ಹೊನ್ನಾವರ : ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗೋವಾದ ಉಮೇಶ ಶ್ರೀಧರ ಮೌಸ್ಕಾರ ( 22) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡವರನ್ನು ಕುಂದಾಪುರದ ಆದರ್ಶ, ಮಣಿಪಾಲ, ಕಾರವಾರ ಆಸ್ಪತ್ರೆಗಳಿಗೆ ದಾಖಲಿಸಿದ್ದು, ಉಳಿದವರಿಗೆ ಹೊನ್ನಾವರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.




ಬಸ್ ಬೆಂಗಳೂರಿನಿAದ ಸಾಗರ ಮಾರ್ಗವಾಗಿ ಭಟ್ಕಳಕ್ಕೆ ಬರುತ್ತಿತ್ತು. ಸುಳೆಮುರ್ಕಿ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬಸ್ ಎದುರುಗಡೆ ಹೊಗುತ್ತಿದ್ದ ಇಕೋ ಕಾರಿಗೆ ಹಿಂದುಗಡೆಯಿAದ ಗುದ್ದಿ ಕಂದಕಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 58 ಜನರು ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗೋವಾ ಮೂಲದ 6 ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸಾಗರದಿಂದ ತೆರಳುವ ಕೊನೆಯ ಬಸ್ ಆದ ಕಾರಣ 100ಕ್ಕೂ ಹೆಚ್ಚು ಜನರು ಬಸ್ಸನಲ್ಲಿ ಪ್ರಯಾಣಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಸಹ ಇಲ್ಲದ ಕಾರಣ ಕೆಲ ಕಾಲ ಆತಂಕ ಎದುರಾಯಿತು. ಸುದ್ದಿ ತಿಳಿದ ತಕ್ಷಣ, ಹೊನ್ನಾವರ ಪೊಲೀಸರು, ಸುತ್ತಲಿನ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿದ್ದಾರೆ. ಬಸ್ಸನಲ್ಲಿದ್ದವರು ಸುರಕ್ಷಿತವಾಗಿ ಮೇಲಕ್ಕೆ ಎತ್ತಿದ್ದಾರೆ. ಹೊನ್ನಾವರ ಹಾಗೂ ಸಿದ್ದಾಪುರದಿಂದ ಮಧ್ಯರಾತ್ರಿಯವರೆಗೂ ಹತ್ತಕ್ಕೂ ಹೆಚ್ಚು ಅಂಬುಲೆನ್ಸ್ ಗಳ ಮೂಲಕ ಗಾಯಾಳುಗಳನ್ನು ಗೇರುಸೊಪ್ಪಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ತಾಲೂಕ ಆಸ್ಪತ್ರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವರನ್ನು ನೆರೆ ಜಿಲ್ಲೆಯ ಆಸ್ಪತ್ರೆಗೆ ಕಳುಹಿಸಲಾಗಿದೆ. ತಾಲೂಕ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
ಅಪಘಾತ ರಾತ್ರಿ ಸಮಯದಲ್ಲಿ ಸಂಭವಿಸಿದ ತಕ್ಷಣ ಕೂಡಲೆ ಹೊನ್ನಾವರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಆ ವೇಳೆಗೆ ಸ್ಥಳಿಯರು ಪೊಲೀಸರು ಬಸ್ಸಿನಲ್ಲಿದ್ದವರನ್ನು ಸುರಕ್ಷೀತವಾಗಿ ಮೆಲಕ್ಕೆ ತರುವ ಕಾರ್ಯದಲ್ಲಿ ತೊಡಗಿದರು. ತಾಲೂಕಿನ ಹಾಗೂ ಸಿದ್ದಾಪುರದ ಅಂಬುಲೆನ್ಸ್ ಚಾಲಕರು ರಾತ್ರಿ ಇಡೀ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲು ಶ್ರಮಿಸಿರುದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಮಣಿಪಾಲ ಆಸ್ಪತ್ರೆಗೆ ಕೊಂಡ್ಯೊದರು. ತಾಲೂಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ರೋಗಿಗಳ ಆರೈಕೆಗೆ ಮುತುವರ್ಜಿ ವಹಿಸಿ ರಾತ್ರಿ ಇಡಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದರು. ತಹಶೀಲ್ದಾರ ಪ್ರವೀಣ ಕರಾಂಡೆ ತಾಲೂಕಿನ ವಿವಿಧ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರು ಸಹಕಾರ ನೀಡುವ ಮೂಲಕ ಮಾನವೀಯತೆ ಮೆರೆದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”