
ಭಟ್ಕಳ : ಇಲ್ಲಿನ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ದಿನಾಂಕ 26.10.2025 ಭಾನುವಾರದಂದು ಮೂಡಬೀದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಅಬಾಕಾಸ್ ಮೆಂಟಲ್ ಅರ್ಥ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಇಲ್ಲಿನ ವಿದ್ಯಾರ್ಥಿಗಳಾದ 7 ನೇ ತರತಿಯ ಕುಮಾರಿ.ಯಶಿಕ ಆರ್ ನಾಯ್ಕ ಇವರು ತೃತೀಯ ಸ್ಥಾನವನ್ನು ಪಡೆದಿದ್ದು, 4 ನೇ ತರಗತಿಯ ಕುಮಾರ ರಿಷಭ್ ಆರ್ ನಾಯ್ಕ ಪ್ರಥಮ ಸ್ಥಾನ ಹಾಗೂ 5 ನೇ ತರಗತಿಯ ವಿದ್ಯಾರ್ಥಿಯಾದ ಪ್ರಥಮ್ ಈಶ್ವರ ನಾಯ್ಕ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಮಾನ್ಯ ಸಚಿವರು ಮೀನುಗಾರಿಗೆ, ಬಂದರು ಒಳನಾಡು ಜಲಸಾರಿಗೆ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಮಂಕಾಳ್ ಎಸ್ ವೈದ್ಯರವರು, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಆಡಳಿತ ನಿರ್ದೇಶಕಿಯವರಾದ ಡಾ.ಪುಷ್ಪಲತಾ ಮಂಕಾಳ್ ವೈದ್ಯರವರು, ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.




More Stories
ಉಚಿತ ಕಿಡ್ಸ್ ಕಂಪ್ಯೂಟರ್ ತರಬೇತಿ
ಮುರ್ಡೇಶ್ವರ ಠಾಣಾ ವ್ಯಾಪ್ತಿಯ ಇಬ್ಬರು ರೌಡಿಶೀಟರ್ಗಳಿಗೆ 6 ತಿಂಗಳ ಗಡಿಪಾರು
ಮುರ್ಡೇಶ್ವರ ದೇವಸ್ಥಾನದಲ್ಲಿ ಸರಗಳ್ಳತನ: ಅಂತರ ಜಿಲ್ಲಾ ಆರೋಪಿತಳ ಬಂಧನ