ಹೊನ್ನಾವರ: ಪ್ಲಾಸ್ಟಿಕ್ ಎಂಬ ವಸ್ತು ಭೂಮಿಗೆತಲೆಬೇನೆಯಾಗಿರುವುದರ ಹಿಂದೆ ಅನಿಯAತ್ರಿತ ಉತ್ಪಾದನೆ, ಸೂಕ್ತ ವಿಲೇವಾರಿಯಾಗದಿರುವುದು ಮತ್ತು ಮರುಬಳಕೆ ಮಾಡದಿರುವುದು ಮುಖ್ಯಕಾರಣವಾಗಿದೆ. ಇದುವರೆಗೆ 12% ಕಸ ಸುಟ್ಟಿದ್ದೇವೆ. ಕಸ ಸುಡುವುದು ಹಸಿರು ಅಪರಾಧಎಂದುಪರಿಸರ ಹೋರಾಟಗಾರ್ತಿಡಾ. ಎಚ್.ಎಸ್.ಅನುಪಮಾ ಹೇಳಿದರು.
ಅವರು ಕ.ವಿ.ವಿ. ಧಾರವಾಡ ಹಾಗೂ ಪಟ್ಟಣದಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದರಾಷ್ಟಿçÃಯ ಸೇವಾ ಯೋಜನಾಘಟಕದ ಸಹಯೋಗದಲ್ಲಿ ಸ.ಹಿ.ಪ್ರಾ. ಶಾಲೆ ಗುಡ್ಡೇಬಾಳದಲ್ಲಿ ನಡೆಯುತ್ತಿರುವಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ನಾವು ಉತ್ಪಾದಿಸುವ ಕಸಕ್ಕೆ ನಾವೇ ಹೊಣೆಗಾರರು. ಅದನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ನಮ್ಮಜವಾಬ್ದಾರಿ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆಮಾಡಿ ಸ್ಟೀಲ್, ಗಾಜು, ಮರ, ಬಟ್ಟೆ ಮೊದಲಾದ ಪರ್ಯಾಯ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕುಎಂದುಅವರು ಹೇಳಿದರು.
ಎನ್.ಎಸ್.ಎಸ್. ಯೋಜನಾಧಿಕಾರಿ ನಾಗರಾಜ ಅಪಗಾಲ, ಸಹಶಿಬಿರಾಧಿಕಾರಿ ಪ್ರಶಾಂತ ಮೂಡಲಮನೆ, ವಿದ್ಯಾಧರಕಡತೋಕಾ ಉಪಸ್ಥಿತರಿದ್ದರು.
ಕಾಲೇಜಿನಎನ್.ಎಸ್.ಎಸ್. ಸ್ವಯಂಸೇವಕರು ಗುಡ್ಡೇಬಾಳ ಗ್ರಾಮದ ರಸ್ತೆಗಳ ಹೊಂಡಕ್ಕೆ ಮಣ್ಣು ತುಂಬಿಸಿ ರಿಪೇರಿ ಮಾಡಿದರು. ಗ್ರಾಮದತುಂಬಾ ಪ್ಲಾಸ್ಟಿಕ್ ಜಾಗೃತಿಕಾರ್ಯಕ್ರಮ ನಡೆಸಿದರು. ವಿದ್ಯಾರ್ಥಿಗಳ ಶ್ರಮದಾನವನ್ನುಗ್ರಾಮಸ್ಥರು ಶ್ಲಾಘಿಸಿದರು.
ಎಸ್.ಡಿ.ಎಂ. ಪದವಿ ಕಾಲೇಜಿನಎನ್.ಎಸ್.ಎಸ್. ವಿದ್ಯಾರ್ಥಿಗಳು ತಮ್ಮ ಸೇವೆಯ ಮೂಲಕ ನಮ್ಮಗ್ರಾಮದಲ್ಲಿಜನೋಪಯೋಗಿಕಾರ್ಯಕ್ರಮ ಮಾಡುತ್ತಿದ್ದಾರೆ. ಕಸ-ಕಡ್ಡಿ ಶುಚಿಗೊಳಿಸಿ ಕಾಲುದಾರಿಯನ್ನು ಸಂಚಾರಕ್ಕೆಯೋಗ್ಯ ಮಾಡಿಕೊಟ್ಟಿದ್ದಾರೆ.ಇವರ ಸೇವಾ ಮನೋಭಾವಮೆಚ್ಚುವಂತದ್ದು. ಹನುಮಂತ ನಾಯ್ಕ ಗುಡ್ಡೇಬಾಳ

More Stories
ಭಟ್ಕಳದ ಕರಿಕಲ್ಲಿನಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಹಾಗೂ ರಾಮತಾರಕ ಮಹಾಯಜ್ಞ
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’