ಹೊನ್ನಾವರ: .
ನವೀನ ಯುಗದ ಸವಾಲುಗಳನ್ನು ಎದುರಿಸಿ ಸಾಧನೆಯ ಹಾದಿಯಲ್ಲಿ ನಡೆದು ಮನೆ ಮತ್ತು ಸಮಾಜಕ್ಕೆ ನಮ್ಮ ವಿದ್ಯಾರ್ಥಿಗಳು ಆಶಾಕಿರಣವಾಗಬೇಕು ಎಂದು ರಾಮಕ್ಷತ್ರಿಯ ಮಂಕಿ ಸಂಘದ ಅಧ್ಯಕ್ಷರಾದ ಶ್ರೀ. ಎಚ್.ಆರ್.
ನಾಯ್ಕ ನುಡಿದರು.
ಅವರು ಮಂಕಿ ಕೊಕ್ಕೇಶ್ವರದ ರಾಮಕ್ಷತ್ರಿಯ ಸಭಾಭವನದಲ್ಲಿ ಜಿಲ್ಲಾಮಟ್ಟದ ಆಶಾ ಕಿರಣ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಪ್ರೋ. ಪವನ್ ಕುಮಾರ್ ಕಿರಣ್ ಕೆರೆ ಕಲ್ಮಾಡಿ ಉಡುಪಿ ಅವರು ಮಾತನಾಡಿ ಶ್ರಮದ ಮೊತ್ತವೇ ಯಶಸ್ಸು, ನಮ್ಮ ಜೀವನಕ್ಕೆ ನಾವೇ ಶಿಲ್ಪಿಗಳು, ಸೋಲು ಗೆಲುವಿನ ಮೂಲವಾಗಬೇಕು, ಯಶಸ್ಸು ಬಹುದಿನದ ಪ್ರಯತ್ನದ ಮೊತ್ತ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಸುರೇಶ್ ಜಿ. ನಾಯ್ಕ ರವರು ಕಳೆದ ವರ್ಷ ಆರಂಭಿಸಿದ ಆಶಾಕಿರಣ ಪ್ರಸ್ತುತ 200 ವಿದ್ಯಾರ್ಥಿಗಳು ಹಾಜರಾಗಿದ್ದು ಆಶಾದಾಯಕವಾಗಿದೆ. ಸಾಧನೆ ಸಾಧಕನ ಸ್ವತ್ತು ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದು ಸಮಾಜಕ್ಕೆ ಬೆಳಕಾಗಬೇಕೆಂದರು . ಶರಾವತಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಜೇಶ ಸಾಳೆಹಿತ್ತಲ್ ಮಾತನಾಡಿ ಒಳ್ಳೆಯ ಕೆಲಸಕ್ಕೆ ನಮ್ಮ ಬ್ಯಾಂಕ್ ಬೆಂಬಲಿಸುತ್ತದೆ. ಎರಡನೇ ವರ್ಷವೂ ಸಹ ನಮ್ಮ ಬ್ಯಾಂಕ್ ಸಹಕರಿಸಿದೆ ಎಂದರು.
ವೇದಿಕೆಯಲ್ಲಿ ಮಂಜುನಾಥ ನಾಯ್ಕ, ಅಣ್ಣಪ್ಪನಾಯ್ಕ, ಸುಬ್ರಾಯ ನಾಯ್ಕ, ಪ್ರಶಾಂತ ನಾಯ್ಕ, ಆನಂದ ನಾಯ್ಕ, ರಾಜೇಶ ನಾಯ್ಕ ಉಪಸ್ಥಿತರಿದ್ದರು.
ಕಾರ್ಯದರ್ಶಿಗಳಾದ ಅಣ್ಣಪ್ಪ ನಾಯ್ಕರವರು ಸರ್ವರನ್ನು ಸ್ವಾಗತಿಸಿದರು. ಆನಂದ ನಾಯ್ಕ ಮತ್ತು ಶ್ರೀಮತಿ ರೂಪಾ ಎಮ್ ರವರು ಕಾರ್ಯಕ್ರಮ ನಿರ್ವಹಿಸಿದರು. ಕೆಪಿಎಸ್ ಕಾಲೇಜಿನ ಉಪನ್ಯಾಸಕರಾದ ರಾಜೇಶ್ ನಾಯ್ಕ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದರು. ಗಜಾನನ ನಾಯ್ಕ ರವರು ವಂದಿಸಿದರು. ವಿದ್ಯಾರ್ಥಿಗಳಾದ ಕುಮಾರಿ ಅಪೂರ್ವ ಮತ್ತು ದೀಕ್ಷಾ ಪ್ರಾರ್ಥಿಸಿದರು.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ