November 19, 2025

ಭಟ್ಕಳ ತಾಲೂಕಾ ಮಡಿವಾಳ ಮಾಚಿದೇವ ಸಂಘ ಅಸ್ತಿತ್ವಕ್ಕೆ

ಭಟ್ಕಳ: ತಾಲೂಕಿನ ಮಡಿವಾಳ ಸಮಾಜದ ಹಿರಿಯರ ಉಪಸ್ಥಿತಿ ಹಾಗೂ ಸಾಹಿತಿ- ಶಿಕ್ಷಕರಾದ ಶ್ರೀಧರ ಶೇಟರವರ ಮಾರ್ಗದರ್ಶನದಲ್ಲಿ ಭಟ್ಕಳ ತಾಲೂಕಾ ಮಡಿವಾಳ ಮಾಚಿದೇವ ಸಂಘ ಅಸ್ತಿತ್ವಕ್ಕೆ ಬಂದಿದೆ.

ಗೌರವಾಧ್ಯಕ್ಷರಾಗಿ ವೆಂಕಟೇಶ ನಾರಾಯಣ ಮಡಿವಾಳ,ಅಧ್ಯಕ್ಷರಾಗಿ ರಮೇಶ ದೇವಪ್ಪ ಮಡಿವಾಳ ಶಿರಾಲಿ, ಉಪಾಧ್ಯಕ್ಷರಾಗಿ ವಿಶ್ವನಾಥ ಮಡಿವಾಳ , ಕೆ ಬಿ. ಮಡಿವಾಳ, ಶ್ರೀಮತಿ ಮಮತಾ ಭಟ್ಕಳ, ರಾಘವೇಂದ್ರ ಮಡಿವಾಳ ಮತ್ತು ಕೃಷ್ಣಾನಂದ ಶಿರಾಲಿಯವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಿತ್ಯಾನಂದ ಟಿ.ಎಸ್.,ಸಹ ಕಾರ್ಯದರ್ಶಿಯಾಗಿ ಸಂತೋಷ ಪಿ. ಮಡಿವಾಳ, ಖಜಾಂಚಿಯಾಗಿ ರಾಜೇಶ ವಿ. ಮಡಿವಾಳ,ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ ಮಡಿವಾಳ ಮತ್ತು ಸದಸ್ಯರಾಗಿ ಸುಬ್ರಹ್ಮಣ್ಯ ಮಡಿವಾಳ ಬಸ್ತಿ, ಗೋವಿಂದರಾಯ ಮಡಿವಾಳ ಭಟ್ಕಳ, ರಮೇಶ ಭೋಮಕರ, ವಿಜಯಕುಮಾರ ಆರ್. ಮಡಿವಾಳ ಶಿರಾಲಿ, ಮಂಜುನಾಥ ಮಡಿವಾಳ ಅಗ್ಲೋಳೆ, ಗಣಪತಿ ಮಡಿವಾಳ ಮಾವಿನಕಟ್ಟೆ,ಮಂಜುನಾಥ ಮಡಿವಾಳ ಭಟ್ಕಳ, ಶಂಕರ ನಾರಾಯಣ ಮಡಿವಾಳ ಶಿರಾಲಿ, ಪ್ರದೀಪ ಗಣಪತಿ ಮಡಿವಾಳ, ಗಜಾನನ ಮಡಿವಾಳ ಬೈಲೂರ,ವಸಂತ ಮಡಿವಾಳ ಭಟ್ಕಳ, ಬಾಲಕೃಷ್ಣ ಮಡಿವಾಳ ಭಟ್ಕಳ ಹಾಗೂ ಮಾರ್ಗದರ್ಶಕರಾಗಿ ಮಂಜುನಾಥ ನಾಗಪ್ಪ ಮಡಿವಾಳ ಕೆರೆಮನೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಭಟ್ಕಳ ತಾಲೂಕಿನ ವಿವಿಧ ಊರುಗಳಿಂದ ಬಂದ ಮಡಿವಾಳ ಸಮಾಜದವರು ಉಪಸ್ಥಿತರಿದ್ದರು.

About The Author

error: Content is protected !!