ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮದ ತೆಕ್ಕಿನಗದ್ದೆ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಜೂಜಾಟ ನಡೆಯುತ್ತಿರುವ ಮಾಹಿತಿ ಮೇರೆಗೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿತರನ್ನು ಬಂಧಿಸಿದ್ದಾರೆ.

ದಾಳಿಯ ವೇಳೆ ರೂ 5.05 ಲಕ್ಷ ಮೌಲ್ಯದ ಸ್ವತ್ತುಗಳೊಂದಿಗೆ ಸೇರಿದಂತೆ ಜೂಜಾಟಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಏಳು ಮಂದಿ ಆರೋಪಿತರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಬಂಧಿತರಾದವರನ್ನು ಹೊನ್ನಾವರ ಮೂಲದ ಅಕ್ಷಯ (ತಂದೆ ರಮೇಶ್ ಮಡಿವಾಳ), ಸುಬ್ರಾಯ (ತಂದೆ ಕೃಷ್ಣ ಗೌಡ) ಹಾಗೂ ಅಜಿತ (ತಂದೆ ಜಟ್ಟಿ ಗೌಡ) ಎಂದು ಗುರುತಿಸಲಾಗಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಅಂಗಾರೆಡ್ಡಿ ಅವರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ.

More Stories
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶ್ರೀವಲಿ ಪ್ರೌಢ ಶಾಲೆ ಚಿತ್ರಾಪುರ ಶೇಕಡಾ 100 ಫಲಿತಾಂಶ ಸಾಧನೆ
ಅಪ್ರಾಪ್ತನಿಗೆ ಬೈಕ್ ಚಾಲನೆಗೆ ಅವಕಾಶ: ಮಾಲೀಕರಿಗೆ ₹25 ಸಾವಿರ ದಂಡ
ಭಟ್ಕಳ: ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ದಶಮಾನೋತ್ಸವಕ್ಕೆ ಸಜ್ಜಾದ ಕಟ್ಟಡ ಕಾರ್ಮಿಕರ ಸಂಘ