March 1, 2026

ಬೈಕ್ ಸಂಚಾರದ ವೇಳೆ ಗಲಾಟೆ

ಭಟ್ಕಳ : ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಸಂಚಾರದ ವೇಳೆ ಉಂಟಾದ ಗಲಾಟೆಗೆ ಸಂಬಂಧಿಸಿ ದೂರು ಹಾಗೂ ಪ್ರತಿದೂರು ದಾಖಲಾಗಿರುವ ಘಟನೆ ಗುರುವಾರ ನಡೆದಿದೆ.
ಗಣೇಶ ನಗರ, ಪುರ ವರ್ಗದ ನಿವಾಸಿ ರೆಹಮತುಲ್ಲಾ ಶೇಖ ಅವರು ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದು, ಮುಂಡಳ್ಳಿಯಲ್ಲಿರುವ ಅಕ್ಕನ ಮನೆಗೆ ರಾತ್ರಿ ಮಾತ್ರೆ ನೀಡಿ ಮರಳುವ ಸಂದರ್ಭ ಮುಂಡಳ್ಳಿ ಹಳ್ಳೇರ ನಿವಾಸಿಗಳಾದ ಗಣೇಶ ಹಳ್ಳೇರ ಹಾಗೂ ಶೇಖರ ಹಳ್ಳೇರ ಅವರು ತಮ್ಮ ಬೈಕ್‌ನ್ನು ಅಡ್ಡಗಟ್ಟಿ, ವೇಗವಾಗಿ ವಾಹನ ಚಲಾಯಿಸುತ್ತಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.


ಈ ಘಟನೆಯ ಸಂಬAಧ ಪ್ರತಿದೂರು ಸಹ ದಾಖಲಾಗಿದ್ದು, ಮುಂಡಳ್ಳಿ ಹಳ್ಳೇರ ನಿವಾಸಿ ಚಂದ್ರಶೇಖರ ಕುಪ್ಪಯ್ತ ಹಳ್ಳೇರ ಅವರು, ವೇಗವಾಗಿ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಗಳನ್ನು ತಡೆದು ಇಲ್ಲಿ ಮಕ್ಕಳು ಓಡಾಡುತ್ತಾರೆ ಎಂದು ತಿಳಿಸಿದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದರು ಎಂದು ಆರೋಪಿಸಿದ್ದಾರೆ. ಈ ವೇಳೆ ಸ್ಥಳೀಯರು ಮಧ್ಯ ಪ್ರವೇಶಿಸಿ ಬುದ್ದಿವಾದ ಹೇಳಿದ್ದಾರೆ ಎಂದು ಪ್ರತಿದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ರೆಹಾನ ರೆಹಮತುಲ್ಲಾ ಶೇಖ, ಹಾಗೂ ಯತೀಶ್ಯಾಮ್ ಅಬ್ದುಲ್ ರೆಹಮಾನ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ

About The Author

error: Content is protected !!