November 18, 2025

ಸದಸ್ಯರ ಕುಟುಂಬಕ್ಕೆ ಟ್ಯಾಕ್ಸಿ ಸಂಘದ ಆರ್ಥಿಕ ನೆರವು

ಭಟ್ಕಳ: ಭಟ್ಕಳ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಸದಸ್ಸರಾದ ರಮೇಶ್ ಎಂ. ನಾಯ್ಕ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಸಂಘದ ವತಿಯಿಂದ ಧನಸಹಾಯ ನೀಡಲಾಯಿತು. ಇದೇ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸಂಘದ ಸದಸ್ಯ ಹರೀಶ್ ಮೋಗೆರ ಅವರ ಕುಟುಂಬಕ್ಕೂ ಜೀವನೋಪಾಯಕ್ಕೆ ನೆರವಾಗುವಂತೆ ಸಂಘದಿAದ ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು.

ಸಹಾಯ ವಿತರಣೆ ಕಾರ್ಯಕ್ರಮದಲ್ಲಿ ಟ್ಯಾಕ್ಸಿ ಯುನಿಯನ್ ಮತ್ತು ಸಂಘದ ಅಧ್ಯಕ್ಷ ಗಣೇಶ ದೇವಡಿಗ, ಉಪಾಧ್ಯಕ್ಷ ಮೊಹಮ್ಮದ್ ಮುಸ್ತಾಕ್, ಪ್ರಧಾನ ಕಾರ್ಯದರ್ಶಿ ಜಗದೀಶ ಈರ ನಾಯ್ಕ ಹಾಗೂ ಪಧಾಧಿಕಾರಿಗಳಾದ ಶ್ರೀನಿವಾಸ ಮಂಜ್ಯಯ್ಯ ನಾಯ್ಕ, ಮೊಹಮ್ಮದ್ ಅದ್ನಾನ್, ಮೊಹಮ್ಮದ್ ಸಲ್ಮಾನ್ ಉಪಸ್ಥಿತರಿದ್ದರು.

About The Author

error: Content is protected !!