August 30, 2025

ತಂಬಾಕು ಸೇವನೆಗೆ ಒತ್ತಡದ ಜೀವನ ಕಾರಣ: ಡಾ. ಗಜಾನನ ಎಮ್ ಜಿ

ಹೊನ್ನಾವರ ; ನಿತ್ಯಜೀವನದಲ್ಲಿ ಒತ್ತಡದ ನಿವಾರಣೆಗಾಗಿ ಜನರು ತಂಬಾಕಿನAತಹ ಮಾದಕ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ತಂಬಾಕಿನಿAದ ಉಂಟಾಗುವ ದುಷ್ಪರಿಣಾಮಗಳ ಜೊತೆಗೆ ತಂಬಾಕು ತ್ಯಜಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಹೆಚ್ಚಿನ ಪ್ರಚಾರ ನಡೆಸುವ ಅವಶ್ಯಕತೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕಡತೋಕಾದ ನೂತನ ವೈದ್ಯಾಧಿಕಾರಿಗಳಾದ ಡಾ. ಗಜಾನನ ಎಮ್. ಜಿ. ಅಭಿಪ್ರಾಯಪಟ್ಟರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ಪ್ರಾಥಮಿಕ ಆರೋಗ್ಯ ಕಡತೋಕಾ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ ಕಾಯಿದೆ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಮಾರಕವಾಗಿದ್ದು ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಭರಿಸುವ ವೆಚ್ಚವು ಸರ್ಕಾರಕ್ಕೆ ತಂಬಾಕಿನಿAದ ಬರುವ ಆದಾಯಕ್ಕಿಂತ ಹೆಚ್ಚಿನದಾಗಿದೆ. ಇತ್ತೀಚೆಗೆ ಸರ್ಕಾರವು ತಂಬಾಕು ನಿಯಂತ್ರಣ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ್ದು 21 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಅವರಿಂದ ಮಾರಾಟ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯ ದಂಡದ ಮೊತ್ತವನ್ನು ರೂ.1000 ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ತಂಬಾಕು ಬಳಸುವವರು ತ್ಯಜಿಸಲು ಹಾಗೂ ಇತರರು ತಂಬಾಕು ಬಳಕೆಯನ್ನು ಹೊಸದಾಗಿ ಪ್ರಾರಂಭಿಸದAತೆ ಕಾರ್ಯಕ್ರಮದಲ್ಲಿ ತಿಳುವಳಿಕೆ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಕಡತೋಕಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಭಟ್‌ರವರು ಜನರು ದುಶ್ಚಟಗಳಿಗೆ ಬಲಿಯಾಗದೇ ಸಂಸ್ಕಾರಯುತ ಜೀವನ ನಡೆಸುವಂತೆ ಕಿವಿ ಮಾತು ಹೇಳಿದರು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಪಿಜಿಡಿಎಚ್‌ಪಿಇ ಪ್ರಶಿಕ್ಷಣಾರ್ಥಿ ಶ್ರೀ ಆನಂದ ಶೇಟ್ ಕಾರ್ಯಕ್ರಮವನ್ನು ಆಯೋಜಿಸಿ, ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರು, ಸದಸ್ಯರು ಸಾರ್ವಜನಿಕರು, ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

About The Author