December 23, 2025

ಉತ್ತರ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಂಘಟನೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಕ್ರಿಸ್‌ಮಸ್‌ ಗೀತಾ ಸ್ಪರ್ಧಾ ಕಾರ್ಯಕ್ರಮ

ಹೊನ್ನಾವರ: ಯುವ ಸಮುದಾಯ ದೇಶದ ಆಸ್ತಿಯಾಗಿದ್ದು, ಅವರ ಆಸಕ್ತಿ ವಿಷಯಕ್ಕೆ ಅವಕಾಶ ನೀಡಿದರೆ, ಸಾಧಕರಾಗಿ ನಾವು ಕಾಣಬಹುದು ಎಂದು ಕಾರವಾರ ಕ್ಷೇತ್ರದ ಫಾದರ್‌ ಡಾ. ರಿಚರ್ಡ್ ರೋಡ್ರಿಗಿಸ್ ಅಭಿಪ್ರಾಯಪಟ್ಟರು.

ನಗರದ ಶರಾವತಿ ಕಲಾಮಂದಿರದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಂಘಟನೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಕ್ರಿಸ್‌ಮಸ್‌ ಗೀತಾ ಸ್ಪರ್ಧಾ ಕಾರ್ಯಕ್ರಮದ ಅಂಗವಾಗಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಸುಮಾರು 2000 ವರ್ಷಕ್ಕಿಂತ ಮೊದಲು ಯೇಸುವಿನ ಜನನವಾಗಿದೆ. ಅಂದಿನಿಂದಿಲೂ ಅವರ ಜೀವನ ವೃತ್ತಾಂತದ ಮೂಲಕ ಅವರ ಆದರ್ಶದ ಗುಣವನ್ನು ನಾವು ಪಾಲಿಸುತ್ತಿದ್ದೇವೆ. ಕಿಸ್ಮಸ್ ಅಂಗವಾಗಿ ವಿವಿಧಡೆ ಅನೇಕ ಕಾರ್ಯಕ್ರಮಗಳು ಜರುಗಲಿದ್ದು, ನಮ್ಮ ಜಿಲ್ಲೆಯಲ್ಲಿ ವಿಶೇಷ ಗೀತಾ ಸ್ಪರ್ಧೆ ಆಯೋಜಿಸಲಾಗಿದೆಮ ಇಂದಿನ ಸ್ಪರ್ಧೆಯ ಪ್ರತಿಯೊರ್ವರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಕಂಡು ಬಂತು. ಯುವಶಕ್ತಿ ಸದೃಡವಾದರೆ ಈ ದೇಶದ ಆಸ್ತಿಯಾಗಲಿದೆ ಎಂದರು.

ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಮಾತನಾಡಿ ಜೀವನವಿಡಿ ನೆನಪಿಡುವ ತಿಂಗಳು ಅಂದರೆ ಡಿಸೆಂಬರ್ ಅಂದರೆ ತಪ್ಪಾಗಲಾರದು.‌ ವರ್ಷದ ಕೊನೆಯ ತಿಂಗಳಿನಲ್ಲಿ ಬರುವ ಕ್ರಿಸ್ಮಸ್ ಹಬ್ಬದ ಅಂಗವಾಗಿ ಇಂದು ನಡೆದ ಹಾಡಿನಲ್ಲಿ ಯೇಸುವಿನ ಜನನ ಹಾಗೂ ತಾಳ್ಮೆ, ಕ್ಷಮಾ ಗುಣಗಳ ಬಗ್ಗೆ ಪ್ರಸ್ತುತ ಪಡಿಸಿದರು. ಇಂತಹ ಕಾರ್ಯಕ್ರಮಗಳು ಧಾರ್ಮಿಕ ಜಾಗೃತಿ ಮೂಡಿಸುತ್ತದೆ ಎಂದು ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದರು.

ಹಿರಿಯ ಪತ್ರಕರ್ತ ಜಿ.ಯು. ಭಟ್ ಮಾತನಾಡಿ ಕ್ರಿಶ್ಚಿಯನ್ ಸಮಾಜದ ಶಿಕ್ಷಣ ಹಾಗೂ ಆಸ್ಪತ್ರೆಗಳಿಂದ ಈ ಭಾಗದ ಎಲ್ಲಾ ಸಮಾಜದವರಿಗೆ ಅನೂಕೂಲವಾಗಿದೆ. ಯೇಸು ಕ್ರಿಸ್ತರ ಪ್ರೀತಿ, ಸೇವೆ, ಶಾಂತಿಯ ಸಂದೇಶ ಅಂದಿನಿಂದ ಇಂದಿನವರೆಗೂ ಪ್ರಸುತ್ತವಾಗಿದೆ. ನಮ್ಮ ತಾಲೂಕಿನಲ್ಲಿರುವ ಮಾರಿಯಾ ಗೊರಟ್ಟಿ ಎನ್ನುವವರು ಹಲವು ವರ್ಷದ ಹಿಂದೆಯೇ ಆಗಮಿಸಿದರು. ಈ ತಾಲೂಕಿನ ಗುಂಡಬಾಳಾದಲ್ಲಿ ಆರೋಗ್ಯ ಮಾತಾ ದೇವಾಲಯ, ಸೆಂಥ್ ಇಗ್ನೆಷಿಯಸ್ ಆಸ್ಪತ್ರೆ, 40 ಕ್ಕೂ ಅಧಿಕ ಶಾಲೆಗಳನ್ನು ತೆರೆದರು.‌ 5ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಧಿಕ ಸಹಕಾರ ನೀಡಿದ್ದಾರೆ. ಇಂತಹ ಹಲವರು ಕ್ರಿಶ್ಚಿಯನ್ ಧರ್ಮದವರು ಜಾತಿಮತ ಭೇದವಿಲ್ಲದೇ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.

ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶಿರಸಿಯ ಶಿಶು ಜೀಸಸ್ ಚರ್ಚ್ ಅಗ್ಸೆಬಾಗಿಲ್, ದ್ವೀತಿಯ ಸ್ಥಾನವನ್ನು ಹೊನ್ನಾವರ ಕಾಸರಕೋಡಿನ ಸಂತ ಜೋಸೆಫ್ ಚರ್ಚ್ ತೃತೀಯಾ ಸ್ಥಾನವನ್ನು ಹಳಿಯಾಳದ ಅವರ್ ಲೇಡಿ ಆಫ್ ಮಿರಾಕಲ್ ಚರ್ಚ್ ಇವರು ಪ್ರಶಸ್ತ್ರಿ ಸ್ವೀಕರಿಸಿದರು. ಇದೇ ವೇಳೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕ್ರತ ಸುಧಾ ಹೊರಟಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಎಂ.ಮಾರುತಿ, ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ಮೇಸ್ತ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕ್ಯಾಥೋಲಿಕ್ ಸಂಘಟನೆಯ ಜಿಲ್ಲಾ ವೇದಿಕೆ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಪ್ರಾಸ್ತವಿಕವಾಗಿ ಮಾತನಾಡಿ ಎಲ್ಲಾ ಧರ್ಮದಲ್ಲಿಯೂ ದೇವರನ್ನು ಆರಾಧಿಸಲು ಭಕ್ತಿಗೀತೆಗಳು ಪ್ರಧಾನವಾಗಿದೆ. ನಮ್ಮ ಕ್ರಿಶ್ಚಿಯನ್ ಧರ್ಮದಲ್ಲಿಯೂ ಕೂಡಾ ಸಂಗೀತವು ತನ್ನದೇ ಆದ ವಿಶೇಷತೆಯನ್ನು ಒಳಗೊಂಡಿದೆ. ಇದನ್ನು ಮನಗಂಡು ಕ್ರಿಸ್ಮಸ್ ಅಂಗವಾಗಿ ಸಂಘಟನೆಯ ವತಿಯಿಂದ ಜಿಲ್ಲಾ ಮಟ್ಟದ ಗೀತಾ ಸ್ಪರ್ಧೆ ಆಯೋಜಿಸಲಾಗಿದ್ದು, ಜಿಲ್ಲೆಯ ವಿವಿಧಡೆಯಿಂದ ತಂಡಗಳು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗೆ ಸಹಕರಿಸಿದೆ ಎಂದರು.

ಹೊನ್ನಾವರ ಕ್ಷೇತ್ರದ ಫಾದರ್ ಬೆಂಜಮಿನ್ ಡಿಸೋಜಾ ಜಗತ್ತಿಗೆ ಶಾಂತಿ ಸಂದೇಶವನ್ನು ಯೇಸುವವರು ಪ್ರತಿಪಾದಿಸಿದರು. ನಾವೆಲ್ಲರೂ ಅವರ ಆದರ್ಶ ಗುಣವನ್ನು ಅಳವಡಿಸಿಕೊಳ್ಳೋಣ ಎಂದು ಸಂದೇಶ ನೀಡಿದರು. ಧಾರ್ಮಿಕ ನಿರ್ದೇಶಕ ಫಾದರ್‌ ಲೆನ್ಸಿ ರೋಡ್ರಿಗಿಸ್, ಫಾದರ್ ಬೆಂಜಮಿನ್, ಕಾರ್ಯದರ್ಶಿ ಕ್ಲೈಮೆಂಟ್ ಗುಡಿನೋ ಉದ್ಯಮಿ ಹೆನ್ರಿ ಲೀಮಾ, ಉಪಸ್ಥಿತರಿದ್ದರು. ಸಂಘಟನೆಯ ಉಪಾಧ್ಯಕ್ಷ ಮುನ್ವೆಲ್ ಸ್ಟೆಫನ್ ರೋಡ್ರಗಿಸ್ ಸ್ವಾಗತಿಸಿದರು. ಜೆಕಬ್ ಫರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು.

ವರದಿ ; ವಿಶ್ವನಾಥ  ಸಾಲ್ಕೋಡ್

About The Author

error: Content is protected !!