November 18, 2025

ಭಟ್ಕಳ ವ್ಯಾಪಾರಿಗೆ ನಕಲಿ ಟೆಂಡರ್ ಉರುಲು: ಲಾಭದಾಸೆ ತೋರಿಸಿ 21 ಲಕ್ಷ ರೂ. ವಂಚನೆ ಪ್ರಕರಣ ದಾಖಲು

ಭಟ್ಕಳ: ಟೆಂಡರ್ ನನ್ನ ಹೆಸರಿಗೆ ಬಂದಿದೆ. ಹೂಡಿಕೆ ಮಾಡಿದರೆ ಮೂರರಷ್ಟು ಲಾಭ ಸಿಗುತ್ತದೆ ಎಂದು ನಂಬಿಸಿ ವ್ಯಾಪಾರಿಯೊಬ್ಬರಿಂದ 21 ಲಕ್ಷ ರೂ. ವಂಚಿಸಿದ ಪ್ರಕರಣ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ.

ಸುಲ್ತಾನ್ ಸ್ಟ್ರೀಟ್‌ನ ಕರಿಕಲ್ ಹೌಸ್ ನಿವಾಸಿ ಫಿಯಾದಿ ಮೊಹಮ್ಮದ ಶಬೀ ತಂದೆ ಅಬ್ದುಲ್ ಖಾಧೀರ್ ಕಾಡ್ಲಿ, ಭಟ್ಕಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಬಂದರ ರಸ್ತೆ 1ನೇ ಕ್ರಾಸ್ ನಿವಾಸಿ ಅಸೀಫ್ ಇಕ್ಬಾಲ್ ತಂದೆ ಜಫರುಲ್ಲಾ ಇಕ್ಕೇರಿ, ಬಂದರ ರಸ್ತೆ 1ನೇ ಕ್ರಾಸ್,ಇವರು ಒeಣಡಿo Iಟಿಜಿoಣeಛಿh Pvಣ. ಐಣಜ. ಎಂಬ ಕಂಪನಿಯ ನಕಲಿ ದಾಖಲೆ ತೋರಿಸಿ, 2025ರಲ್ಲಿ ಪ್ರಾಜೆಕ್ಟ್ ಆರಂಭವಾಗಲಿದೆ. 25 ಲಕ್ಷ ರೂ. ಹೂಡಿಕೆ ಮಾಡಿದರೆ ಮೂರರಷ್ಟು ಹಣ ಮರಳುತ್ತದೆ ಎಂದು ನಂಬಿಸಿದ್ದಾನೆ.

ಆರೋಪಿಯು ಮೊದಲು 5 ಲಕ್ಷ, ಬಳಿಕ 2023ರ ಜೂನ್ 19ರಂದು ರೈಲ್ವೇ ನಿಲ್ದಾಣ ಹತ್ತಿರ 13 ಲಕ್ಷ, ನಂತರ 1 ಲಕ್ಷ ಹಾಗೂ 2 ಲಕ್ಷ ರೂ. ಪಡೆದು ಒಟ್ಟು 21 ಲಕ್ಷ ರೂ. ಕಸಿದುಕೊಂಡಿದ್ದಾನೆ. ಆದರೆ ಹಣ ಹಿಂತಿರುಗಿಸದೆ ಮೋಸ ಮಾಡಿರುವುದು ದೂರಿನಲ್ಲಿ ಉಲ್ಲೇಖವಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!