ಕುಮಟಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೊರ್ಕೆಯಲ್ಲಿ 2025-26ನೇ ಸಾಲಿನ ಪ್ರಥಮ ಸಮುದಾಯದತ್ತ ಶಾಲಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾಗಿ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯ ಶಿಕ್ಷಕರಾದ ಶ್ರೀ ಎನ್. ರಾಮು ಹಿರೇಗುತ್ತಿ ರವರು ಆಗಮಿಸಿದ್ದರು. ಅವರು ಶಾಲೆಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಚಟುವಟಿಕೆಗಳನ್ನು ಪರಿಶೀಲಿಸಿ, ಶಾಲೆಯ ಅಭಿವೃದ್ಧಿ ಮತ್ತು ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಊರಿನ ದಾನಿಗಳ ಸಹಕಾರದಿಂದ ಮೂವರು ಶಿಕ್ಷಕರ ನೇಮಕವಾಗಿದ್ದು, ದಾನಿಗಳಿಂದ ನಿರ್ಮಿತ ಅomಠಿuಣeಡಿ ಐಚಿb ಮತ್ತು ಊoಟಿesಣಥಿ Shoಠಿ ವೀಕ್ಷಿಸಿದ ಮಾರ್ಗದರ್ಶಕರು ಹರ್ಷ ವ್ಯಕ್ತಪಡಿಸಿ, ಎಲ್ಲ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಅಪರಾಹ್ನ 2:30 ಗಂಟೆಗೆ ನಡೆದ S.ಆ.ಒ.ಅ / ಪಾಲಕ ಪೋಷಕರ ಸಭೆಯಲ್ಲಿ ಎಲ್ಲಾ ಪಾಲಕರು ಹಾಜರಿದ್ದು, ವಿದ್ಯಾರ್ಥಿಗಳ S.ಂ 1 ಪರೀಕ್ಷೆಯ ಉತ್ತರಪತ್ರಿಕೆಗಳನ್ನು ವೀಕ್ಷಿಸಿದರು.
ಈ ಸಭೆಯಲ್ಲಿ ತೊರ್ಕೆ ಗ್ರಾಮ ಪಂಚಾಯತದ ಅಧ್ಯಕ್ಷರಾದ ಶ್ರೀ ಆನಂದ ನಾಗಪ್ಪ ಕವರಿ ಅವರು ಉಪಸ್ಥಿತರಿದ್ದು, ಸಮುದಾಯ ದತ್ತ ಶಾಲಾ ಕಾರ್ಯಕ್ರಮ ಒಂದು ಒಳ್ಳೆಯ ಪ್ರಯತ್ನ. ಈ ಮೂಲಕ ಶಾಲೆ ಮತ್ತು ಗ್ರಾಮ ಒಂದಾಗಿ ಬೆಳೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಸಾಕಲ್, ತೊರೆಗಝನಿ, ಹೊಸ್ಕಟ್ಟಾ ಪ್ರದೇಶಗಳಿಂದ ನಮ್ಮ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ವಾಹನ ಸೌಕರ್ಯಕ್ಕಾಗಿ ವೈಯಕ್ತಿಕ ಆರ್ಥಿಕ ಸಹಾಯ ನೀಡುವುದಾಗಿ ಘೋಷಿಸಿದರು. ಈ ಘೋಷಣೆಗೆ S.ಆ.ಒ.ಅ, ಪಾಲಕ ಪೋಷಕರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಬೇಬಿ ವಿ. ನಾಯಕ, ಅರುಣ ನಾಗಪ್ಪ ಕವರಿ, ಶಂಕರ ನಾಯಕ (ತೊರ್ಕೆ), ತಿಮ್ಮಣ್ಣ ನಾಯಕ (ತೊರ್ಕೆ),ದತ್ತ ಮೊನ್ನ ಗೌಡ (ಎಸ್ ಡಿ ಎಮ್ ಸಿ ಅಧ್ಯಕ್ಷರು), ವಿದ್ಯಾ ಮಂಜುನಾಥ ನಾಯಕ (ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ),ಶಾಂತಿ ಮಂಜುನಾಥ ಗೌಡ (ಎಸ್ ಡಿ ಎಮ್ ಸಿ ಸದಸ್ಯೆ) ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.ಊರಿನ ನಾಗರಿಕರು ಮತ್ತು ದಾನಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
–ವರದಿ: ಎನ್ ರಾಮು ಹಿರೇಗುತ್ತಿ

More Stories
ಧಾರವಾಡದ ಶೇಷತಾರ ಸ್ಕಾಲರ್ ಶಿಪ್ಗೆ ಬರ್ಗಿ ಪ್ರೌಢಶಾಲೆಯ ನಾಗಶ್ರೀ – ನಾಗಲಕ್ಷ್ಮಿ,
ಹಿರೇಗುತ್ತಿಯಲ್ಲಿ ರಕ್ತದಾನ ಶಿಬಿರ
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಮಿರ್ಜಾನ್, ಕುಮಟಾ. ನವರಾತ್ರೋತ್ಸವ