ಹೊನ್ನಾವರ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಕಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿಮಡಿ ಇಲ್ಲಿ ಏಳು ದಿನಗಳ ಕಾಲ ನಡೆಸಿ ಯಶಸ್ಸು ಕಂಡಿತು
ದಿನಾAಕ 27 11 2025 ರಿಂದ 03 12 2025 ರವರೆಗೆ ನಡೆದ ಶಿಬಿರದಲ್ಲಿ ಮೊದಲನೇ ದಿನ ಉದ್ಘಾಟನಾ ಕಾರ್ಯಕ್ರಮ ನಡೆಯಿತು ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಡಾಕ್ಟರ್ ಅಬ್ದುಲ್ ಮಜೀದ್ ಶಿಬಿರದ ಅಧ್ಯಕ್ಷರು, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಕಿ ಹಾಗೂ ಇತರೆ ಗಣ್ಯರು ಸ್ವಯಂಸೇವಕರನ್ನು ಉದ್ದೇಶಿಸಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಅದರ ಧ್ಯೇಯ, ಸೇವಾ ಮನೋಭಾವ, ಅದರಿಂದ ಸ್ವಯಂಸೇವಕರಿಗೆ ಹಾಗೂ ಸಮಾಜಕ್ಕಾಗುವ ಅನುಕೂಲಗಳ ಬಗ್ಗೆ ಮಾತನಾಡಿದರು. ಅಲ್ಲದೆ ಆ ದಿನ ಸ್ವಯಂಸೇವಕರಿAದ ಊರ ಜನರಿಗೆ ಆಮಂತ್ರಣ ಪತ್ರಿಕೆ ಹಂಚುವುದರ ಮೂಲಕ ಶಿಬಿರಕ್ಕೆ ಆಮಂತ್ರಿಸಲಾಯಿತು. ಎರಡನೇ ದಿನ ದೈನಂದಿನ ಚಟುವಟಿಕೆಗಳಾದ ಧ್ವಜಾರೋಹಣ, ವ್ಯಾಯಾಮ, ಶ್ರಮದಾನವನ್ನು ಕೈಗೊಳ್ಳಲಾಯಿತು, ಮದ್ಯಾಹ್ನದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶ್ರೀ ನಿಖಿಲ್ ಪಟವರ್ಧನ್, ವ್ಯವಸ್ಥಾಪಕರು, ಕೆನರಾ ಬ್ಯಾಂಕ್ ಮಂಕಿ ಇವರು ಸ್ವಯಂಸೇವಕರಿಗೆ ಹಣ ಉಳಿತಾಯ ಮತ್ತು ಅದರ ಮಹತ್ವವನ್ನು ತಿಳಿಸಿದರು, ಮೂರನೇ ದಿನ ಕಾಲೇಜಿನ ಪ್ರಾಧ್ಯಾಪಕರ ನೇತೃತ್ವದಲ್ಲಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಸ್ವಯಂಸೇವಕರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು, ನಾಲ್ಕನೇ ದಿನ ಶ್ರೀ ಆನಂದಕುಮಾರ ಎಸ್. ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಕಿ ಇವರು ನವಯುಗದಲ್ಲಿ ಡಿಜಿಟಲ್ ಸಾಕ್ಷರತೆಯ ಪ್ರಾಧ್ಯಾನ್ಯತೆಯನ್ನು ಸ್ವಯಂ ಸೇವಕರಿಗೆ ಮನದಟ್ಟು ಮಾಡಿದರು, ಐದನೇ ದಿನ ಶಿಬಿರಾರ್ಥಿಗಳು ಸಮುದ್ರ ತೀರವನ್ನು ಸ್ವಚ್ಛಗೊಳಿಸುವುದರ ಮೂಲಕ ಸ್ವಚ್ಛ ಭಾರತದ ಉದ್ದೇಶವನ್ನು ಜನರಿಗೆ ಸಾರಿದರು ಹಾಗೆಯೇ ಸ್ವಯಂಸೇವಕರಿAದ ವ್ಯಸನ ಮುಕ್ತ ಭಾರತ ಘೋಷವಾಕ್ಯದೊಂದಿಗೆ ಜನಜಾಗೃತಿ ಜಾಥಾ ನಡೆಸಲಾಯಿತು, ಆ ದಿನ ಮಧ್ಯಾಹ್ನ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀ ಉದಯ ಆರ್ ನಾಯ್ಕ ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿಮಡಿ ಇವರು ಸ್ವಯಂಸೇವಕರಲ್ಲಿ ಪರಿಸರ ಕಾಳಜಿಗೆ ಸಂಬAಧಿಸಿದAತೆ ಮುಂದಿನ ಜನಾಂಗದ ಒಳಿತಿಗಾಗಿ ಇಂದು ನಾವು ನಮ್ಮ ಪರಿಸರವನ್ನು ಹೇಗೆ ಸೂಕ್ತ ರೀತಿಯಲ್ಲಿ ಬಳಸಬೇಕೆಂದು ಅರಿವು ಮೂಡಿಸಿದರು.
ಆರನೇದಿನ ಶಿಬಿರದ ಸ್ಥಳ ಪರಿಶೀಲನೆಗೆಂದು ಶಿಬಿರದ ಸ್ಥಳಕ್ಕೆ ಭೇಟಿ ನೀಡಿದ ಡಾ. ಶಿವಾನಂದ ವಿ. ನಾಯ್ಕ ಸಿಂಡಿಕೇಟ್ ಸದಸ್ಯರು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಹಾಗೂ ಡಾ.ಎಂ. ಬಿ. ದಳಪತಿ, ಸಂಯೋಜನಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಕೋಶ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು ಶಿಬಿರದ ಚಟುವಟಿಕೆಗಳನ್ನು ಪ್ರಸಂಪಿಸುವುದರೊAದಿಗೆ, ಸ್ವಯಂಸೇವಕರ ಸಮವಸ್ತ್ರದ ಬಣ್ಣ, ಎನ್ ಎಸ್ ಎಸ್ ಧ್ವಜದ ಬಣ್ಣಕ್ಕೆ ಹೋಲಿಕೆ ಆಗಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಸ್ವಯಂಸೇವಕರಿಗೆ ರಾಷ್ಟ್ರೀಯ ಸೇವಾ ಯೋಜನೆ ವೈಶಿಷ್ಟ್ಯತೆಯನ್ನು ತಿಳಿಸಿದರು.
ಮಧ್ಯಾಹ್ನದ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಪಟಗಾರ, ಸ್ವಯಂಸೇವಕರಲ್ಲಿ ಎಚ್ ಐ ವಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದರು. ಶಿಬಿರದ ಕೊನೆಯದಿನ ಶಿಬಿರಾರ್ಥಿಗಳಿಂದ ಮೀನುಗಾರರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗೆ ಸಂಬAಧಿಸಿದAತೆ ಸಮೀಕ್ಷೆ ನಡೆಸಲಾಯಿತು, ಶಿಬಿರದ ಪ್ರತಿದಿನ ಊರಿನ ಗಣ್ಯರಿಂದ ಧ್ವಜಾರೋಹಣ, ಸಭಾಕಾರ್ಯಕ್ರಮ, ಸ್ಥಳೀಯ ಪ್ರತಿಬೆಗಳಿಗಾಗಿ ಸಾಂಸ್ಕೃತಿಕ ಸಂಜೆ ಮುಂತಾದ ಕಾರ್ಯಕ್ರಮ ಕೈಗೊಳ್ಳಲಾಯಿತು, ಕೊನೆಯದಾಗಿ ಸಮಾರೋಪ ಸಮಾರಂಭದಲ್ಲಿ ಸಿಬಿರಾಧಿಕಾರಿಗಳಾದ ಶ್ರೀ ಈಶ್ವರ ಗುರುನಾಥ ನಾಯ್ಕ ಹಾಗೂ ಸಹ ಶಿಬಿರ ಅಧಿಕಾರಿಗಳಾದ ಶ್ರೀಮತಿ ಜಯಶ್ರೀ ಆರ್ ರವರು ಶಿಬಿರಕ್ಕೆ ಸಹಕರಿಸಿದ, ಸಹಾಯ ಹಸ್ತ ನೀಡಿದ ಸರ್ವರಿಗೂ ವಂದಿಸಿ ಮುಕ್ತಾಯಗೊಳಿಸಿದರು.

More Stories
ಕೆರೆಕೋಣ ಶಾಲೆಯಲ್ಲಿ ಶಿಕ್ಷಕಿ ಲಲಿತಾ ಹೆಗಡೆಯವರಿಗೆ ಬೀಳ್ಕೊಡುಗೆ ಮತ್ತು CCTV ಉದ್ಘಾಟನಾ ಕಾರ್ಯಕ್ರಮ ಸಂಪನ್ನ
ಶ್ರೀ ಸತ್ಯಸಾಯಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಯಶಸ್ವಿಯಾಗಿ ಸುಸಂಪನ್ನ
ಉತ್ತರ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಂಘಟನೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಕ್ರಿಸ್ಮಸ್ ಗೀತಾ ಸ್ಪರ್ಧಾ ಕಾರ್ಯಕ್ರಮ