December 23, 2025

ತೆಂಗಿನಗು0ಡಿ ಕ್ರಾಸ್ ಬಳಿ ಅಕ್ರಮ ಎತ್ತು ಸಾಗಾಟ

ಭಟ್ಕಳ: ಯಾವುದೇ ಪರವಾನಿಗೆ ಇಲ್ಲದೇ ಕ್ರೂರಿಯಾಗಿ ಕಟ್ಟಿ ಎತ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಭಟ್ಕಳ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಭಟ್ಕಳ ತೆಂಗಿನಗು0ಡಿ ಕ್ರಾಸ್ ಬಳಿ ನಡೆದಿದೆ.

ಬಂಧಿತರನ್ನು ಅಪ್ಪಲ್ ಅಲಿ ಆಜಾದ್ ನಗರ-ಭಟ್ಕಳ, ಶಂಭುಲಿAಗಯ್ಯ ಹಿರೆಮಠ ಬ್ಯಾಡಗಿ-ಹಾವೇರಿ, ಸಂತೋಷ ಬೊರಾತ್ ಗುತ್ತಲ್-ಹಾವೇರಿ ಮತ್ತು ದೇವರಾಜ ದಿಡಗೂರ-ಹಾವೇರಿ ಎಂದು ಗುರುತಿಸಲಾಗಿದೆ. .

ಮಲ್ಲಿಕಾರ್ಜುನ ಶಿವಪ್ಪ ಕಡ್ಲಿ ಅಗಡಿ-ಹಾವೇರಿ ಇವರ ಹೆಸರಿನ ಲಾರಿಯಲ್ಲಿ ಸುಮಾರು ರೂ 5 ಲಕ್ಷ ಮೌಲ್ಯದ 10 ಎತ್ತುಗಳನ್ನು ಹತ್ಯೆ ಉದ್ದೇಶಕ್ಕೆ ಸಾಗಿಸಲಾಗುತಿತ್ತು ಎಂದು ತಿಳಿದುಬಂದಿದೆ. ವಾಹನದ ಬಳಿ ಯಾವುದಾದರೂ ಪರವಾನಿಗೆ, ಪಾಸ್ ಅಥವಾ ದಾಖಲೆಗಳು ಇರದೇ ಇರುವ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಬೆಳಗ್ಗೆ ಸುಮಾರು 4 ಗಂಟೆ ಹೊತ್ತಿಗೆ ನಡೆದ ದಾಳಿಯಲ್ಲಿ ಪೊಲೀಸರು 10 ಎತ್ತು ಹಾಗೂ ರೂ 15 ಲಕ್ಷ ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.

About The Author

error: Content is protected !!