December 23, 2025

ಎಂ.ಡಿ.ಸಿ.ಸಿ ಬ್ಯಾಂಕ್ ನೂತನ ನಿರ್ದೇಶಕ ಶೀಳನೆರೆ ಅಂಬರೀಶ್ ಅವರಿಗೆ  ಹೃದಯಸ್ಪರ್ಶಿ ಸನ್ಮಾನ.

ಎಂ.ಡಿ.ಸಿ.ಸಿ ಬ್ಯಾಂಕ್ ನೂತನ ನಿರ್ದೇಶಕ ಶೀಳನೆರೆ ಅಂಬರೀಶ್ ಅವರಿಗೆ ಕೃಷ್ಣರಾಜಪೇಟೆ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಓಗಳ ಯೂನಿಯನ್ ವತಿಯಿಂದ ಹೃದಯಸ್ಪರ್ಶಿ ಸನ್ಮಾನ. ಸಹಕಾರ ಸಂಘಗಳ ಬಲವರ್ಧನೆಗೆ ಸಿಇಒಗಳು ಬದ್ದತೆಯಿಂದ ಕೆಲಸ ಮಾಡಲು ಅಂಬರೀಶ್ ಮನವಿ. ಸಹಕಾರ ಸಂಘಗಳು ರಾಜಕೀಯದಿಂದ ಮುಕ್ತವಾಗಿ ರೈತರ ಪರವಾಗಿ ಕೆಲಸ ಮಾಡಬೇಕು ಎಂದು ಡಿಸಿಸಿ ಬ್ಯಾಂಕ್ ನ ನೂತನ ನಿರ್ದೇಶಕ ಶೀಳನೆರೆ ಅಂಬರೀಶ್ ಹೇಳಿದರು. ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ರಾಮದಾಸ್ ಹೋಟೆಲಿನ ಸುಲೋಚನಮ್ಮ ಸಭಾಂಗಣದಲ್ಲಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಯೂನಿಯನ್ ವತಿಯಿಂದ ಆಯೋಜಿಸಿದ್ದ ಹೃದಯಸ್ಪರ್ಶಿ ಅಭಿನಂದನಾ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ವರ್ಗದ ಜೀವನಾಡಿಯಾಗಿ ಕೆಲಸ ಮಾಡುತ್ತಾ, ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾದ ಬಿತ್ತನೆ ಬೀಜಗಳು, ರಸಗೊಬ್ಬರಗಳು ಹಾಗೂ ಕೃಷಿ ಚಟುವಟಿಕೆ ನಡೆಸಲು ಬೇಕಾಗಿರುವ ಅಗತ್ಯ ಸಾಲ ಸೌಲಭ್ಯವನ್ನು ನೀಡುತ್ತಾ ಗ್ರಾಮೀಣ ಭಾರತದ ನಿರ್ಮಾಣಕ್ಕೆ ಬೇಕಾಗಿರುವ ಅಗತ್ಯತೆಗಳನ್ನು ಪೂರೈಸುತ್ತಾ ಕೆಲಸ ಮಾಡುತ್ತಿರುವ ಸಹಕಾರ ಸಂಘಗಳು ರಾಜಕೀಯದಿಂದ ಮುಕ್ತವಾಗಿ ರೈತ ಪರವಾಗಿ ಕೆಲಸ ಮಾಡಬೇಕು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಹಕಾರ ಸಂಘಗಳ ಅಭಿವೃದ್ಧಿಗೆ ಪೂರಕವಾಗಿ ಬದ್ಧತೆಯಿಂದ ಕೆಲಸ ಮಾಡುವುದನ್ನು ಮೈಗೂಡಿಸಿಕೊಂಡು ರಾಜಕೀಯ ಚಟುವಟಿಕೆಗಳಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದ ಅಂಬರೀಶ್ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರೈತರು ಸರಬರಾಜು ಮಾಡುತ್ತಿರುವ ಹಾಲಿನ ಬಟವಾಡೆಯ ಹಣವನ್ನು ಡಿಸಿಸಿ ಬ್ಯಾಂಕ್ ಶಾಖೆಗಳ ಮೂಲಕವೇ ವಿತರಣೆಯಾಗುವಂತಹ ವ್ಯವಸ್ಥೆ ಗಟ್ಟಿಯಾಗಬೇಕು. ಡಿಸಿಸಿ ಬ್ಯಾಂಕ್ ನ ಸಿಬ್ಬಂದಿಗಳು ಹಾಗೂ ಮೇಲ್ವಿಚಾರಕರು ಹಾಲು ಉತ್ಪಾದಕರ ಸಹಕಾರ ಸಂಘಗಳ ಜೊತೆ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಈ ಸಂದರ್ಭದಲ್ಲಿ ಸೂಚನೆ ನೀಡಿದರು. ಸಹಕಾರ ಸಂಘಗಳ ಪ್ರತಿನಿಧಿಗಳು ನನಗೆ ಆಶೀರ್ವಾದ ಮಾಡಿದ ಫಲವಾಗಿ ನಾನೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಕೃಷ್ಣರಾಜಪೇಟೆಯಿಂದ ಆಯ್ಕೆಯಾಗಿದ್ದೇನೆ. ನನ್ನ ಗೆಲುವಿಗೆ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕರಾದ ಡಾಲುರವಿ ಹಾಗೂ ಮಡುವಿನ ಕೋಡಿ ಹರೀಶ್ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿ ನನ್ನ ಗೆಲುವಿನ ರೂವಾರಿಗಳಾಗಿ ಹರೀಶ್ ಮತ್ತು ಡಾಲು ರವಿ ಹೊರಹೊಮ್ಮಿದ್ದಾರೆ. ನನ್ನ ಜೀವಿತದ ಕೊನೆಯ ಉಸಿರಿನವರೆಗೂ ನನ್ನ ಸ್ನೇಹಿತರಿಬ್ಬರ ಸಹಾಯವನ್ನು ನಾನು ಎಂದೆಂದಿಗೂ ಮರೆಯುವುದಿಲ್ಲ ಎಂದು ಅಂಬರೀಶ್ ಭಾವುಕರಾಗಿ ನೋಡಿದರು. ಎಂಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಅಂಬರೀಷ್ ಅವರ ಅಭಿನಂದನಾ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲುರವಿ ಮಾತನಾಡಿ ರಾಜ್ಯದ ಹಿರಿಯ ಸಹಕಾರಿ ಮುತ್ಸದ್ದಿಗಳಾದ ಮಾಜಿ ಶಾಸಕ ದಿವಂಗತ ಎಸ್ ಎಂ ಲಿಂಗಪ್ಪ ಅವರ ಕುಟುಂಬದ ಸದಸ್ಯರಾಗಿರುವ ಅಂಬರೀಶ್ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗೂ ಹಾಲಿನ ಡೈರಿಯ ಅಧ್ಯಕ್ಷರಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುವ ಜೊತೆಗೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ, ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕರಾಗಿಯೂ ಕೆಲಸ ಮಾಡಿ ಸಹಕಾರ ವ್ಯವಸ್ಥೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಪ್ರಾಮಾಣಿಕವಾಗಿ ದುಡಿಮೆ ಮಾಡಿದ್ದಾರೆ. ಅಂಬರೀಶ್ ಅವರ ಗೆಲುವನ್ನು ಕೃಷ್ಣರಾಜಪೇಟೆ ತಾಲೂಕಿನ ಎಲ್ಲಾ ಸಹಕಾರಿ ಬಂಧುಗಳು ಪಕ್ಷಾತೀತವಾಗಿ ಸಂಭ್ರಮಿಸಿ ದ್ದಾರೆ. ನೂತನವಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಅಂಬರೀಶ್ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಯ ತಮ್ಮನ್ನು ತೊಡಗಿಸಿಕೊಂಡು ಕೆಲಸ ಮಾಡುವ ಜೊತೆಗೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕ ಚಟುವಟಿಕೆಗಳ ಕಡೆಗೂ ಗಮನಹರಿಸಿ ಡಿಸಿಸಿ ಬ್ಯಾಂಕ್ ವತಿಯಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು. ಮಂಡ್ಯ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರಾದ ಎಂಬಿ ಹರೀಶ್ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಎಸ್ ಅಂಬರೀಶ್ ಅವರನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ಉದ್ಯಮಿ ಬಿ.ರಾಜಶೇಖರ್, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ರಾಮೇಗೌಡ, ಎಂಡಿಸಿಸಿ ಬ್ಯಾಂಕಿನ ಪಟ್ಟಣದ ಪ್ರಧಾನ ಶಾಖೆಯ ವ್ಯವಸ್ಥಾಪಕ ಗಿರೀಶ್, ರಾತ್ರಿ ಶಾಖೆಯ ವ್ಯವಸ್ಥಾಪಕ ಎಂ.ಎನ್.ಅಶ್ವಥ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಆದಿಲ್ ಪಾಶಾ, ರಾಘವೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಯೂನಿಯನ್ ಸಂಚಾಲಕ ಎಂ.ಎನ್.ಸತೀಶ್ ಸೇರಿದಂತೆ ಸಿಇಓಗಳಾದ ಕೆ.ಆರ್.ಪುಟ್ಟರಾಜು ಎಸ್.ಎನ್ ಕುಮಾರ, ಬಿ.ಎನ್.ಕಾಂತರಾಜು, ಮುರುಳಿಧರ, ಎಂ.ಎಚ್. ಸುರೇಶ್, ಕೆ.ಎಂ.ಬಾಲಕೃಷ್ಣ, ಎಸ್.ಕೆ.ಸತೀಶ, ಚಂದ್ರಕುಮಾರ್, ಧರ್ಮರಾಜ್, ಜೆ.ಎಂ.ಮದೀಶ್, ಸಿದ್ದೇಗೌಡ, ಅರುಣ್ ಕುಮಾರ್, ಪ್ರಶಾಂತ್, ನರಸಿಂಹೇಗೌಡ, ಚೇತನ್ ಕುಮಾರ್, ಆದರ್ಶ, ಭೋಜರಾಜು, ಇಂದುಮತಿ, ಕೆ.ಜೆ.ರಾಮಸ್ವಾಮಿ, ಅನುರಾಧ, ಪ್ರಿಯಾಂಕ, ಭಾನುಮತಿ, ಮಹದೇವ ಸೇರಿದಂತೆ ಕೃಷ್ಣರಾಜಪೇಟೆ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಓ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸಹಕಾರ ಸಂಘಗಳ ವಿಶ್ರಾಂತ ಸಿಇಓ ಗಳು ಹಾಗೂ ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿಧನರಾದ ಸಹಕಾರಿ ಬಂಧುಗಳು ಹಾಗೂ ವಿವಿಧ ಗಣ್ಯರ ಆತ್ಮಗಳಿಗೆ ಚಿರಶಾಂತಿ ಕೋರಿ ಮೌನಚರಣೆಯ ಮೂಲಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!