ಸಾಮಾಜಿಕ ನ್ಯಾಯದ ಪ್ರತಿಪಾದನೇಯ ದಿಮಂತ ನಾಯಕ- ರವೀಂದ್ರ ನಾಯ್ಕ

ಶಿರಸಿ : ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ದಿಮಂತ ನಾಯಕರಾದ ದಿ. ಬಂಗಾರಪ್ಪನವರ 93 ನೇ ಹುಟ್ಟು ಹಬ್ಬವು ಜಿಲ್ಲಾದ್ಯಂತ ಅವರ ಸಾಧನೆಯ ಕಾರ್ಯ ಸಂಭ್ರಮಿಸುವ ದಿನಗಳಾಗಿವೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು.
ಅವರು ದಿವಂಗತ ಬಂಗಾರಪ್ಪನವರ 93 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಸಾಮಾಜಿಕ ಕಳಕಳಿ, ಭೂಮಿ ಹೋರಾಟ ಮತ್ತು ಸಾಮಾಜಿಕ ನ್ಯಾಯದ ಕಾರ್ಯವನ್ನು ನೆನಪಿಸುತ್ತಾ ಅವರ ಹುಟ್ಟು ಹಬ್ಬದ ದಿನದಂದು ಅವರ ಸಾಧನೆಯನ್ನು ಸ್ಮರಿಸಿದರು.ಮುಖ್ಯಮಂತ್ರಿ ಇರುವಾಗ ಕಾರವಾರಕ್ಕೆ ಬಂದ ಸಂದರ್ಭದಲ್ಲಿ ಕೋಮಾರಪಂತ, ಹಿಂದುಳಿದ ವರ್ಗಗಳ ಚೆನ್ನಪ್ಪ ರೆಡ್ಡಿ ಆಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿಂದುಳಿದ ಮೀಸಲಾತಿ ಪಟ್ಟಿಯಿಂದ ತಪ್ಪಿರುವ ಪಡ್ತಿ, ಗುಣಗಿ, ಕುಳವಾಡಿ ಮರಾಠಿ, ಶೇರುಗಾರ ಜಾತಿಗಳಿಗೆ ಮೀಸಲಾತಿ ವಂಚಿತವಾಗಿರುವುದನ್ನು ಅವರ ಗಮನಕ್ಕೆ ತಂದಾಗ, ತಕ್ಷಣ ಜಿಲ್ಲೆಯಿಂದ ಮೀಸಲಾತಿ ವಂಚಿತ ಜಾತಿಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿರುವ ಕಾರ್ಯ ವಿಶೇಷವೆಂದು ಅವರು ನೆನಪಿಸಿದರು. ಉತ್ತರಕನ್ನಡ ಜಿಲ್ಲೆಯ ಗುಡ್ಡಗಾಡು ಬುಡಕಟ್ಟು ಜನಾಂಗಗಳಾದ ಹಾಲಕ್ಕಿ, ಕುಣಬಿ, ಗೌಳಿ ಮುಂತಾದ ಸಮಾಜವನ್ನ ಬುಡಕಟ್ಟು ಪಂಗಡಕ್ಕೆ ಸೇರಿಸುವುದಕ್ಕೆ ಪ್ರತಿಪಾಧನೆ ಮಾಡಿರುವುದು ಗಮನಾರ್ಹ ಅಂಶ ಎಂದು ಅವರು ಈ ಸಂಧಭ್ದಲ್ಲಿ ನೆನಪಿಸಿದರು.
ಅರಣ್ಯ ಪ್ರದೇಶದಲ್ಲಿ ಆಶ್ರಯ ಪಟ್ಟ;
ತಲಾ ತಲಾಂತರದಿAದ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಮಾಡಿಕೊಂಡ ಅರಣ್ಯವಾಸಿಗಳ ವಾಸ್ತವ್ಯಕ್ಕಾಗಿ ಮನೆಗಾಗಿ ಆಶ್ರಯ ಪಟ್ಟ ನೀಡಿರುವುದು ಅವರ ರಾಜಕೀಯ ಹಿತಾಸಕ್ತಿಗೆ ಪೂರಕವಾಗಿದೆ. ಎಂದು ಹೇಳುತ್ತಾ ಅರಣ್ಯವಾಸಿಗಳ ಪರವಾದ ದಿವಂಗತ ಬಂಗಾರಪ್ಪ ಅವರ ಕಾರ್ಯವನ್ನ ಶ್ಲಾಘಿಸಿದರು. ಅವರು ನೀಡಿದಂತ ಅರಣ್ಯ ಪ್ರದೇಶದ ಆಶ್ರಯ ಪಟ್ಟಕ್ಕೆ ತದನಂತರದ ರಾಜಕೀಯ ವ್ಯವಸ್ಥೆಯು ಇಂದಿನವರೆಗೂ ಕೇಂದ್ರ ಸರ್ಕಾರದ ಅನುಮತಿ ನೀಡದಿರುವುದು ವಿಷಾಧಕರವೆಂದು ಈ ಸಂದರ್ಭದಲ್ಲಿ ರವೀಂದ್ರ ನಾಯ್ಕ ಪ್ರತಿಪಾದಿಸಿದರು.

More Stories
ಡಿ.೬ಕ್ಕೆ ನಮ್ಮನೆ ಹಬ್ಬ, ಪ್ರಶಸ್ತಿ ಪ್ರದಾನ, ಚಿತ್ರನಟ ದೊಡ್ಡಣ್ಣ ಚಾಲನೆ. ‘ವಂದೇ ಗೋವಿಂದಮ್’ ಯಕ್ಷ ರೂಪಕ ಲೋಕಾರ್ಪಣೆ
ಪದವೀಧರರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಆಹ್ವಾನ
ನೂತನ ಅಧ್ಯಕ್ಷರಾಗಿ ಶಿವರಾಮ ಕೃಷ್ಣ ಸಂಗುಮನೆ ಉಪಾಧ್ಯಕ್ಷರಾಗಿ ಹರೀಶ ತಿಮ್ಮಪ್ಪ ಗೌಡ