November 18, 2025

ಸುರಭಿ ರಿ. ಇವರ ರಾಜ್ಯಮಟ್ಟದ ಕಥಾ ಸ್ಪರ್ಧೆ ವಿಜೇತರ ಪಟ್ಟಿ ಬಿಡುಗಡೆ

ಭಾವನಾ ಸುದ್ಧಿ ಬೈಂದೂರು : ಸುರಭಿ ರಿ.ಬೈಂದೂರು ಇವರ ವತಿಯಿಂದ ರಜತ ವರ್ಷದ ಸಂಭ್ರಮಕ್ಕಾಗಿ ರಾಜ್ಯಮಟ್ಟದ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದು ರಾಜ್ಯದ ಸುಮಾರು 25ಕ್ಕೂ ಹೆಚ್ಚು ಜಿಲ್ಲೆಗಳಿಂದ ಸುಮಾರು 65ಕ್ಕೂ ಮಿಕ್ಕಿ ಕಥೆಗಳು ಬಂದಿದ್ದು, ತೀರ್ಪುಗಾರರು 3 ಕಥೆಗಳನ್ನು ಹಾಗೂ ಆಯ್ಕೆ ವಿಜೇತರನ್ನು ಆಯ್ಕೆ ಮಾಡಿದ್ದಾರೆ.

ರಂಜಿನಿ ಅಡಿಗ, ಕುಮಾರಸ್ವಾಮಿ ಲೇಔಟ್ ಬೆಂಗಳೂರು ಇವರ ಕಥೆ “ಮುಸಾಫಿರ್ ಹೂಂ ಯಾರೋಂ” ಕಥೆ ಪ್ರಥಮ ಸ್ಥಾನ, ಸದಾಶಿವ ಸೊರಟೂರು ಹೊನ್ನಾಳಿ, ದಾವಣಗೆರೆ ಇವರ ಕಥೆ “ಬ್ಲಾಕ್ ಅಂಡ್ ವೈಟ್” ದ್ವಿತೀಯ ಸ್ಥಾನ, ಲಕ್ಷ್ಮಣ ಶೆರೆಗಾರ ಗೋಕಾಕ್, ಬೆಳಗಾವಿ ಇವರ “ಬಿಡುಗಡೆ” ಕಥೆ ತೃತೀಯ ಸ್ಥಾನ ಪಡೆದುಕೊಂಡಿದೆ.
ಕಥಾ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ನಿರ್ಣಾಯಕರಾಗಿ ಬೆಂಗಳೂರು ದೂರದರ್ಶನದ “ಚಂದನ” ವಾಹಿನಿಯ “ಥಟ್ ಅಂತ” ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರ. ವಿಶ್ರಾಂತ ಪ್ರಾಧ್ಯಾಪಕಿ ಡಾ.ರೇಖಾ ಬನ್ನಾಡಿ, ಸಾಹಿತಿ ಸುಧಾ ಆಡುಕಳ ತೀರ್ಪುಗಾರರಾಗಿ ಸಹಕರಿಸಿದ್ದರು.

ವಿಜೇತರಿಗೆ ಇದೇ ನವಂಬರ್ ತಿಂಗಳ 20ರಂದು ಬೈಂದೂರು ಶ್ರೀ ಸೇನೆಶ್ವರ ದೇವಾಲಯದ ಶಾರದಾ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಯುವ ನಡೆಯುವ “ಕನ್ನಡ ನುಡಿ ಹಬ್ಬ” ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದೆಂದು ಸಂಸ್ಥೆ ಭಾವನಾ ಸುದ್ಧಿ ವಾಹಿನಿಗೆ ತಿಳಿಸಿದ್ದಾರೆ.

ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

About The Author

error: Content is protected !!