ಹೊನ್ನಾವರ: ಸಿಂಧೂರ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಹೊನ್ನಾವರ ಇದರ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 25-01-2026 ರಂದು ರಥಸಪ್ತಮಿ ಶುಭ ದಿನದಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಸಂಘದ ವತಿಯಿಂದ ಗಣಹವನ, ಗಣಪತಿ, ಲಕ್ಷ್ಮೀ ಸರಸ್ವತಿ ಆರಾಧನೆಗಳನ್ನು ರಾಮತೀರ್ಥ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ಭಟ್ಟರು ಪುರೋಹಿತ್ಯ ವಹಿಸಿ ಯಶಸ್ವಿಯಾಗಿ ನೆರವೇರಿಸಿದರು. ಅವರು ಸನ್ಮಂಗಲಾನಿ ಭವಂತು, ಲೋಕಾ ಸಮಸ್ತಾ ಸುಖೀನೋ ಭವಂತು, ಯಜಮಾನಸ್ಯ ಕಾಮಃ ಎಂದು ಹರಸಿ ಫಲಮಂತ್ರಾಕ್ಷತೆ ನೀಡಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ ಬಂಧುಗಳು, ಗಣ್ಯರಾದ ಶ್ರೀ ಜೆ.ಟಿ.ಪೈ, ಯುವ ಉದ್ಯಮಿಗಳು ಶ್ರೀ ಮಧುಕರ ಪ್ರಭು, ಶ್ರೀ ಜಗದೀಶ ನಾಯ್ಕ, ಶ್ರೀ ಗಜು ವಾಳ್ಕೆ, ಶ್ರೀ ಸಿ.ಎನ್.ಕಾಮತ್ ಸೇರಿದಂತೆ ಶೇರುದಾರರು ಹಾಗೂ ಠೇವಣಿದಾರರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿ ಸಂಘದ ಒಗ್ಗಟ್ಟು ಹಾಗೂ ಬದ್ಧತೆಯನ್ನು ಪ್ರದರ್ಶಿಸಿದರು.
ಕಾರ್ಯಾಲಯ ಹಾಗೂ ಭದ್ರತಾ ಕೊಠಡಿ ಉದ್ಘಾಟನೆ
ದಿನಾಂಕ 31-01-2026 ರಂದು ಸಂಘದ ಕಾರ್ಯಾಲಯ, ಖಜಾನೆ ಹಾಗೂ ಎಲ್ಲಾ ಹಣಕಾಸು ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಲಾಯಿತು. ಸಂಘದ ಕಚೇರಿಯನ್ನು ಶ್ರೀ ಎಂ.ಜಿ.ಭಟ್, (ಶಿಕ್ಷಣ ತಜ್ಞರು, ಉತ್ತರ ಕನ್ನಡ ಜಿಲ್ಲೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷರು) ತಮ್ಮ ಅಮೃತ ಹಸ್ತದಿಂದ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಹಿರಿಯ ಸಮಾಜಸೇವಕರು ಹಾಗೂ ಉದ್ಯಮಿಗಳಾದ ಶ್ರೀ ಜೆ.ಟಿ.ಪೈ ಅವರು ದೀಪ ಬೆಳಗಿಸಿದರು. ಭದ್ರತಾ ಕೊಠಡಿಯನ್ನು ಫಾದರ್ ಬೆಂಜಮಿನ್ ಫರ್ನಾಂಡೀಸ್, (ಮೂಡ್ಕಣಿ ಚರ್ಚ್, ಹೊನ್ನಾವರ ತಾಲ್ಲೂಕು ಕ್ರೈಸ್ತ ಒಕ್ಕೂಟಗಳ ಡೀನ್) ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಜಿ.ಎನ್.ಗೌಡ, ಹಿರಿಯ ಸಾಹಿತಿ ಡಾ. ಎಸ್.ಡಿ. ಹೆಗಡೆ, ಕಟ್ಟಡ ಮಾಲಿಕ ಶ್ರೀ ಸಂತೋಷ ಶೆಟ್, ನಿವೃತ್ತ ವ್ಯವಸ್ಥಾಪಕರು, ಆರ್ಥಿಕ ಸಲಹೆಗಾರರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಬಂಧುಗಳು ಹಾಜರಿದ್ದರು.
ಸಭಾ ಕಾರ್ಯಕ್ರಮ ಮೂಡಗಣಪತಿ ದೇವಸ್ಥಾನ ಸಭಾಭವನ
ಅದೇ ದಿನ ಮಧ್ಯಾಹ್ನ ಮೂಡಗಣಪತಿ ದೇವಸ್ಥಾನ ಸಭಾಭವನದಲ್ಲಿ ನಡೆದ ಅಧಿಕೃತ ಸಭಾ ಕಾರ್ಯಕ್ರಮದಲ್ಲಿ ಬಂದ ಶೇರುದಾರರು, ಠೇವಣಿದಾರರು ಹಾಗೂ ಹಿತೈಷಿಗಳಿಗೆ ಉಪಹಾರ ಮತ್ತು ಚಹಾ ವ್ಯವಸ್ಥೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕು. ರಶ್ಮಿ ಹಾಗೂ ಸಿಂಚನಾ ಅವರಿಂದ ಪ್ರಾರ್ಥನೆ, ನಾಡಗೀತೆ ಹಾಗೂ ರೈತಗೀತೆ
ಸ್ವಾಗತ ಭಾಷಣ ಶ್ರೀ ಎಂ.ಆರ್. ಹೆಗಡೆ
ಪ್ರಾಸ್ತಾವಿಕ ಶ್ರೀ ಆನಂದ ಆಚಾರ್ಯ
ವರದಿ ವಾಚನ ಉಪಾಧ್ಯಕ್ಷ ಶ್ರೀ ಕೆ.ವಿ. ನಾಯ್ಕ ನೇರವೇರಿಸಿದರು
ಶ್ರೀ ಮಾದೇವ ಸ್ವಾಮಿ, ನೀಲಗೋಡ ಯಕ್ಷಚೌಡೇಶ್ವರಿ ದೇವಸ್ಥಾನ ಬಳ್ಕೂರು ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಸಾಲ ವಿತರಣೆಯಲ್ಲಿ ಜಾಗೃತಿ ಹಾಗೂ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ಅನೇಕ ಗಣ್ಯರು ಸಂಘದ ಅಧ್ಯಕ್ಷರಾದ ಶ್ರೀ ಜಿ.ಎನ್.ಗೌಡ ಅವರ ಪ್ರಾಮಾಣಿಕತೆ, ಜನಪರ ಸೇವೆ ಹಾಗೂ ಸಹಕಾರಿ ಕ್ಷೇತ್ರದ ಅನುಭವವನ್ನು ಶ್ಲಾಘಿಸಿ ಸಂಘವು ರಾಜ್ಯಾದ್ಯಂತ ವಿಸ್ತರಿಸಲಿ ಎಂದು ಶುಭ ಹಾರೈಸಿದರು.
ಸಂಘದ ಉದ್ದೇಶ ಹಾಗೂ ಸೇವೆಗಳು
ಸಂಘವು ಎಲ್ಲ ಸಮುದಾಯಗಳಿಗೂ ಸಮಾನವಾಗಿ ಸೇವೆ ನೀಡುವ ಜಿಲ್ಲಾ ಮಟ್ಟದ ಸಹಕಾರಿ ಸಂಸ್ಥೆಯಾಗಿದ್ದು,
ಬAಗಾರ ಸಾಲ
ಅಡಮಾನ ಸಾಲ
ವಾಹನ ಸಾಲ
ಓವರ್‌ಡ್ರಾಫ್ಟ್
ಠೇವಣಿ ಹಾಗೂ ಪಿಗ್ಮಿ ಯೋಜನೆಗಳು
ವ್ಯಾಪಾರಿ ಸಾಲ
ಇತ್ಯಾದಿ ಸೇವೆಗಳನ್ನು ನಂಬಿಕೆ ಮತ್ತು ವಿಶ್ವಾಸದೊಂದಿಗೆ ನೀಡಲು ಬದ್ಧವಾಗಿದೆ.
ಸಹಕಾರ ಇಲಾಖೆ ಅಧಿಕಾರಿಗಳು, ಶೇರುದಾರರು, ಠೇವಣಿದಾರರು, ಹಿತೈಷಿಗಳು ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹಿರಿಯ ಸಾಹಿತಿಗಳಾದ ಡಾ.ಎಸ್.ಡಿ.ಹೆಗಡೆ, ಕಟ್ಟಡ ಮಾಲಿಕರಾದ ಶ್ರೀ ಸಂತೋಷ ಶೇಟ, ನಿವೃತ್ತ ವಿ.ಎಸ್.ಎಸ್.ಕೊಡಾಣಿ ವ್ಯವಸ್ಥಾಪಕರಾದ ಶ್ರೀ ಕೆ.ಟಿ.ಹಗಡೆ. ಕೊಡಾಣಿ ನಿವೃತ್ತ ವ್ಯವಸ್ಥಾಪಕರು ನಮ್ಮ ಸಂಸ್ಥೆಯ ಆರ್ಥಿಕ ಸಲಹೆಗಾರರಾದ ಶ್ರೀ ಎನ್.ಕೆ.ಹಗಡೆ, ಶ್ರೀ ಜಗದೀಶ ನಾಯ್ಕ, ಉದ್ಯಮಿಗಳು ಕರ್ಕಿ, ಶ್ರೀ ಪ್ರಭು ಪಟಗಾರ, ಶ್ರೀ ನಾಗಪ್ಪ ಕುಪ್ಪು ಗೌಡ, ಶ್ರೀ ಇನಾಯತುಲ್ಲಾ ಶಾಬಂದ್ರಿ ಎಲ್ಲ ಆಡಳಿತ ಕಮಿಟಿ ಸದಸ್ಯರು ಮತ್ತು ಎಲ್ಲಾ ಸಿಬ್ಬಂದಿ ಬಂಧುಗಳು ಹಾಜರಿದ್ದರು.
ಕಾರ್ಯಕ್ರಮ ನಿರ್ವಹಣೆ ಶ್ರೀ ಪ್ರಕಾಶ ನಾಯ್ಕ (ಅಳ್ವಿದಂಡೆ) ಹಾಗೂ ಶ್ರೀ ಸುಧೀಶ ನಾಯ್ಕ ವಹಿಸಿದ್ದರು.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ