ಹೊನ್ನಾವರ : ನಶಿಸುತ್ತಿರುವ ಜಾನಪದ ಸಾಹಿತ್ಯದ ಜೀವಂತಿಕೆಗಾಗಿ ಸರಕಾರ ಇಂತಹ ಗ್ರಾಮೀಣ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಸಾಹಿತಿ ರೋಹಿದಾಸ ನಾಯಕ ಹೇಳಿದರು.
ಇತ್ತೀಚೆಗೆ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪುರಸ್ಕಾರಕ್ಕೆ ಭಾಜನರಾದ ಹೊದಿಕೆ ಶಿರೂರಿನ ಗೌರಿ ನಾಯ್ಕರವರ ಮನೆಯಂಗಳದಲ್ಲಿ ಜಿಲ್ಲಾ ಮತ್ತು ತಾಲೂಕಾ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ “ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮನುಷ್ಯನ ಶ್ರಮದ ಸಂಕೇತವೇ ಜಾನಪದವಾಗಿ ಅಕ್ಷರಗಳಿಲ್ಲದ ಕಾಲದ ಜನಪದರ ಸಾಮೂಹಿಕ ಅಭಿವ್ಯಕ್ತಿಯನ್ನು ನೃತ್ಯ, ಕುಣಿತ, ಹಾಡಿನ ಮೂಲಕ ಹೊರಹಾಕಿ ಸಂತೋಷಪಡುವ ಜಾನಪದ ಕಲೆ ಇಂದು ನಶಿಸುತ್ತಿದೆ. ಅದನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಇನ್ನೊವ9 ಮುಖ್ಯ ಅತಿಥಿ ಸಾಹಿತಿ ಡಾ. ವಸಂತ ಪೆಲ9 ಮಾತನಾಡಿ, ಜಾನಪದ ಶ್ರೀಮಂತಿಕೆಯ ಗೌರಿ ನಾಯ್ಕರ ಮನೆಗೆ ಬಂದು ಅವರ ಸಹಜ, ಸ್ವಾಭಾವಿಕವಾದ ಪರಿಸರದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.ನಸಿಸುತ್ತಿರುವ ಜಾನಪದ ಅಕ್ಷರ ರೂಪದಲ್ಲಿದ್ದರೆ ಸಾಲದು. ಅವರ ಹಾಡುಗಳನ್ನು ಧ್ವನಿ ಮುದ್ರಣ ಮಾಡಿ ದಾಖಲಿಸಿದರೆ ಮಾತ್ರ ಅದು ಶಾಶ್ವತವಾಗಿ ನೆನಪಿರಲು ಸಾಧ್ಯ ಎಂದರು.
ಸಾಹಿತಿ ಸುಮುಖಾನಂದ ಜಲವಳ್ಳಿ ಮಾತನಾಡಿ, ಶಿಷ್ಟ ಕಾವ್ಯಕಿಂತಲೂ ಅದ್ಭುತವಾದ ಕಾವ್ಯ ಪರಂಪರೆ ಜನಪದದಲ್ಲಿದೆ. ಒಂದೊAದು ಖಂಡ ಕಾವ್ಯವು ಬದುಕಿನ ದರ್ಶನವನ್ನು ಮಾಡಿಕೊಡುತ್ತದೆ. ನಾಮಧಾರಿಗಳಲ್ಲಿ ಸಾಕಷ್ಟು ಸಮೃದ್ಧವಾದ ಸಾಹಿತಿಕ ಜನಪದ ಮೌಲ್ಯಗಳು ಅಡಗಿದೆ ಎಂದರು.
ಸಾಹಿತ್ಯ ಪರಿಷತ್ತಿನ ಪರವಾಗಿ ಸನ್ಮಾನಿಸಿದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ ಮಾತನಾಡಿ, ಅತ್ಯಂತ ಶ್ರೀಮಂತವಾದ ಜನಪದ ಕಲೆ ಮಾಯವಾಗುತ್ತಿದೆ. ಸಾಹಿತ್ಯ ಪರಿಷತ್ತು ಸಾಧಕರಿಗೆ ಗೌರವಿಸುವುದರ ಮೂಲಕ ಜಾನಪದ ಕಲೆಯ ಉಳಿವಿಗಾಗಿ ಮತ್ತು ಅದನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸಕ್ಕಾಗಿ ಸದಾ ಕಲಾವಿದರೊಂದಿಗೆ ಕೈಜೋಡಿಸುತ್ತೇವೆ ಎಂದರು.
ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ ಪ್ರಸ್ತಾವಿಕ ಮಾತನಾಡಿ, ಪ್ರತಿಭೆ ಎಂಬುದು ಯಾರ ಸ್ವತ್ತಲ್ಲ. ಜಾನಪದ ಕಲೆಯ ಅಳಿವು- ಉಳಿವು ಆ ಕಲಾವಿದರ ಕೈಯಲ್ಲಿದೆ ಹೊರತು ಅಕ್ಷರ ರೂಪದಲ್ಲಿಲ್ಲ ಎಂದರು. ಯಾವುದೇ ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿ ಗೌರಿ ನಾಯ್ಕರ ಪ್ರತಿಭೆಯನ್ನು ಗುರುತಿಸಿದ ಕರ್ನಾಟಕ ಜಾನಪದ ಅಕಾಡೆಮಿಗೆ ಅಭಿನಂದನೆ ಸಲ್ಲಿಸಿದರು. ಯುವಜನೆ ಸೇವಾ ಕ್ರೀಡಾಧಿಕಾರಿ ಸುದೀಶ ನಾಯ್ಕ ಮಾತನಾಡಿ, ಪ್ರಚಾರ,ಪ್ರಸಿದ್ಧಿ ಬಯಸದ ಅಪರೂಪದ ಗ್ರಾಮೀಣ ಪ್ರತಿಭೆಗೆ ಒಲಿದು ಬಂದ ವಾರ್ಷಿಕ ಗೌರವ ಪ್ರಶಸ್ತಿ ಇದಾಗಿದೆ ಎಂದರು.
ವೇದಿಕೆಯಲ್ಲಿ ಸಾಹಿತಿ ಪುಟ್ಟು ಕುಲ್ಕರ್ಣಿ, ಎನ್. ಆರ್. ಗಜು, ಪ್ರಾಂಶುಪಾಲರಾದ ರಾಜೀವ ನಾಯ್ಕ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಮುತು9ಜಾ ಹುಸೇನ್, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಎಚ್.ಎಂ.ಮಾರುತಿ, ಸಾಹಿತಿ ಪ್ರಕಾಶ ನಾಯ್ಕ, ಸಾಲ್ಕೋಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರಜನಿ ನಾಯ್ಕ, ಉಪಾಧ್ಯಕ್ಷ ಸಚಿನ ನಾಯ್ಕ, ಚಂದಾವರ ಗ್ರಾ.ಪಂ. ಹನುಮಂತ ನಾಯ್ಕ, ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಗಜಾನನ ನಾಯ್ಕ, ಶಿಕ್ಷಕ ಸಂಘದ ಶಂಕರ ನಾಯ್ಕ, ಎಸ್.ಡಿ. ಎಂ. ಸಿ. ಅಧ್ಯಕ್ಷ ಮಾರುತಿ ನಾಯ್ಕ, ಉದ್ದಿಮೆದಾರ ಗಿರೀಶ ನಾಯ್ಕ, ಶಿವಾನಂದ ಮರಾಠಿ, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಜನಾರ್ಧನ ಕಾಣಕೋಣಕರ್, ಮಹೇಶ ಭಂಡಾರಿ, ಕೇಶವ ಶೆಟ್ಟಿ, ಶುಭಾ ಸಭಾಹಿತ, ಸಾಧನ ಬರ್ಗಿ, ವಿಶ್ವನಾಥ ನಾಯ್ಕ, ಮೀನಾ ಗೌಡ, ಗಜಾನನ ನಾಯ್ಕ, ಗೋವಿಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗೌರಿ ನಾಯ್ಕ ಮತ್ತು ನಾಗಪ್ಪ ನಾಯ್ಕ ದಂಪತಿಗಳನ್ನು ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಪರಿಷತ್ತಿನ ಅಧ್ಯಕ್ಷ ಎಸ್. ಹೆಚ್. ಗೌಡ ಸ್ವಾಗತಿಸಿದರೆ, ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ ನಾಯ್ಕ ನಿರೂಪಿಸಿ ವಂದಿಸಿದರು.

More Stories
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ