August 29, 2025

ದೇಶಭಕ್ತಿ ಗೀತೆ, ಸಾಮಾನ್ಯ ಜ್ಞಾನ ಸ್ಪರ್ಧೆ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನ

ಹೊನ್ನಾವರ : ಸೈನಿಕ ಸೇವೆಯು ಆತ್ಮ ತೃಪ್ತಿಯನ್ನು ಕೊಡುತ್ತದೆ, ಜನರಿಂದ ಗೌರವಿಸಲ್ಪಡುತ್ತದೆ, ರಾಷ್ಟ್ರವನ್ನು ರಕ್ಷಿಸುತ್ತದೆ ಎಂದು ನಿವೃತ್ತ ಸೈನಿಕ ಶ್ರೀ ಪಿ ಎನ್ ಹೆಗಡೆಯವರು ನುಡಿದರು. ಇವರು ಕನ್ನಡ ಸಾಹಿತ್ಯ ಪರಿಷತ್ತು, ಆರ್ಟ್ ಆಫ್ ಲಿವಿಂಗ್ ಹಾಗೂ ಸಮರ್ಪಣ ವೇದಿಕೆ ಗುಣವಂತೆ ಕೆಳಗಿನೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದೇಶಭಕ್ತಿ ಗೀತೆ, ಸಾಮಾನ್ಯ ಜ್ಞಾನ ಸ್ಪರ್ಧೆ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದರು.

ಸೈನಿಕರಾಗಿ ದೇಶ ಸೇವೆಯನ್ನು ಮಾಡಿ ರಾಷ್ಟ್ರವನ್ನು ಬಲಿಷ್ಠ ಗೊಳಿಸಿ, ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಳ್ಳಿ ಎಂದು ನುಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಟಾದ ಎ ಸಿ ಎಫ್ ಶ್ರೀ ಕೃಷ್ಣಗೌಡರವರು ಮಾತನಾಡಿ ಇದು ಸ್ಪರ್ಧಾತ್ಮಕ ಯುಗವಾಗಿದೆ, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್ ಎಚ್ ಗೌಡರು ವಹಿಸಿದ್ದರು.

ಡಾ ನರಸಿಂಹ ಪಂಡಿತ, ಎಂ ವಿ ಹೆಗಡೆ ಕೆರೆಮನೆ, ದಾಮೋದರ ದೇವಾಡಿಗರವರು ಅತಿಥಿಗಳಾಗಿ ಆಗಮಿಸಿದ್ದರು. ಜಿ ಜಿ ಹೆಗಡೆ ಪ್ರಾರ್ಥಿಸಿದರು, ಎಂ ಎಸ್ ಹೆಗಡೆ ಗುಣವಂತೆ ಸ್ವಾಗತಿಸಿದರು, ಅನಂತ ಎಚ್ ವಂದಿಸಿದರು, ಮಾದೇವಿ ಗೌಡ ನಿರ್ವಹಿಸಿದರು, ಗಣ್ಯರಾದ ಶ್ರೀ ಎಲ್ ಎಂ ಹೆಗಡೆ, ಗೋವಿಂದ ಗೌಡ, ವೆಂಕಟೇಶ ಮಡಿವಾಳ, ಎಂ ಪಿ ಯಾಜಿ ಮೊದಲಾದವರು ಉಪಸ್ಥಿತರಿದ್ದರು .

About The Author