November 19, 2025

ಮಳೆಯಲ್ಲೆ ಸಾವಿರಾರು ಸ್ವಯಂ ಸೇವಕರಿಂದ ಹೊನ್ನಾವರದಲ್ಲಿ ನಡೆದ ಪಥ ಸಂಚಲನ

ಹೊನ್ನಾವರ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ ಹೊನ್ನಾವರದಲ್ಲಿ ಸಹಸ್ರಾರು ಗಣವೇಷಧಾರಿ ಸ್ವಯಂ ಸೇವಕರು ಪಥ ಸಂಚಲನ ನಡೆಸಿ ಗಮನ ಸೆಳೆದರು.

ಪಥ ಸಂಚಲನವು ಸೆಂಥ್ ಥಾಮಸ್ ಮೈದಾನದಿಂದ ನಗರದೇವಿ ದಂಡಿನ ದುರ್ಗಾ ದೇವಸ್ಥಾನದ ಮುಂಭಾಗದಿAದ ಬಜಾರ್ ರಸ್ತೆ ಮಾಸ್ತಿಕಟ್ಟೆ ಮಾರ್ಗದಲ್ಲಿ ಶರಾವತಿ ವೃತ್ತ, ಬಸ್ ನಿಲ್ದಾಣ ಮುಂಭಾಗದಿAದ ಶನಿದೇವಸ್ಥಾನದ ಎದುರಿಗೆ ಬಂದು ಸಂಪನ್ನಗೊAಡಿತು.

ಪಥ ಸಂಚಲನ ನೋಡಲು ಮಹಿಳೆಯರು, ಮಕ್ಕಳು ಹಾಗೂ ಯುವಕರು ರಸ್ತೆ ಎರಡು ಬದಿಗಳಲ್ಲಿ ಜಮಾಯಿಸಿದ್ದರು. ಹಲವು ಕಡೆ ಸಾರ್ವಜನಿಕರು ಹೂವುಗಳನ್ನು ಸ್ವಯಂ ಸೇವಕರ ಮೇಲೆ, ಭಗವಾಧ್ವಜ, ಹಾಗೂ ಭಾರತ ಮಾತೆಗೆ, ಡಾ.ಗುರೂಜಿ, ಡಾ.ಹೆಡ್ಗೆವಾರ್ ಅವರ ಭಾವಚಿತ್ರಕ್ಕೆ ಹೂವು ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಮೆರವಣಿಗೆಯಲ್ಲಿ ಭಾರತ ಮಾತಾ ಕೀ ಜೈ ಸೇರಿ ಮಹಾಪುರುಷರ ಘೋಷಣೆಗಳು ಮೊಳಗಿದವು. ಜೆ ಸಿ ಬಿ ಮೂಲಕ ಪುಷ್ಪರ್ಚನೆ ಮಾಡಿದ್ದು ವಿಶೇಷ ವಾಗಿತ್ತು. ಕೊನೆಯಲ್ಲಿ ಶನಿ ದೇವಸ್ಥಾನದ ಎದುರು ಸಂಪನ್ನ ಗೊಂಡಿತು.

ಪಥ ಸಂಚಲನ ಸಾಗುವ ರಸ್ತೆಗಳು ಕೇಸರಿ ಪತಾಕೆಯಿಂದ ಅಲಂಕರಿಸಲಾಗಿತ್ತು. ಅಲ್ಲಲ್ಲಿ ಭಾರತಾಂಬೆಯ ಭಾವಚಿತ್ರಗಳನ್ನಿಟ್ಟು ಪೂಜಿಸುವುದು ಕಂಡುಬAತು. ಮನೆಗಳ ಮುಂದೆ ರಂಗೋಲಿ ಬಿಡಿಸಿ ಅಂದ ಹೆಚ್ಚಿಸಿದ್ದರು.

ಸಂಚಲನದಲ್ಲಿ ವಿಭಾಗ ಸಂಘ ಚಾಲಕರಾದ ರಾಮಚಂದ್ರ ಕಾಮತ, ಪ್ರಚಾರಕರಾದ ಗಣೇಶ ಜಿ ಶಾಸಕರಾದ ದಿನಕರ ಕೆ ಶೆಟ್ಟಿ, ಬಿ ಜೆ ಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ, ಪ್ರಮುಖರಾದ ನಾಗೇಶ ಕಾಮತ, ವಿ ಡಿ ಭಟ್, ವಿಶ್ವನಾಥ ನಾಯಕ, ಸಂಜು ಶೇಟ, ರಾಮಾ ಜಾಲಿ, ಪಟ್ಟಣ ಪಂಚಾಯತ ಅಧ್ಯಕ್ಷ ವಿಜು ಕಾಮತ, ಶಿವರಾಜ ಮೇಸ್ತ, ರಾಜು ಭಂಡಾರಿ ಸೇರಿದಂತೆ ಸಂಘಟನೆಯ ಹಿರಿಯ ಕಿರಿಯ ಕಾರ್ಯಕರ್ತರು ಮೆರವಣೆಗೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್, ಹೊನ್ನಾವರ

About The Author

error: Content is protected !!