December 23, 2025

ಕುಮಟಾದಲ್ಲಿ ತಾಲುಕಾ ಮಟ್ಟದ ವಿಜ್ಞಾನ ವಿಷಯದ ಕಾರ್ಯಗಾರ

ಕುಮಟಾ; ನಿರ್ಮಲ ಕಾನ್ವೆಂಟ ಪ್ರೌಢಶಾಲೆ ಕುಮಟಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ನೇತೃತ್ವದಲ್ಲಿ ವಿಜ್ಞಾನ ವಿಷಯದ ತಾಲೂಕಾ ಮಟ್ಟದ ಕಾರ್ಯಾಗಾರವು ಜರುಗಿತು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಉದಯ ನಾಯ್ಕ ಇವರು ಆಗಮಿಸಿ. ಕಾರ್ಯಾಗಾರದ ಸದುದ್ದೇಶವನ್ನು ಸವಿವರವಾಗಿ ತಿಳಿಸಿದರು. ಹಾಗೂ ಕಾರ್ಯಾಗಾರ ಯಶಸ್ವಿಯಾಗಿ ಸಾಗಲೆಂದು ಶುಭ ಹಾರೈಸಿದರು.
ಕಾರ್ಯಗಾರದ ಉದ್ಘಾಟನೆಯನ್ನು ಕುಮಟಾ ತಾಲೂಕ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಬೀರದಾಸ್ ಗುನಗ ಇವರು ಗಿಡಕ್ಕೆ ನೀರೆರೆಯುವದರ ಮೂಲಕ ಉದ್ಘಾಟಿಸಿದರು.

ವೇದಿಕೆಯಲ್ಲಿ ವಿಜ್ಞಾನ ಸಂಘದ ಅಧ್ಯಕ್ಷರಾದ ಶ್ರೀ ಸಿದ್ದರಾಮಪ್ಪ ಭಟಕುರ್ಕಿ ಮುಖ್ಯಾಧ್ಯಾಪಕರಾದ ಶ್ರೀಮತಿ ಉಮಾ ಹೆಗಡೆ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಮಹಾದೇವ ಬಿ ಗೌಡ. ಸೆಕೆಂಡರಿ ಹೈಸ್ಕೂಲ್, ಹೀರೆಗುತ್ತಿ ಹಾಗೂ ರವೀಂದ್ರ ಮಹಾಲೆ ನಿರ್ಮಲ ಕಾನ್ವೆಂಟ್ ಪ್ರೌಢಶಾಲೆ ಕುಮುಟಾ ಇವರು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಉತ್ತಮಪಡಿಸಲು ಇರುವ ಮಿಷನ್ -40 ಇದನ್ನು ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ವಿವರಿಸಿದರು. ಕುಮಟಾ ತಾಲೂಕಿನ ಬೇರೆ ಬೇರೆ ಪ್ರೌಢಶಾಲೆಯ ವಿಜ್ಞಾನ ವಿಷಯವನ್ನು ಬೋಧಿಸುವ ಶಿಕ್ಷಕರು ಭಾಗವಹಿಸಿ ಮಹತ್ವಪೂರ್ಣವಾದ ಕಾರ್ಯಗಾರದ ಮಾಹಿತಿಯನ್ನು ಪಡೆದರು. ಕಾರ್ಯಾಗಾರದ ನೋಡಲ್ ಅಧಿಕಾರಿಗಳಾದ, ಇಸಿಓ ಶ್ರೀಮತಿ ದೀಪ ಕಾಮತ ಉಪಸ್ಥಿತರಿದ್ದರು. ಕೊನೆಯಲ್ಲಿ ಶಿಕ್ಷಕರಾದ ಕಿರಣ್ ಪ್ರಭು ಎಲ್ಲರನ್ನ ವಂದಿಸಿದರು.
ವರದಿ : ಎನ್ ರಾಮೂ ಹಿರೆಗುತ್ತಿ

About The Author

error: Content is protected !!