ಭಟ್ಕಳ ; . ದೇವರಾಜ ಅರಸು ಸಂಸ್ಥೆ ಬೆಂಗಳೂರು ಇವರು ನಡೆಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ (ಈಡಿಗ ಸಮುದಾಯ) ಸಮಾಜದ ಕುಲಶಾಸ್ತ್ರ ಅಧ್ಯಯನ ವರದಿ ತಯ್ಯಾರಿಕೆಯ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನ ಸಮಾಲೋಚನಾ ಸಭೆ ನಡೆಸಿ ಪೂರಕ ಅಭಿಪ್ರಾಯ ಮತ್ತು ದಾಖಲೆ ಸಂಗ್ರಹಿಸುವ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.
ತಾಲೂಕಿನ ಸಮಾಜದ ಮುಖಂಡರುಗಳಾದ ಎಮ್. ಕೆ. ನಾಯ್ಕ, ಡಿ. ಎಲ್. ನಾಯ್ಕ, ಕೆ. ಆರ್. ನಾಯ್ಕ, ಎಮ್. ಡಿ. ನಾಯ್ಕ ಮಾರುಕೇರಿ, ಸತೀಶಕುಮಾರ ಎನ್. ನಾಯ್ಕ, ಶ್ರೀಧರ ನಾಯ್ಕ ಆಸರಕೇರಿ, ಎಸ್. ಎಂ. ನಾಯ್ಕ , ಶ್ರೀಧರ ನಾಯ್ಕ ಮಣ್ಕುಳಿ ಮುಂತಾದ ಪ್ರಮುಖರ
ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಹಿರಿಯರಾದ ಶ್ರೀಯುತ ಸುಮುಖಾನಂದ ಜಲವಳ್ಳಿ ಸಮಾಜದ ಹಿನ್ನೆಲೆ ಕುರಿತಾಗಿ ವಿವರಿಸಿದರು.
ಡಾ. ನಾಗೇಶ ನಾಯ್ಕ ಕಾಗಾಲ ಪ್ರಾಸ್ಥಾವಿಕವಾಗಿ ಮಾತನಾಡಿ ಘನಸರ್ಕಾರಕ್ಕೆ ಸಲ್ಲಿಕೆಯಾಗುವ ವರದಿಗಾಗಿ ನೀಡುವ ಮಾಹಿತಿಗಳನ್ನು, ಪುರಾವೆಗಳನ್ನು ಒಮ್ಮತದಿಂದ ರೂಪಿಸುವುದು ಸೂಕ್ತ ಎಂದು ತಿಳಿಸಿದರು.
ತಾಲೂಕಿನ ಸಮಾಜದ ಮುಖಂಡರುಗಳು ಮಾತನಾಡಿ ಇನ್ನೊಮ್ಮೆ ಸಮಾಜದ ಸಭೆಯಲ್ಲಿ ಚರ್ಚಿಸುವುದಾಗಿಯೂ ಮತ್ತು ಜಿಲ್ಲೆಯ ಮುಖಂಡರುಗಳು ಒಂದೆಡೆ ಸೇರಿ ಪ್ರಮುಖವಾದ ಮಾಹಿತಿ ಸಂಗ್ರಹದ ಕುರಿತಾಗಿ ಒಮ್ಮತದ ನಿರ್ಧಾರಕ್ಕೆ ಬರುವುದು ಉಚಿತ ಎಂದು ಅಭಿಪ್ರಾಯಸಿದರು.

ಪ್ರಿನ್ಸಿಪಾಲ್ ರಾಜೀವ್ ಕೋನಳ್ಳಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸೂಚನೆ:
1. ನಾಮಧಾರಿ ಕುಲ ಶಾಸ್ತ್ರ ಅಧ್ಯಯನಕ್ಕೆ ಪೂರಕವಾಗಿರುವ ಯಾವುದೇ ಅಧಿಕೃತ ಮಾಹಿತಿ, ದಾಖಲಾತಿ, ಪುಸ್ತಕಗಳು, ಪುರಾವೆಗಳು ಇತ್ಯಾದಿ ವಿನಿಮಯಕ್ಕಾಗಿ ಕೆಳಕಂಡವರನ್ನು
ಸಂಪರ್ಕಿಸಲು ವಿನಂತಿ :
(i) ಪ್ರಿನ್ಸಿಪಾಲ್ ರಾಜೀವ್ ನಾಯ್ಕ ಕೋನಳ್ಳಿ (98453 64966)
(ii) ಡಾ. ನಾಗೇಶ ನಾಯ್ಕ ಕಾಗಾಲ (9481464149)
2. ಫೆಬ್ರುವರಿ, 2026 ರ ಅಂತ್ಯದೊಳಗೆ ಸಂಪರ್ಕಿಸಿ ನೀಡುವುದು ಅಗತ್ಯವಾಗಿದೆ
About The Author


More Stories
ಆನಂದ್ ಆಶ್ರಮ ಕಾನ್ವೆಂಟ್ ಶಾಲೆಯಿಂದ ಶಂಶುದ್ದೀನ್ ಸರ್ಕಲ್ನಲ್ಲಿ ಹೆಲ್ಮೆಟ್ ಜಾಗೃತಿ ಹಾಗೂ ರಸ್ತೆ ಸುರಕ್ಷತಾ ಕಾರ್ಯಕ್ರಮ
ಭಟ್ಕಳದಲ್ಲಿ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ” ಜಾಗೃತಿ ಕಾರ್ಯಕ್ರಮ ಯಶಸ್ವಿ
AITM ಭಟ್ಕಳದಲ್ಲಿ IPR ಮತ್ತು ಪೇಟೆಂಟ್ಗಳ ಕುರಿತು ರಾಷ್ಟ್ರೀಯ ಮಟ್ಟದ ಆನ್ಲೈನ್ ಕಾರ್ಯಾಗಾರ