August 30, 2025

ಪೊಲೀಸ್ ಸೇವೆಗೆ ಮಹಿಳಾ ಮೋರ್ಚಾದಿಂದ ರಾಖಿ ಗೌರವ

ಭಟ್ಕಳ : ಉತ್ತರ ಕನ್ನಡ ಜಿಲ್ಲಾ ಹಾಗೂ ಭಟ್ಕಳ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ನಗರ ಪೊಲೀಸ್ ಠಾಣೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.

ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನೀತಾ ಡಿ. ಹೆರೂರ್ಕರ್ ಸ್ವಾಗತಿಸಿ, ಜಿಲ್ಲಾ ಅಧ್ಯಕ್ಷೆ ಶಿವಾನಿ ಶಾಂತಾರಾಮ ಮಾತನಾಡಿ, ಜನರ ಭದ್ರತೆಗೆ ಸೇವೆ ಸಲ್ಲಿಸುವ ಪೊಲೀಸರ ತ್ಯಾಗ ಮರೆಯಲಾಗದು. ರಾಖಿ ಕಟ್ಟುವುದು ಅವರ ಸೇವೆಗೆ ಕೃತಜ್ಞತೆಯ ಸಂಕೇತ ಎಂದರು.

ನAತರ ಮಹಿಳಾ ಮೋರ್ಚಾ ಪದಾಧಿಕಾರಿಗಳು ಕುಂಕುಮ ಹಚ್ಚಿ, ಆರತಿ ಬೆಳಗಿ, ಸಿಬ್ಬಂದಿಗೆ ರಾಖಿ ಕಟ್ಟಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ಗೊಂಡ, ಜಿಲ್ಲಾ ಕಾರ್ಯದರ್ಶಿ ಶ್ರೇಯಾ ಮಹಾಲೆ, ಪ್ರಧಾನ ಕಾರ್ಯದರ್ಶಿಗಳು ಕುಪ್ಪುಗೊಂಡ ಹಾಗೂ ವಿಜಯ ನಾಯ್ಕ, ಕಾರ್ಯಕಾರಿಣಿ ಸದಸ್ಯೆ ಯಮುನಾ ದಿನೇಶ್ ನಾಯ್ಕ, ಪ್ರಮುಖ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಉಪಸ್ಥಿತರಿದ್ದರು.

About The Author