November 19, 2025

ಮಾದಕ ವ್ಯಸನಿಗಳಿಗೆ ಶಾಕ್ ನೀಡಿದ ಗ್ರಾಮೀಣ ಠಾಣೆ ಪೊಲೀಸರು: ಮೂವರ ಬಂಧನ

ಭಟ್ಕಳ: ತಾಲೂಕಿನ ವೆಂಕಟಾಪುರ ಮೈದಾನ ಹಾಗೂ ಪೆಟ್ರೋಲ್ ಬಂಕ ಹತ್ತಿರ ಗಾಂಜಾ ಸೇವನೆ ಮಾಡಿದ ಅಮಲಿನಲ್ಲಿ ಸಾರ್ವಜನಿಕವಾಗಿ ಅಸಹಜವಾಗಿ ವರ್ತಿಸುತ್ತಿದ್ದ ಮೂವರು ಯುವಕರು ಭಟ್ಕಳ ಗ್ರಾಮೀಣ ಪೊಲೀಸರ ಬಲೆಗೆ ಸಿಕ್ಕಿದ್ದಾರೆ.

ಮಾದಕ ವಸ್ತು ಸೇವನೆ ಮಾಡುತ್ತಿದ್ದ ಆರೋಪಿಗಳೆಂದರೆ ಅಸ್ಲಾಂ ಬೆಟಗೇರಿ ತಂದೆ ಅಬ್ದುಲ್ ಸತ್ತಾರ,ಜಾಲಿ ಶಿರಕುಳಿ ಹೊಂಡ,ಜಾವಿದ್ ತಂದೆ ಮೆಹಬೂಬ್ ಅಲಿ,ಜಾಲಿ ದೇವಿನಗರ,ಮೊಹಮ್ಮದ್ ಆಬೀದ್ ತಂದೆ ಸೈಯದ್ ರಸೀದ್ ಬಿಳಲಖಂಡ ಗುಳ್ಮೆ ಎಂದು ಗುರುತ್ತಿಸಲಾಗಿದೆ.ಇವರು ಮೂವರೂ ವಿಭಿನ್ನ ಸಮಯಗಳಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ವಿಚಾರಣೆ ವೇಳೆ ಮೂವರೂ ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲೂ ಗಾಂಜಾ ಸೇವನೆ ದೃಢಪಟ್ಟಿದೆ.ಈ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ಸಿ.ಪಿ.ಐ ಮಂಜುನಾಥ ಅಂಗಾರೆಡ್ಡಿ ಹಾಗೂ ಪಿಎಸೈ ಭರಮಪ್ಪ ಬೆಳಗಲಿ ಸರ್ಕಾರದ ಪರವಾಗಿ ಪ್ರಕರಣ ದಾಖಲಿಸಿದ್ದಾರೆ.

About The Author

error: Content is protected !!