ಕೆ ಆರ್ ಪೇಟೆ : ಮೈಸೂರಿನ ಜೂನಿಯರ್ ಪುನೀತ್ ರಾಜಕುಮಾರ್, ಯುವ ದಸರಾದಲ್ಲಿ ತಮ್ಮ ನೃತ್ಯದ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಸ್ಟಾರ್ ಪುಣ್ಯ, ಪ್ರಗತಿಪರ ಕೃಷಿಕ ವಡಕಹಳ್ಳಿ ಮಂಜೇಗೌಡ, ಮಾತೃ ಭೂಮಿ ಅನಾಥಾಶ್ರಮದ ವ್ಯವಸ್ಥಾಪಕ ಜೈಹಿಂದ್ ನಾಗಣ್ಣ ಹಾಗೂ ಸಾವಿರಾರು ಪುನೀತ್ ಅಭಿಮಾನಿಗಳು ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿರುವ ಪುನೀತ್ ರಾಜಕುಮಾರ್ ಅವರ ಪುತ್ತಳಿಗೆ ವಿಶೇಷ ಪೂಜೆ ಸಲ್ಲಿಸಿ, ಅಪ್ಪು ಯುವ ಸಮಾಜ ಸೇವಾ ಟ್ರಸ್ಟ್ ಆಯೋಜಿಸಿದ್ದ ಸಮಾಜ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಜೂನಿಯರ್ ಪುನೀತ್ ರಾಜಕುಮಾರ್ ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ ತಮ್ಮ ಸಮಾಜ ಸೇವ ಕಾರ್ಯ ಚಟುವಟಿಕೆಗಳ ಮೂಲಕ ನಾಡಿನಾದ್ಯಂತ ಮನೆ ಮಾತಾಗಿದ್ದ ಪುನೀತ್ ರಾಜಕುಮಾರ್ ಒಬ್ಬ ಆದರ್ಶ ವ್ಯಕ್ತಿಯಾಗಿದ್ದು, ಯುವಜನರ ಸಾಧನಾ ಕಾರ್ಯಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ. ಸಮಾಜದಲ್ಲಿ ವಾಸಿಸುವ ನೊಂದವರು ಹಾಗೂ ತುಳಿತಕ್ಕೊಳಗಾದ ಬಡ ಜನರಿಗೆ ಕೈಲಾದ ಸಹಾಯ ಮಾಡುವ ಮೂಲಕ ಭಗವಂತನನ್ನು ಕಾಣುವ ಪ್ರಯತ್ನ ಮಾಡಬೇಕು ಎಂಬ ಸಂದೇಶವನ್ನು ನಾಡಿಗೆ ನೀಡಿದ ಪುನೀತ್ ರಾಜಕುಮಾರ್ ಯುವಜನರು ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜ ಮುಖಿಯಾಗಿ ಹೆಜ್ಜೆ ಹಾಕಬೇಕು. ನಾವು ಸಂಕಷ್ಟದಲ್ಲಿರುವ ವ್ಯಕ್ತಿಗಳನ್ನು ಕಂಡು ಕೈಲಾದ ಸಹಾಯ ಮಾಡಬೇಕೆ ಹೊರತು, ಅವರ ನೋವಿನ ಪರಿಸ್ಥಿತಿಯನ್ನು ಕಂಡು ಅಣಕ ಮಾಡುವ ಕೆಲಸವನ್ನು ಎಂದೆAದಿಗೂ ಮಾಡಬಾರದು ತಂದೆ ತಾಯಿಗಳು ಹಾಗೂ ಗುರು ಹಿರಿಯರನ್ನು ಭಕ್ತಿಭಾವದಿಂದ ಕಂಡು ಸರಳತೆ ಸಜ್ಜನಿಕೆ ಹಾಗೂ ಉತ್ತಮವಾದ ಸಂಸ್ಕಾರವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕು ನಡೆಸಬೇಕು ಎಂಬ ಸಂದೇಶವನ್ನು ನಾಡಿಗೆ ನೀಡಿದ ಪುನೀತ್ ರಾಜಕುಮಾರ್ ಅವರಂತಹ ವ್ಯಕ್ತಿತ್ವ ಹೊಂದಿರುವ ಜನರು ಸಮಾಜದಲ್ಲಿ ಇಂದು ವಿರಳವಾಗುತ್ತಿದ್ದಾರೆ ಎಂದು ಅಭಿಮಾನದಿಂದ ಹೇಳಿದ ಜೂನಿಯರ್ ಪುನೀತ್ ರಾಜಕುಮಾರ್ ಅಭಿಮಾನಿಗಳನ್ನೇ ತಮ್ಮ ದೇವರೆಂದು ನಾಡಿಗೆ ಸಂದೇಶ ನೀಡಿದ ತಾವು ಬದುಕಿದ್ದಷ್ಟು ದಿನಗಳು ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ ಪುನೀತ್ ಅವರ ಜೀವನದ ಆದರ್ಶಗಳು ಯುವಜನರಿಗೆ ದಾರಿದೀಪ ವಾಗಿವೆ ಎಂದು ಹೇಳಿದರು.

ರಾಜರತ್ನ ಪುನೀತ್ ರಾಜಕುಮಾರ್ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಮಂಡ್ಯ ಜಿಲ್ಲಾಧ್ಯಕ್ಷ ವೇಣು ಹಸಿದ ಹೊಟ್ಟೆಗೆ ಅನ್ನ ನೀಡುವ ಕೆಲಸವು ದೇವರು ಮೆಚ್ಚುವ ಕಾರ್ಯವಾಗಿದೆ ಸಮಾಜದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಬಡವ-ಬಲ್ಲಿದ ಎಂಬ ಭೇದಭಾವವಿಲ್ಲದಂತೆ ಸಮಾಜದಲ್ಲಿ ವಾಸಿಸುವ ಎಲ್ಲಾ ಜಾತಿ, ವರ್ಗಗಳ ಜನರು ನೆಮ್ಮದಿಯ ಜೀವನ ನಡೆಸಬೇಕು ಎಂಬ ಹೊಂಗನಸನ್ನು ಹೊತ್ತಿದ್ದ ಪುನೀತ್ ರಾಜಕುಮಾರ್ ಅವರ ಆದರ್ಶ ಗುಣಗಳು ಯುವಶಕ್ತಿಯ ಮುನ್ನಡೆಗೆ ದಾರಿಮಾರ್ಗವಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ವೇಣು ಹೇಳಿದರು. ತಾಲೂಕಿನ ನಾನಾ ಭಾಗಗಳಿಂದ ಆಗಮಿಸಿದ್ದ ಪುನೀತ್ ರಾಜಕುಮಾರ್ ರವರ 10 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ಅನ್ನದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು.

ರಾಜರತ್ನ ಪುನೀತ್ ರಾಜಕುಮಾರ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡೈಮಂಡ್ ಸಂತೋಷ್, ಅಪ್ಪು ಯುವ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ಉಪಾಧ್ಯಕ್ಷ ಹರೀಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಮಹಿಳಾ ನಾಯಕರಾದ ಶಿವಮ್ಮ, ಲೀಲಾವತಿ, ಕರವೇ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ನಿರಂಜನ, ರಾಮೇಗೌಡ, ಕೃಷ್ಣಮೂರ್ತಿ ಸೇರಿದಂತೆ ನೂರಾರು ಪುನೀತ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಒಂದೇ ದಿನ ಪತಿ ಪತ್ನಿಯ ಸಾವು.. ಸಾವಿನಲ್ಲೂ ಒಂದಾದ ದಂಪತಿಗಳು.. ಬೂಕನಕೆರೆ ಗ್ರಾಮದಲ್ಲಿ ನಡೆದಿರುವ ಘಟನೆ..
ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್ ಹೃದಯಾಘಾತದಿಂದ ನಿಧನ ..
ಪಥ ಸಂಚಲನದಲ್ಲಿ ಗಣವೇಶಧಾರಿಯಾಗಿ ಕೈಯಲ್ಲಿ ದಂಡ ಹಿಡಿದು, ಹೆಜ್ಜೆ ಹಾಕಿ ಮಿಂಚಿದ ಮಾಜಿ ಸಚಿವ ಡಾ. ನಾರಾಯಣಗೌಡ..