ಹೋನ್ನಾವರ : ಸಾಲ್ಕೋಡ್ ಗ್ರಾ.ಪಂ. ಸಭಾಭವನದಲ್ಲಿ ನಡೆದ ಬೀಟ್ ಸದಸ್ಯರ ಸಭೆಯಲ್ಲಿ ಸಾರ್ವಜನಿಕ ಅಹವಾಲು ಆಲಿಸಿದರು. ಅಪರಿಚಿತ ವ್ಯಕ್ತಿಗಳು ಗ್ರಾಮದಲ್ಲಿ ವಸ್ತು ಮಾರಾಟ ಅಥವಾ ಸಹಾಯಹಸ್ತ ಚಾಚುತ್ತಾ ಮನೆ ಬಾಗಿಲಿಗೆ ಬಂದು ಬೆದರಿಕೆ ಒಡುತ್ತಾರೆ. ಗ್ರಾಮದಲ್ಲಿ ಕಳ್ಳತನ, ಅಕ್ರಮ ಚಡುವಟಿಕೆ ಸೇರಿದಂತೆ ವಿಬಿಧ ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿದೆ. ಚಿರತೆ ಕಾಟ, ಬೀದಿ ನಾಯಿ, ಬಿಡಾದಿ ದನಗಳ ಹಾವಳಿಯಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರಾದ ಗೋಪಾಲ ನಾಯ್ಕ ಕೊಳ್ಪೆ, ನಾಗೇಶ ನಾಯ್ಕ ಅರೇಅಂಗಡಿ, ಸಚೀನ ನಾಯ್ಕ ದರ್ಬೆಜಡ್ಡಿ, ಶಿವಾನಂದ ಮರಾಠಿ ತೊಳಸಾಣಿ, ಲಕ್ಷ್ಮಿ ಮುಕ್ರಿ, ನಾರಾಯಣ ನಾಯ್ಕ ಕಾನಕ್ಕಿ ತಿಳಿಸಿದರು.
ಗ್ರಾಮಸ್ಥರ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿ ಬೀಟ್ ವ್ಯವಸ್ಥೆ ಸುಧಾರಿಸಿದರೆ ಗ್ರಾಮದಲ್ಲಿ ಕಾನೂನು ಬಾಹಿರ ಕೃತ್ಯಗಳು ನಿಯಂತ್ರಣವಾಗಲಿದೆ. ಪೊಲೀಸ್ ಇಲಾಖೆಯಿಂದ ಬೀಟ್ ವ್ಯವಸ್ಥೆ ಜಾರಿಯಲ್ಲಿದ್ದು, ವಾರದಲ್ಲಿ ಎರಡು ದಿನ ಜವಬ್ದಾರಿ ವಹಿಸಿದ ಇಲಾಖೆಯ ಸಿಬ್ಬಂದಿಗಳು ಆಗಮಿಸುತ್ತಾರೆ. ಸಾರ್ವಜನಿಕರು ಬೀಟ್ ಪೊಲೀಸರಿಗೆ ಗ್ರಾಮದಲ್ಲಿ ಕಾನೂನು ಬಾಹಿರ ಕೃತ್ಯ ಸಂಭವಿಸಿದರೆ ಮಾಹಿತಿ ನೀಡಬೇಕು. ಸಹಾಯವಾಣಿ ಸಂಖ್ಯೆ 112 ಕರೆ ಮಾಡುವ ಮೂಲಕವು ಮಾಹಿತಿ ನೀಡಬಹುದು. ಕಳೆದ ವರ್ಷ ಗ್ರಾಮದಲ್ಲಿ ನಡೆದ ಗೋ ಹತ್ಯೆ ಪ್ರಕರಣದ ಬಳಿಕ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ಸಿಸಿ ಕ್ಯಾಮರ ಅಳವಡಿಕೆಯ ವಿಷಯದಲ್ಲಿ ಗ್ರಾ.ಪಂ.ಅಥವಾ ದಾನಿಗಳ ಸಹಕಾರದ ಮೇರೆಗೆ ಅಳವಡಿಸುವಂತೆ ಸಲಹೆ ನೀಡಿದರು. ಅಕ್ರಮ ಚಟುವಟಿಕೆಯನ್ನು ಮಟ್ಟ ಹಾಕುವ ಭರವಸೆ ನೀಡಿದರು.
ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಬಾಲಚಂದ್ರ ನಾಯ್ಕ, ಸದಸ್ಯ ಸಚೀನ ನಾಯ್ಕ, ಲಕ್ಷ್ಮಿ ಮುಕ್ರಿ, ಪಿಡಿಓ ಬಾಬುರಾಯ್ ಬೀಟ್ ಪೊಲೀಸ್ ರವಿ ನಾಯ್ಕ ಸಾರ್ವಜನಿಕರು ಇದ್ದರು.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ