December 23, 2025

ರೈಲು ಡಿಕ್ಕಿ ಯುವಕ ಸ್ಥಳದಲ್ಲೇ ಸಾವು

ಭಟ್ಕಳ: ಕೊಂಕಣ ರೈಲು ಹಳಿಯ ಪಕ್ಕವಾಗಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಮಂಗಳೂರು ದಿಕ್ಕಿನಿಂದ ಮುಂಬೈ ಕಡೆಗೆ ಹೋಗುತ್ತಿದ್ದ ಮತ್ತ್ವಗಂಧ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾಲಿ ಗ್ರಾಮದ ಕೆಂಬ್ರೆ ಹತ್ತಿರ ನಡೆದಿದೆ.

ಮೃತ ಯುವಕನನ್ನು ಯೋಗೇಶ್ ಮಂಜು ಗೊಂಡ (24) ಎಂದು ಗುರುತಿಸಲಾಗಿದೆ. ಯೋಗೇಶ್ ಹಾಡುವಳ್ಳಿ ಗ್ರಾಮದ ಹುಡೀಲ್ ನಿವಾಸಿಯಾಗಿದ್ದಾನೆ. ಈ ಅಪಘಾತವು ನಿಜಕ್ಕೂ ಆಕಸ್ಮಿಕವಾಗಿಯೇ ಸಂಭವಿಸಿದ್ದೋ? ಅಥವಾ ವೈಯಕ್ತಿಕ ಕಾರಣಗಳಿಂದ ಯುವಕ ಆತ್ಮಹತ್ಯೆಗೆ ಮುಂದಾಗಿದ್ದಾನೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಸಂಬAಧ ಮೃತನ ತಂದೆ ಮಂಜು ಗೊಂಡ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!