November 19, 2025

ಮಕ್ಕಳು ಸಮಾಜದ ಆಸ್ತಿಯಿದ್ದಂತೆ -ಎಂ. ಎಸ್. ನಾಯ್ಕ

ಹೊನ್ನಾವರ : ಮಕ್ಕಳು ಸಮಾಜದ ಆಸ್ತಿಯಂತೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದರೆ ಅವರು ನಮ್ಮ ಸಮಾಜದ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಂ.ಎಸ್. ನಾಯ್ಕ ಹೇಳಿದರು.

ಉತ್ತರ ಕನ್ನಡ ಜಿಲ್ಲಾ ನಾಮಧಾರಿ ನೌಕರರ ಸಂಘ ಹೊನ್ನಾವರ ಶಾಖೆ ಏರ್ಪಡಿಸಿದ ಎಸ್. ಎಸ್. ಎಲ್. ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರತಿಭೆ ಸಾಧಕನ ಸ್ವತ್ತೆ ಹೊರತು ಸೋಮಾರಿಗಳ ಸತ್ತಲ್ಲ. ನಿರಂತರ ಪರಿಶ್ರಮ ಮತ್ತು ಸತತ ಅಭ್ಯಾಸದಿಂದ ನಿಮ್ಮ ಸಾಧನೆಯ ಗುರಿ ಮುಟ್ಟಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಸುದೀಶ ನಾಯ್ಕ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ವಿಫುಲವಾದ ಅವಕಾಶಗಳಿದ್ದು ಅದನ್ನು ಗುರಿ ಮುಟ್ಟಲು ನಿರಂತರ ಶ್ರಮ ವಹಿಸಬೇಕು. ಸ್ಪರ್ಧಾ ಜಗತ್ತಿಗೆ ಸವಾಲಾಗಿ ಬೆಳೆಯಬೇಕು. ಯೋಜನೆ ಯೋಚನೆಯೊಂದಿಗೆ ಮುನ್ನಡೆದರೆ ನಿಮ್ಮ ಕನಸಿನ ಮಾರ್ಗ ತಲುಪುಲು ಸಾಧ್ಯ ಎಂದರು.

ಪ್ರತಿಭಾ ಪುರಸ್ಕಾರ ವಿತರಿಸಿ ವಾಣಿಜ್ಯ ತೆರಿಗೆ ಅಧಿಕಾರಿ ಎಂ.ಟಿ.ನಾಯ್ಕ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕ ಸೇವೆಯೇ ಮುಖ್ಯ. ಸಮಾಜ ಸಂಘಟನೆಯಲ್ಲಿದ್ದ ಯಾವುದೇ ಸಮಾಜ ಸದಾ ಜೀವಂತಿಕೆಯಿAದ ಇರುತ್ತದೆ. ಇಂತಹ ಸಂಘಟನೆಯಿAದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪೂರಕ ಕಾರ್ಯ ಯೋಜನೆ ರೂಪಿಸಿ ಅವರಿಗೆ ಆರ್ಥಿಕ ನೆರವು ನೀಡಲು ಸಾಧ್ಯ ಎಂದರು.

ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿ ಖ್ಯಾತ ಹೃದಯ ತಜ್ಞ ಪ್ರಕಾಶ ನಾಯ್ಕ ಮಾತನಾಡಿ, ಪುಸ್ತಕ ಓದಿದರೆ ಸಾಲದು. ಅದು ನಮ್ಮ ವ್ಯಕ್ತಿತ್ವ ರೂಪಿಸುವ ಸಾಧನವಾಗಬೇಕು. ಇಂದಿನ ಪುರಸ್ಕಾರ ನಿಮ್ಮ ಯಶಸ್ಸಿನ ಮೆಟ್ಟಿಲೇರಲು ಮೊದಲ ಹೆಜ್ಜೆ. ಮುಂದಿನ ಗುರಿಮುಟ್ಟವ ಕನಸಿನ ಜೊತೆಗೆ ನಿರಂತರ ಶ್ರಮದಿಂದ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದರು.

ವಿಶೇಷ ಆಮಂತ್ರಿತರಾಗಿ ಭಾಗವಹಿಸಿದ ಡಾಕ್ಟರ್ ವಿಜಯಲಕ್ಷ್ಮಿ ನಾಯ್ಕ ಮಾತನಾಡಿ, ವಿದ್ಯಾರ್ಥಿ ಬದುಕಿನಲ್ಲಿ ಉನ್ನತವಾದ ಕನಸನ್ನು ಕಾಣಬೇಕು. ಆ ಕನಸಿಗೆ ಪೂರಕವಾದ ಪ್ರಯತ್ನ ನಿಮ್ಮದಾಗಿರಬೇಕು. ಸುಲಭವಾಗಿ ಯಾವುದು ಸಿಗುವುದಿಲ್ಲ. ಕಷ್ಟ ಸಹಿಷ್ಣು ಗುಣ ಮತ್ತು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ವ್ಯಕ್ತಿತ್ವ ನಿಮ್ಮದಾದರೆ ನೀವು ಕಂಡ ಕನಸಿನಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ ಪ್ರಾಚಾರ್ಯ ಸತೀಶ ನಾಯ್ಕ, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಟಿ. ನಾಯ್ಕ, ನಾಮಧಾರಿ ವಿದ್ಯಾರ್ಥಿ ನಿಲಯದ ಕಟ್ಟಡ ಸಮಿತಿ ಅಧ್ಯಕ್ಷ ಸಿ.ಬಿ.ನಾಯ್ಕ, ಸಂದರ್ಭೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸಂಘದ ಅಧ್ಯಕ್ಷ ಪ್ರಭಾಕರ ನಾಯ್ಕ, ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ ನಾಯ್ಕ, ಪ್ರತಿಭಾ ಪುರಸ್ಕಾರ ಸಮಿತಿಯ ಅಧ್ಯಕ್ಷ ಕಿಶೋರ ನಾಯ್ಕ, ನೌಕರ ಸಂಘದ ಕಾರ್ಯದರ್ಶಿ ಸತೀಶ ನಾಯ್ಕ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪ್ರಕಾಶ ನಾಯ್ಕ, ಸೇವಾದಳ ಘಟಕದ ಅಧ್ಯಕ್ಷ ಬಾಬು ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ನಾಮಧಾರಿ ಸಂಘದ ಉಪಾಧ್ಯಕ್ಷ ಪಿ. ಆರ್. ನಾಯ್ಕ ಸ್ವಾಗತಿಸಿದರೆ, ನಮ್ಮಧಾರಿ ಸಂಘದ ಕಾರ್ಯದರ್ಶಿ ಎಂ.ಜಿ. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ನಾಮಧಾರಿ ಸಂಘದ ಜಿಲ್ಲಾ ಪ್ರತಿನಿಧಿ ಶಂಕರ ನಾಯ್ಕ ವಂದಿಸಿದರು. ನಾಮಧಾರಿ ಸಂಘದ ಸದಸ್ಯ ಸುರೇಶ ನಾಯ್ಕ ನಿರೂಪಿಸಿದರು.

ಇದೆ ಸಂದರ್ಭದಲ್ಲಿ ದಿ.ಶಾಂತಿ ನಾಯಕರವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.ಎಸ್. ಎಸ್. ಎಲ್. ಸಿ.ಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳಿಸಿದ 82 ವಿದ್ಯಾರ್ಥಿಗಳನ್ನು, ಪಿಯುಸಿಯಲ್ಲಿ ಶೇಕಡಾ 90 ಕಿಂತ ಹೆಚ್ಚು ಅಂಕ ಗಳಿಸಿದ 42 ವಿದ್ಯಾರ್ಥಿಗಳನ್ನು ಹಾಗೂ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ 11 ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.

About The Author

error: Content is protected !!