December 23, 2025

ಪೊಲಿಯೋ ಲಸಿಕಾ ಕಾರ್ಯಕ್ರಮ

ಹೊನ್ನಾವರ: ತಾಲೂಕಿನೆಲ್ಲಡೆ ರವಿವಾರ ಐದು ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಲಸಿಕಾ ಕಾರ್ಯಕ್ರಮ ಜರುಗಿತು.


ತಾಲೂಕಿನ ಆಯ್ದ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕ ಆಸ್ಪತ್ರೆ, ಪಟ್ಟಣದ ಬಸ್ ನಿಲ್ದಾಣ ಸೇರಿ 91 ಕಡೆ ಲಸಿಕಾ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದು, ತಾಲೂಕಿನಲ್ಲಿ 9700ಕ್ಕೂ ಅಧಿಕ ಪುಟಾಣಿಗಳಿಗೆ ಪೊಲೀಯೊ ಲಸಿಕೆ ಹಾಕಲಾಗಿದೆ ತಾಲೂಕ ಆರೋಗ್ಯಾಧಿಕಾರಿ ಡಾ ಉಷಾ ಹಾಸ್ಯಗಾರ ಮಾಹಿತಿ ನೀಡಿದರು. ಈ ದಿನ ಲಸಿಕಾ ಕೇಂದ್ರಕ್ಕೆ ಆಗಮಿಸದೆ ಇದ್ದವರು ಯಾರೂ ಲಸಿಕೆಯಿಂದ ತಪ್ಪಬಾರದು ಎಂದು ಇನ್ನು ಎರಡು ದಿನಗಳ ಕಾಲ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತದೆ. ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮ ಯಶ್ವಸಿಗೆ ಸಹಕರಿಸಿದ್ದಾರೆ ಎಂದರು

About The Author

error: Content is protected !!