March 5, 2026

ಬೇಸಿಗೆಯ ಆರಂಭದಲ್ಲೆ ಕುಡಿಯುವ ನೀರಿಗಾಗಿ ಪರದಾಟ

ಹೊನ್ನಾವರ: ಪಟ್ಟಣ ವ್ಯಾಪ್ತಿಗೆ ಹೊಂದಿಕೊಂಡಿರುವ  ಮುಗ್ವಾ ಗ್ರಾ.ಪಂ.  ಆರೋಳ್ಳಿ ಪ್ಲಾಟ್ ನಲ್ಲಿ ಬೇಸಿಗೆಯ ಆರಂಭದಲ್ಲೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ವ್ಯಾಪ್ತಿಗೆ ಅಣತಿಬದೂರದಲ್ಲಿರುವ ಈ ಪ್ರದೇಶದಲ್ಲಿ ಶರಾವತಿ ನೀರು ಸಂಗ್ರಹಣ ಘಟಕ ನೋಡಬಹುದಾಗಿದ್ದರೂ, ಇವರಿಗೆ ಪ್ರತಿ ವರ್ಷವು ಫೆಬ್ರವರಿ ಮಾರ್ಚ್ ಅವಧಿಯಲ್ಲಿಯೇ ನೀರಿನ ಬರ ಕಾಡುತ್ತಿದೆ. ಬಯಲು ಸಿಮೆಯಂತೆ ಒಂದು ಕೊಡ ಕುಡಿಯುವ ನೀರಿನ ಪಡೆಯಲು ಕೀ.ಮೀ ದೂರ ಹೊದರು ಶುದ್ದ ಕುಡಿಯುವ ನೀರು ಸಿಗದೆ ಹಣ ಕೊಟ್ಟು ಖರೀದಿಸಬೇಕಿದೆ.  ಬೊರವೆಲ್ ಸಂಪರ್ಕದ ಮೂಲಕ ಕುಡಿಯಲು ಬರುವ ನೀರಿನ ಪೈಪ್ ನಲ್ಲೂ ಸಹ ಮಣ್ಣು ಹೊಕ್ಕಿ ನೀರು ಬರುತ್ತಿಲ್ಲ. ಪೈಪ್ ನಲ್ಲಿ ಮಣ್ಣು ತೆಗೆಯಲು ಅಥವಾ ಬೇರೆ ಪೈಪ್ ಅಳವಡಿಸಲು ಯಾವುದೇ ಅಧಿಕಾರಿಗಳು ಮುಂದಾಗುತ್ತಿಲ್ಲ. ಮೂಲ ಸಮಸ್ಯೆಗಳೇನು? ಎನ್ನುವುದರ ಬಗ್ಗೆ ಗ್ರಾಮ ಪಂಚಾಯತ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಳಿ ಮುಂದಾಗುತ್ತಿಲ್ಲ ಎನ್ನುವುದು ಸಾರ್ವಜನಿಕ ಆರೋಪವಾಗಿದೆ. ಜನರ ಬಳಿ  ಚುನಾವಣೆಯ ಸಮಯದಲ್ಲಿ ಆಶ್ವಾಸಣೆ ನೀಡಿ ಗೆದ್ದ ಬಳಿಕ ಕನಿಷ್ಠ ಪಕ್ಷ ಶಾಶ್ವತ ಪರಿಹಾರವಾಗಬೇಕೆನ್ನುವ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎನ್ನುವ ಆರೋಪವು ಇದೆ.

ಬುಧವಾರ  ಮುಗ್ವಾ ಗ್ರಾ.ಪಂ. ಪಿ.ಡಿ.ಓ ರಾಘವ ಮೇಸ್ತ ಇವರನ್ನು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ, ಕುಂದುಕೊರತೆಗಳ ಬಗ್ಗೆ ಗ್ರಾಮದವರ ಜೊತೆ ಚರ್ಚಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ  ಜಲಜೀವನ ಮಿಷನ್ ಯೋಜನೆಯಡಿ ನಲ್ಲಿಯ ಸಂಪರ್ಕ ಈಗಾಗಲೇ  ಅಳವಡಿಕೇಯಾಗಿದೆ. ಅರ್ಬನ್ ವಾಟರ್ ಸಪ್ಲೈನಿಂದ ಇಲ್ಲಿರುವ ವಾಟರ್ ಟ್ಯಾಂಕ್ ಗೆ ನೀರಿನ್ನು ತುಂಬಿ  ಸಪ್ಲೈ ಮಾಡುತ್ತಿದ್ದೇವೆ. ಜೆಜೆಎಮ್ ಕಾಮಗಾರಿಯಲ್ಲಿ ಬೂಸ್ಟರ್ ಪಂಪ್ ಅಳವಡಿಸಬೇಕಿತ್ತು. ಆದರೆ ಅದು ಉತ್ಪಾದನೆಯಾಗಿಲ್ಲದ್ದರಿಂದ ಸ್ವಲ್ಪ ಸಮಯಾವಕಾಶ ಬೇಕಾಗಿದೆ. ಒಂದೊಂದು ಗೇಟ್ ವಾಲ್ ಗೆ 15 ನಿಮಿಷ ನೀರನ್ನು ಬಿಡಲು ಯೋಚಿಸಿದ್ದು, ಆದರೂ ಸಹ ನೀರು ಬರದೇ ಇರುವುದರಿಂದ ಈ ತಿಂಗಳ ಓಳಗೆ ಬೂಸ್ಟರ್ ಪಂಪ್ ಅಳವಡಿಸುವದರೊಂಧಿಗೆ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.

ಗ್ರಾಮಕ್ಕೆ ಪಂಚಾಯತಿ ವ್ಯಾಪ್ತಿಯ ಬೊರವೆಲ್  ನೀರು ಹಾಗೂ ಜಲಜೀವನ ಮಿಷನ್ ನೀರಿನ ವ್ಯವಸ್ಥೆ ಆದರೂ ಸಹ ಸಮರ್ಪಕ ನೀರಿನ ಸರಬರಾಜು ಆಗದೇ ಇರುವುದು ವಿಪರ್ಯಾಸವಾಗಿದೆ ಇದೆ ವೇಳೆ ಸಾರ್ವಜನಿಕರು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಮುಂದಿನ ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವ ಭರವಸೆಯ ಬಳಿಕ ಆಕ್ರೋಶ ತಣ್ಣಗಾಯಿತು.

ಸ್ಥಳಿಯ ಗ್ರಾ.ಪಂ. ಮಟ್ಟದ ಅಧಿಕಾರಿಗಳು ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದ ರೀತಿಯಲ್ಲಿ ಪ್ರಥಮ ಆದ್ಯತೆಯಾಗಿ ಸ್ಪಂದಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!