ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಗೇರುಸೊಪ್ಪಾ ಸಮೀಪದ ಸುಳೆಮುರ್ಕಿ ತಿರುವಿನಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದ್ದರೂ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಇರುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಇ, ಎಇಇ ಮತ್ತು ಗುತ್ತಿಗೆದಾರರ ಮೇಲೆ ಹೊನ್ನಾವರ ಪೊಲೀಸರು 125ರ ಪ್ರಕಾರ ಮೊಕದ್ದಮೆ ದಾಖಲಿಸಿಸುವ ಮೂಲಕ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ.
ಒಂದೇ ತಿಂಗಳಿನಲ್ಲಿ 3 ಅಪಘಾತ ಸಂಭವಿಸಿ ಹಲವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 2021ರಲ್ಲಿ ಇದೇ ಸ್ಥಳದಲ್ಲಿ 10 ಅಪಘಾತಗಳಾಗಿ 1 ಮೃತಪಟ್ಟು 13 ಜನ ಗಾಯಗೊಂಡಿದ್ದರು. 2022ರಲ್ಲಿ 6 ಅಪಘಾತವಾಗಿ 1 ಮೃತಪಟ್ಟು 53 ಜನ ಗಾಯಗೊಂಡಿದ್ದರು. 2023ರಲ್ಲಿ 6 ಅಪಘಾತಗಳಾಗಿ 60 ಜನ ಗಾಯಗೊಂಡಿದ್ದರು. 2024ರಲ್ಲಿ 6 ಅಪಘಾತಗಳಾಗಿ 3 ಜನ ಮೃತಪಟ್ಟು 52 ಜನ ಗಾಯಗೊಂಡಿದ್ದರು. 2025ರಲ್ಲಿ ಈವರೆಗೆ 12 ಅಪಘಾತಗಳಾಗಿ 5 ಜನ ಮೃತಪಟ್ಟು 138 ಜನ ಗಾಯಗೊಂಡಿದ್ದಾರೆ. ಪ್ರತಿ ಬಾರಿ ಅಪಘಾತ ಸಂಭವಿಸಿದಾಗ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಹೆದ್ದಾರಿ ಅಧಿಕಾರಿಗಳ ಭರವಸೆ ಹುಸಿಯಾಗುತ್ತಿದ್ದು, ಇದೀಗ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಮೂಲಕ ಕಾನೂನಿನ ಕಟಕಟೆಗೆ ಏರುವ ಸ್ಥಿತಿ ಅಧಿಕಾರಿಗಳಿಗೆ ಬಂದಿದೆ. ಅಪಘಾತ ಸಂಭವಿಸಿದಾಗ ಪೊಲೀಸರು ಬ್ಲಾಕ್‌ಸ್ಪಾಟ್ ಎಂದು ಗುರುತಿಸಿ ಕೂಡಲೇ ದುರಸ್ಥಿ ಮಾಡುವಂತೆ ಸರ್ಕಾರಕ್ಕೆ ಬರೆದಿದ್ದರು. ಇದರ ಪರಿಣಾಮ ಮತ್ತು ಸಾರ್ವಜನಿಕರ ಆಕ್ರೋಶದಿಂದ ಇದರ ಕಾಮಗಾರಿಗೆ 9 ಕೋಟಿ ರೂ. ಮಂಜೂರಾಗಿ 4 ವರ್ಷಗಳು ಕಳೆದಿದ್ದು, ಅರಣ್ಯ ಇಲಾಖೆ ಗಿಡ ಕಡಿಯಲು ಅವಕಾಶ ಕೊಡದ ಕಾರಣ ಕಾಮಗಾರಿ ಆರಂಭವಾಗದೇ ನಿಂತು ಈ ಸ್ಥಳ ಅಪಘಾತ ವಲಯ ಎನ್ನುವ ಕುಖ್ಯಾತಿ ಪಡೆದಿದೆ.
ಶಿರಸಿ- ಕುಮಟಾ ರಸ್ತೆ ಮಾರ್ಗ ದುರಸ್ತಿ ಕಾರಣ ಭಾರೀ ವಾಹನ ಸಂಚಾರ ಇಲ್ಲದೇ ಇರುದರಿಂದ ಬದಲಿ ಮಾರ್ಗವಾದ ಈ ಹೆದ್ದಾರಿಯ ಮೇಲೆ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳು ಕಳೆದ ವರ್ಷಕ್ಕಿಂತ ಏರಿಕೆ ಕಂಡಿದೆ. ತಾಲೂಕ ಕೇಂದ್ರದಿAದ 45ಕ್ಕೂ ಅಧಿಕ ಕಿ.ಮೀ. ದೂರ ತಾಲೂಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೆ ಎರಡು ಗಂಟೆ ಅಂಬುಲೆನ್ಸ್ ಪ್ರಯಾಣ ಬೆಳೆಸಬೇಕಾದ ದುಸ್ಥಿತಿ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದಾಗ ಅನುಭವಿಸಲೆಬೇಕಾಗಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಜಿಲ್ಲೆಯ ದಶಕಗಳ ಬೇಡಿಕೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮಾಡುವುದು ಇರಲಿ, ಜಿಲ್ಲೆಯಲ್ಲಿರುವ ಅಪಘಾತ ವಲಯವಾದ ರಸ್ತೆ ಸರಿಪಡಿಸುವ ಮೂಲಕ ಜಿಲ್ಲೆಯ ರಸ್ತೆಯು ಅಪಘಾತ ವಲಯದ ರಸ್ತೆ ಎನ್ನುವ ಕುಖ್ಯಾತಿ ದೂರ ಮಾಡಬೇಕಿದೆ

More Stories
ಕೆರೆಕೋಣ ಶಾಲೆಯಲ್ಲಿ ಶಿಕ್ಷಕಿ ಲಲಿತಾ ಹೆಗಡೆಯವರಿಗೆ ಬೀಳ್ಕೊಡುಗೆ ಮತ್ತು CCTV ಉದ್ಘಾಟನಾ ಕಾರ್ಯಕ್ರಮ ಸಂಪನ್ನ
ಶ್ರೀ ಸತ್ಯಸಾಯಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಯಶಸ್ವಿಯಾಗಿ ಸುಸಂಪನ್ನ
ಉತ್ತರ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಂಘಟನೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಕ್ರಿಸ್ಮಸ್ ಗೀತಾ ಸ್ಪರ್ಧಾ ಕಾರ್ಯಕ್ರಮ