ಹೊನ್ನಾವರ; ತಾಲೂಕಿನ ಸಾಲ್ಕೋಡ್ ದೇವರಾಯ ಎಂ. ನಾಯ್ಕ ಇವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಎರಡು ಕೊಠಡಿ ಹಾಗೂ ಗೃಹಬಳಕೆ ವಸ್ತುಗಳು ಸುಟ್ಟು ಕರಕಲಾಗಿದೆ.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹಿಂಭಾಗದ ಬಾತರೂಂ ಭಾಗದಿಂದ ಬೆಂಕಿ ಕಿಡಿಯೊಂದು ಪ್ಲಾಸ್ಟಿಕ್ ಹೊದಿಕೆ ಮೇಲೆ ಇದ್ದ ಪರಿಣಾಮ, ಮನೆಯ ಅಡುಗೆ ಕೋಣೆ ಹಾಗೂ ಹೊಂದಿಕೊಂಡಿರುವ ಇನ್ನೊಂದು ಕೊಠಡಿಗೆ, ಬೆಂಕಿ ತಗುಲಿದ್ದು, ಮಿಕ್ಸಿ, ವಾಷಿಂಗ್ ಮಿಷನ್ ಸೇರಿದಂತೆ ವಿವಿಧ ಗೃಹಪಯೋಗಿ ವಸ್ತು, ಅಡುಗೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ.
ಮನೆಗೆ ಹೊಂದಿಕೊಂಡಿರುವ ಎರಡು ತೆಂಗಿನ ಮರಕ್ಕೂ ಹಾನಿಯಾಗಿದೆ. ಸ್ಥಳಿಯರ ಸಮಯಪ್ರಜ್ಞೆಯಿಂದ ಬೆಂಕಿ ವ್ಯಾಪಿಸದಂತೆ ನೋಡಿಕೊಂಡು, ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್ ಸೇರಿದಂತೆ ಅನೇಕ ವಸ್ತುಗಳನ್ನು ಸುರಕ್ಷಿತವಾಗಿ ಹೊರತರಲಾಗಿದೆ. ನಂತರ ಅಗ್ನಿಶಾಮಕ ಸಿಬ್ಬಂದಿಗಳು ಸಂಪೂರ್ಣ ಬೆಂಕಿ ನಂದಿಸುವಲ್ಲಿ ನೆರವಾದರು. ಘಟನಾ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಸವಿತಾ ಕವಟಗಿ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
About The Author


More Stories
“ನೇತ್ರದಾನ ಶ್ರೇಷ್ಠ ದಾನ” – ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
ಪರಿಸರ ಸೂಕ್ಷ್ಮ ವಲಯ (ESZ) ಅಧಿಸೂಚನೆ ವಿರೋಧಿಸಿ ಕೇಂದ್ರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಕರೆ
ಸರ್ವೇ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ರಾಮಚಂದ್ರ ಎನ್. ಶೆಟ್ಟಿ ನಿಧನ