December 23, 2025

ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥಾ

ಹೊನ್ನಾವರ: ಹೆಚ್.ಐ.ವಿ/ಏಡ್ಸ್ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆ ಮತ್ತು ಸಂಘ ಸಂಸ್ಥೆಗಳ ಪ್ರಯತ್ನದ ಜೊತೆ ಸಾರ್ವಜನಿಕರ ಪಾತ್ರವು ಮುಖ್ಯವಾಗಿದೆ. ಹೆಚ್.ಐ.ವಿ ಬಗ್ಗೆ ಸರಿಯಾದ ಮಾಹಿತಿ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಾಲ್ಕೋಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು, ಐ.ಎಂ.ಏ ಅಧ್ಯಕ್ಷರು ಆದ ಡಾ|| ವೈಶಾಲಿ ನಾಯ್ಕ ಹೇಳಿದರು.

ಅವರು ಹೊನ್ನಾವರದ ಗೇರುಸೊಪ್ಪಾ ಸರ್ಕಲ್‌ನಲ್ಲಿ ಆರೋಗ್ಯ ಇಲಾಖೆ ಮತ್ತು ಸೆಂಟ್ ಇಗ್ನೇಸಿಯಸ್ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಜನಜಾಗೃತಿ ಜಾಥಾಕ್ಕೆ ಹಸಿರು ಬಾವಟ ತೋರಿಸುವದರ ಮೂಲಕ ಚಾಲನೆ ಗೊಳಿಸಿ ಮಾತನಾಡಿದ್ದರು. ಸೆಂಟ್ ಇಗ್ನಿಸಿಯಸ್ ವಿದ್ಯಾರ್ಥಿಗಳು ಹೆಚ್.ಐ.ವಿ ಬಗ್ಗೆ ಅರಿವ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಹೆಚ್.ಐ.ವಿ/ಏಡ್ಸ್ ಬಗ್ಗೆ ತಪ್ಪು ಕಲ್ಪನೆ ಬೇಡ. ಸರಿಯಾದ ಮಾಹಿತಿ ಪಡೆದುಕೊಂಡು ಹೆಚ್.ಐ.ವಿಯಿಂದ ದೂರವಿರಬಹುದು. ಹೆಚ್..ಐ.ವಿ ಸೊಂಕಿತರ ಬಗ್ಗೆ ಕಳಂಕ ತಾರತಮ್ಯ ಬೇಡ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೆಂಟ್ ಇಗ್ನೇಸಿಯಸ್ ವಿದ್ಯಾಲಯದ ಪ್ರಿನ್ಸಿಪಾಲರಾದ ಸಿಸ್ಟರ್ ಡಯಾನ್ ಉಪಸ್ಥಿತರಿದ್ದರು. ಸೆಂಟ್ ಇಗ್ನಿಸಿಯಸ್ ವಿದ್ಯಾರ್ಥಿಗಳಿಂದ ಹೆಚ್.ಐ.ವಿ/ಏಡ್ಸ್ ಕುರಿತು ಬೀದಿ ನಾಟಕ ಪ್ರದರ್ಶಿಸಿದರು. ಆರೋಗ್ಯ ಇಲಾಖೆಯ ಸಿಬ್ಬಂಧಿಗಳಾದ ಚಿದಾನಂದ, ಆನಂದ ಶೇಟ್, ವಿನಾಯಕ ಆಚಾರಿ, ಇರ್ಶಾದ, ಗಣೇಶ ನಾಯ್ಕ, ಸೆಂಟ್ ಇಗ್ನಿಸಿಯಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐ.ಸಿ.ಟಿ.ಸಿ ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರೆ, ಪ್ರಯೋಗಶಾಲಾ ತಂತ್ರಜ್ಞರಾದ ಉಮೇಶ ಕೆ ಸಹಕರಿಸಿದರು. ಗೇರುಸೊಪ್ಪಾ ಸರ್ಕಲ್‌ನಿಂದ ತಾಲೂಕ ಆಸ್ಪತ್ರೆ ಹೊನ್ನಾವರದವರೆಗೆ ಹೆಚ್.ಐ.ವಿ ಏಡ್ಸ್ ಜನಜಾಗೃತಿ ಜಾಥಾ ನಡೆಯಿತು.

About The Author

error: Content is protected !!