March 2, 2026

ಜಿಲ್ಲಾಮಟ್ಟದ ಕೌಂಟಿ ಕ್ರಿಕೇಟ್ ಪಂದ್ಯಾವಳಿ”

ಹೊನ್ನಾವರ; ಯುವಕರು ಕ್ರೀಡೆಯ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಒಗ್ಗೂಡಿ ಉತ್ತಮ ಕಾರ್ಯ ನಡೆಸಬೇಕು ಎಂದು ಕಾಂಗ್ರೇಸ್ ಮುಖಂಡರಾದ ಸುಷ್ಮಾ ರಾಜಗೋಪಾಲ ರೆಡ್ಡಿ ಯುವ ಸಮುದಾಯಕ್ಕೆ ಕರೆ ನೀಡಿದರು.

ತಾಲೂಕಿನ ಸಾಲ್ಕೋಡ್ ಪ್ರಾಥಮಿಕ ಶಾಲಾ ಆವರಣದಲ್ಲಿ ಗೆಳೆಯರ ಬಳಗ ಸಾಲ್ಕೋಡ್ ಇವರು ಆಯೋಜಿಸಿದ “ಜಿಲ್ಲಾಮಟ್ಟದ ಕೌಂಟಿ ಕ್ರಿಕೇಟ್ ಪಂದ್ಯಾವಳಿ” ಡ್ಯಾನ್ಸ ಸ್ಪರ್ಧೆಯ ಟ್ರೋಪಿ ಅನಾವರಣಗೊಳಿಸಿ ಮಾತನಾಡಿದರು.

ಕುಮಟಾ ಹೊನ್ನಾವರ ಕ್ಷೇತ್ರದ ಅಭಿವೃದ್ದಿಯ ಕನಸು ಕಂಡಿದ್ದು, ಎಲ್ಲರ ಸಹಕಾರದ ಮೇರೆಗೆ ಮುಂದಿನ ದಿನ ಇಲ್ಲಿಯ ಮೂಲಭೂತ ಸೌಕರ್ಯ ಬಗೆಹರಿಸುವಲ್ಲಿ ಒತ್ತು ನೀಡೋಣ. ಕ್ರೀಡೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ಇಡೀ ಊರನ್ನೇ ಒಗ್ಗೂಡಿಸಲಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

ಕ್ರೀಡಾಂಗಣ ಉದ್ಘಾಟಿಸಿದ ಅಭಿಮಾನ ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ಸಂದೀಪ ಪೂಜಾರಿ ಮಾತನಾಡಿ ಕ್ರೀಡೆ ದೈಹಿಕ ಮಾನಸಿಕವಾಗಿ ಸದೃಡ ಮಾಡಲಿದೆ. ಹಲವು ಕ್ರೀಡಾ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಪ್ರತಿಭೆಯು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಅಂತಹ ಪ್ರತಿಭೆಗಳು ಹೊರಹೊಮ್ಮಲು ಗ್ರಾಮೀಣ ಕ್ರೀಡಾಕೂಟ ಪ್ರಮುಖ ಪಾತ್ರ ವಹಿಸಲಿದೆ. ಯುವಕರು ದೇಶದ ಶಕ್ತಿಯಾಗಿದ್ದು, ಸಮಾಜ ಸಂಘಟಿತವಾಗಲು ಇವರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಲ್ಕೋಡ್ ಗ್ರಾ.ಪಂ. ಉಪಾಧ್ಯಕ್ಷ ಬಾಲಚಂದ್ರ ನಾಯ್ಕ, ಸದಸ್ಯ ಸಚೀನ ನಾಯ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಗಜಾನನ ನಾಯ್ಕ, ಗ್ರಾಮದ ಅಭಿವೃದ್ದಿ ಕಾರ್ಯದ ಬಗ್ಗೆ ವಿವರಿಸಿದರು.

ಸಾಲ್ಕೋಡ್ ಗ್ರಾ.ಪಂ. ಅಧ್ಯಕ್ಷೆ ಯಮುನಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ.ಸದಸ್ಯ ಪಾರ್ತೂನ್ ಅಂತೋನ್ ಮೆಂಡಿಸ್, ಲಕ್ಷ್ಮೀ ಮುಕ್ರಿ, ಉದ್ದಿಮೆದಾರರಾದ‌ ಆದರ್ಶ ನಾಯ್ಕ, ಗೆಳೆಯರ ಬಳಗ ಸಂಘಟನೆಯ ಅಧ್ಯಕ್ಷ ವಸಂತ ನಾಯ್ಕ, ಕ್ರೀಡಾಪಟುಗಳು ಉಪಸ್ಥಿತರಿದ್ದರು. ಶಿಕ್ಷಕ ಸತೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
20 ಕ್ಕೂ ಹೆಚ್ಚು ಸ್ಪರ್ಧಾಳುಗಳು ಡಾನ್ಸ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

About The Author

error: Content is protected !!