ಹೊನ್ನಾವರ: ಬಿಹಾರದಲ್ಲಿ ಎನ್.ಡಿ.ಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹೊನ್ನಾವರ ಬಿಜೆಪಿ ಮಂಡಲದಿAದ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಮಂಡಲದ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ ಪಕ್ಷದ ಗೆಲುವಿಗೆ ಕಾರಣರಾದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.

ನಿಕಟಪೂರ್ವ ಮಂಡಲ ಅಧ್ಯಕ್ಷ ರಾಜೇಶ ಭಂಡಾರಿ ಮಾತನಾಡಿ ಸುಳ್ಳು ಪ್ರಚಾರದ ಮೂಲಕ ಗೆಲುವಿಗೆ ಪ್ರಯತ್ನಿಸಿದ ಕಾಂಗ್ರೆಸ್ ಗೆ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಹೊನ್ನಾವರ ಮಂಡಲದ ಅಧ್ಯಕ್ಷ ಯೋಗೇಶ ಮೇಸ್ತ ಪಕ್ಷದ ಭರ್ಜರಿ ಗೆಲುವಿಗೆ ಹೊನ್ನಾವರ ಬಿಜೆಪಿ ಮಂಡಲದ ಎಲ್ಲಾ ಕಾರ್ಯಕರ್ತರು ಸಂಭ್ರಮ ಪಡುತ್ತಿದ್ದೇವೆ ಎಂದರು.
ಪ.ಪಂ. ಅಧ್ಯಕ್ಷ ವಿಜಯ ಕಾಮತ, ಉಪಾಧ್ಯಕ್ಷ ಸುರೇಶ ಹೊನ್ನಾವರ, ಪ್ರಧಾನ ಕಾರ್ಯದರ್ಶಿ ಗಣಪತಿ ಗೌಡ ಚಿತ್ತಾರ, ಮುಖಂಡರಾದ ಎಂ.ಜಿ.ನಾಯ್ಕ, ಶಿವರಾಜ ಮೇಸ್ತ, ನಾರಾಯಣ ಹೆಗಡೆ ಆರೊಳ್ಳಿ, ಗೋವಿಂದ ಗೌಡ, ಪ್ರದೀಪ ಮೇಸ್ತ, ಶಾರದಾ ನಾಯ್ಕ, ಪ.ಪಂ.ಸದಸ್ಯರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ವಿಶ್ವನಾಥ ಸಾಲಕೋಡ್ ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”