November 19, 2025

ಭಟ್ಕಳದ ಜಯ್ ಡಿ. ಚಿತ್ರರಂಗದ ಹಾದಿಯಲ್ಲಿ ಗುರುತು ಮೂಡಿಸಿದ ಯುವ ಪ್ರತಿಭೆ,ಮಣ್ಕುಳಿಯಿಂದ ಸ್ಯಾಂಡಲ್‌ವುಡ್‌ಗೆ ಜಯ್ ಡಿ. ಭಟ್ಕಳ ಸಿನಿ ಕನಸು ಸಾಕಾರ

ಭಟ್ಕಳ: ಭಟ್ಕಳ ಮೂಲದ ಯುವ ಪ್ರತಿಭೆ ಜಯ್ ಡಿ. ಭಟ್ಕಳ (ಜಗ್ಗು ನಾಯ್ಕ) ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಗುರುತು ಮೂಡಿಸಿಕೊಂಡಿದ್ದಾನೆ. 2018 ರಲ್ಲಿ ಕುಸುಮ ಕಲಾ ಸಿನಿಮಾದಲ್ಲಿ ಸಹಾಯಕ ಬರಹಗಾರರಾಗಿ ಮೊದಲ ಹೆಜ್ಜೆ ಇಟ್ಟ ಜಯ್.ಡಿ., 2021ರಲ್ಲಿ ಬಿಡುಗಡೆಯಾದ ಮಚ್ಚಾ ನೀನ್ ಬದ್ದುಬ್ಬೇಕ ಟೆಲಿಫಿಲ್ಮ್ ಮೂಲಕ ನಿರ್ದೇಶಕ ಮತ್ತು ನಟನಾಗಿ ತನ್ನ ಸಾಮರ್ಥ್ಯವನ್ನು ತೋರಿದ್ದಾನೆ.
ಮಣ್ಕುಳಿಯ ಮೂಲದ ಜಯ್.ಡಿ. ಪ್ರಸ್ತುತ ಬೆಂಗಳೂರಿನ ಜಿ.ಕೆ.ಡಬ್ಲ್ಯೂ ಲೇಔಟ್‌ನಲ್ಲಿ ವಾಸವಿದ್ದು, ಸಿನಿಮಾ ಲೋಕದ ಮೇಲಿನ ತನ್ನ ಆಸಕ್ತಿಯನ್ನು ಕಾಪಾಡಿಕೊಂಡಿದ್ದಾನೆ. ಇದುವರೆಗೆ ಜಾರುಬಂಡೆ (2021), ರಂಗಿನ ರಾಟೆ (2022), ಬ್ಲ್ಯಾಕ್ ಶೀಪ್ (2022), ಥಾಣೆ (2023), ಸಿ (2023), ತದ್ವಿರುದ್ಧ (2024), ರಾವೆನ್ (2024-2026), ಮಾಸ್ಕ್ (2025-2026) ಸೇರಿ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕ ಹಾಗೂ ತಾಂತ್ರಿಕ ತಂಡದ ಸದಸ್ಯನಾಗಿ ಕೆಲಸ ಮಾಡಿದ್ದಾರೆ. ಮಾಸ್ಕ್, ರಾವೆನ್ ಮತ್ತು ತದ್ವಿರುದ್ಧ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶನದ ಜೊತೆಗೆ ಅಭಿನಯವೂ ಮಾಡಿದ್ದಾರೆ, ಇನ್ನಷ್ಟೇ ಬಿಡುಗಡೆ ಆಗಬೇಕಿದೆ..
ಇತ್ತೀಚೆಗೆ ಖ್ಯಾತ ನಿರ್ದೇಶಕ ಶಶಾಂಕ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಬ್ರ‍್ಯಾಟ್ನಲ್ಲಿ ಸಹಾಯಕ ನಿರ್ದೇಶಕರಾಗಿ ಅವಕಾಶ ಪಡೆದ ಜಯ್.ಡಿ., ಈ ಚಿತ್ರ ಅಕ್ಟೋಬರ್ 31, 2025ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಚಿತ್ರರಂಗದಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಮುಂದುವರಿಯುತ್ತಿರುವ ಈ ಯುವ ಪ್ರತಿಭೆಗೆ ತವರೂರಿನ ಜನರು ಹಾಗೂ ಅಭಿಮಾನಿಗಳು ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸುತ್ತಿದ್ದಾರೆ.

About The Author

error: Content is protected !!