August 30, 2025

ಪ್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ (ರಿ), ಕಿಕ್ಕೇರಿ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ

ಕಿಕ್ಕೇರಿ ; ಸ್ವತಂತ್ರ ದಿನಾಚರಣೆಯ ಅಂಗವಾಗಿ ಪ್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ (ರಿ), ಕಿಕ್ಕೇರಿ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಮತ, ಗಾನವಿ, ಅಮೃತ, ಕೀರ್ತನ, ಶ್ವೇತ, ಕಾವ್ಯ, ರವರಿಗೆ ಕ್ಲಬ್‌ನ ಪದಾಧಿಕಾರಿಗಳು ಸನ್ಮಾನ ಮಾಡಿ ಗೌರವಿಸಿದರು. ಈ ಹಿನ್ನಲೆಯಲ್ಲಿ ಪ್ರೆಂಡ್ಸ್ ಕ್ಲಬ್ ಸದಸ್ಯರು ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು ಮತ್ತು ಮುಂದಿನ ವಿದ್ಯಾಭ್ಯಾಸಕ್ಕೆ ಉತ್ತೇಜನೆ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಮಾತನಾಡಿದ ಕ್ಲಬ್ ಅಧ್ಯಕ್ಷರು,ಕೃಷ್ಣೆಗೌಡ ಕೆ. ಡಿ ರವರು ನನಿಮ್ಮ ಸಾಧನೆ ನಮ್ಮ ಹಳ್ಳಿಯ ಹೆಮ್ಮೆ. ಇನ್ನು ಮುಂದಿನ ಹಂತಗಳಲ್ಲಿ ಇನ್ನಷ್ಟು ಶ್ರಮಿಸಿ ಉನ್ನತ ಶಿಕ್ಷಣದ ಕಡೆಗೆ ಹೆಜ್ಜೆ ಇಡಿ. ಈ ಸಾಧನೆ ಒಂದು ಆರಂಭವಷ್ಟೇ. ಮುಂದೆ ನಿಮಗಿದೆ ಅನೇಕ ಸಾಧನೆಗಳ ಹಾದಿ. ನಿಮ್ಮ ಸಾಧನೆಯ ಮೂಲಕ ಪೋಷಕರು, ಶಾಲೆ ಮತ್ತು ಸಮುದಾಯದ ಹೆಮ್ಮೆ ಹೆಚ್ಚಿಸುತ್ತೀರಿ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಅವರು ಮುಂದಿನ ಶಿಕ್ಷಣದಲ್ಲಿಯೂ ಆಸಕ್ತಿ ಕಳೆದುಕೊಳ್ಳದೇ, ಗುರಿ ನಿಶ್ಚಯಿಸಿ ಅಧ್ಯಯನ ಮಾಡುವಂತೆ ಕರೆ ನೀಡಿದರು. ಕಠಿಣ ಪರಿಶ್ರಮ, ಸಮಯ ಪಾಲನೆ, ಹಾಗೂ ಆತ್ಮವಿಶ್ವಾಸದಿಂದ ಎಲ್ಲರಿಗೂ ಯಶಸ್ಸು ದೊರಕಬಹುದು” ಎಂಬ ಸಂದೇಶ ನೀಡಿದರು. ಹಾಜರಿದ್ದ ವಿದ್ಯಾರ್ಥಿಗಳು ಹಾಗೂ ಪಾಲಕರು ಕ್ಲಬ್‌ನ ಈ ಸದುದ್ದೇಶಿತ ಕಾರ್ಯಕ್ರಮವನ್ನು ಮೆಚ್ಚುಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೃಷ್ಣೆಗೌಡ ಕೆ. ಡಿ. ಅಧ್ಯಕ್ಷರು, ಜಯರಾಮು ಉಪಾಧ್ಯಕ್ಷರು, ರವಿ ಎಸ್, ಕಾರ್ಯದರ್ಶಿ, ಕೆ. ಪಿ. ಉಮೇಶ್ ಖಜಾಂಚಿ,ನಿರ್ದೇಶಕರುಗಳು ನೀಲಕಂಠಯ್ಯ, ಲಿಂಗರಾಜೇಗೌಡ, ಬಾಲಚಂದ್ರ, ರಮೇಶ್ (ಎಸ್. ಟಿ. ಡಿ), ಚಂದ್ರುಶೇಖರ್ ಕೆ. ಕೆ. ಸೀತಾರಾಮು,ಎಲ್. ಐ. ಸಿ ದೇವರಾಜು, ವಡಕಹಳ್ಳಿ ಚಿಕ್ಕೇಗೌಡ ಮುಕುಂದರವರು ಇನ್ನು ಮುಂತಾದವರು ಭಾಗಿಯಾಗಿದ್ದರು

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

About The Author