನಿರ್ವಹಣೆ, ವೈಯಕ್ತಿಕ ಬದುಕಿನಲ್ಲಿ ತಪ್ಪು ತಿಳುವಳಿಕೆಯ ರೂಪದಲ್ಲಿ ಪುಸ್ತಕದಲ್ಲಿ ಬರೆಯಲಾಗಿದೆ. ಪುಸ್ತಕದ್ದುದ್ದಕ್ಕೂ ಚಿತ್ರ ವಿಚಿತ್ರವಾದ ಆರೋಪವಿದೆ. ಅವರು ಒಳಗೆ ಇಷ್ಟೊಂದು ಬೇಗುದಿ ಇತ್ತು ಎಂದು ಪುಸ್ತಕ ಬಿಡುಗಡೆ ಬಳಿಕ ಅರಿವಾಗಿದ್ದು,
ಕಲಾವಿದ ಯಾವ ಮಟ್ಟಕ್ಕೆ ತಮ್ಮ ಪರಂಪರೆಯ ಬಗ್ಗೆ ಇಳಿಯಬಹುದು ಎನ್ನುವುದನ್ನು ಈ ಪುಸ್ತಕ ಬಿಡುಗಡೆ ಮಾಡುವ ಮೂಲಕ ತೋರಿಸಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಪತ್ರಕರ್ತ ಬಿ ಗಣಪತಿ ಮಾತನಾಡಿ ಹಾಲಿನಲ್ಲಿ ಬಡಿಸಿ ಮೂತ್ರದಲ್ಲಿ ಕೈ ತೊಳೆಸಿದ ಹಾಗೆ ಯಕ್ಷಚಂದ್ರ ಪುಸ್ತಕದ ಬಗ್ಗೆ ವಿಮರ್ಶೆ ಮಾಡಬಹುದು. ನಿಮ್ಮ ಪ್ರತಿ ಆರೋಪಕ್ಕೆ ನಾವು ಚರ್ಚೆಗೆ ಬರಲು ಸಿದ್ದವಿರುವುದಾಗಿ ಸವಾಲು ಹಾಕಿದರು. ಮೇರು ಕಲಾವಿದರಾಗಿ ತಮ್ಮ ವ್ಯಕ್ತಿತ್ವವನ್ನು ಪಾತಾಳಕ್ಕೆ ಕಳೆದುಕೊಂಡು ಹೋಗಿವುದಕ್ಕೆ ತಾವೆ ತೋರಿಸಿಕೊಟ್ಟಿರಿ. ಚರಿತ್ರೆ ಮತ್ತು ಪರಂಪರೆಗೆ ಭವಿಷ್ಯದಲ್ಲಿ ಉಂಟಾಗುವ ಅನಾಹುತದ ಸೂಚನೆ ಇದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಲಾವಿದ ಶಂಕರ ಹೆಗಡೆ ನಿಲ್ಕೋಡ್ ಸುಬ್ರಹ್ಮಣ್ಯ ಯಲಗುಪ್ಪಾ ನ್ಯಾಯವಾಧಿ ಸತೀಶ ಭಟ್ ಉಳ್ಗರೆ ಕಲಾವಿದರ ಬಗ್ಗೆ ಪುಸ್ತಕದಲ್ಲಿ ಬರೆದಿರುವುದನ್ನು ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿದರು.
ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಜಿ.ಎಲ್.ಹೆಗಡೆ, ಭಾಗವತರಾದ ಸುರೇಂದ್ರ ಪಣಿ ಗೋಪಾಲಕೃಷ್ಣ ಭಾಗವತ, ಎಂ.ಆರ್.ನಾಯ್ಕ, ಅಂಕಣಕಾರರಾದ ನಾರಾಯಣ ಯಾಜಿ ಕಲಾವಿದರು, ಕಲಾಭಿಮಾನಿಗಳು ಇದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ