ಭಟ್ಕಳ: ತಾಲೂಕಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ನಡೆದ ದಾಳಿಯಲ್ಲಿ ಇಬ್ಬರು ಓ.ಸಿ. ಮಟಕಾ ಬುಕ್ಕಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.


ಮೊದಲು ಘಟನೆಯಲ್ಲಿ ಸರ್ಪನಕಟ್ಟಾ ಕೋಣಾರ ರಸ್ತೆಯಲ್ಲಿರುವ ಮಾಡರ್ನ್ ಪೇಂಟಿAಗ್ ಅಂಗಡಿ ಎದುರು ಸಾರ್ವಜನಿಕ ಸ್ಥಳದಲ್ಲಿ ಓ.ಸಿ. ಜೂಜಾಟ ನಡೆಸುತ್ತಿದ್ದ ಗಣಪತಿ ತಂದೆ ದೇವೇಂದ್ರ ನಾಯ್ಕ ತಲಾಂದ ಹಾಗೂ ಬುಕ್ಕಿ ಅಶೋಕ ತಂದೆ ನಾರಾಯಣ ನಾಯ್ಕ ಯಲ್ವಡಿಕವೂರ ಬಂಧಿತರಾಗಿದ್ದಾರೆ. ಅವರಿಂದ ರೂ.640 ನಗದು ಹಾಗೂ ಓ.ಸಿ. ಚೀಟಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.


ಇನ್ನೊಂದು ಘಟನೆಯಲ್ಲಿ ಶಿರಾಲಿ ಜಂಕ್ಷನ್ ರಸ್ತೆಯಲ್ಲಿ ಇದೇ ರೀತಿಯ ಜೂಜಾಟ ನಡೆಸುತ್ತಿದ್ದ ಜಯರಾಜ ತಂದೆ ಮಂಜುನಾಥ ಮೊಗೇರ್ (ಶಿರಾಲಿ ಅಳ್ವೆಕೊಡಿ) ಹಾಗೂ ಬುಕ್ಕಿ ದೇವೇಂದ್ರ ತಂದೆ ಮಂಜುನಾಥ ನಾಯ್ಕ (ಶಿರಾಲಿ ಅಳ್ವೆಕೊಡಿ) ಬಂಧಿತರಾಗಿದ್ದು, ಅವರಿಂದ ರೂ. 440 ನಗದು ಹಾಗೂ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ ಅಂಗಾರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ