August 30, 2025

ಭಟ್ಕಳ ಟ್ಯಾಕ್ಸಿ ಚಾಲಕ-ಮಾಲಕರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ

ಭಟ್ಕಳ: ನಗರದ ಬಸ್ ನಿಲ್ದಾಣದ ಎದುರುಗಡೆಯಲ್ಲಿರುವ ಸಿಟಿ ಹಾಲ್‌ನಲ್ಲಿ ನಡೆದ ಭಟ್ಕಳ ಟ್ಯಾಕ್ಸಿ ಚಾಲಕ-ಮಾಲಕರ ಸಂಘದ ಮಹಾಸಭೆಯಲ್ಲಿ 2025-26ನೇ ಸಾಲಿನ ಹೊಸ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷರಾಗಿ ಗಣೇಶ ದೇವಡಿಗ, ಉಪಾಧ್ಯಕ್ಷರಾಗಿ ಮೊಹಮ್ಮದ್ ಮುಸ್ತಾಕ್, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಈರ ನಾಯ್ಕ, ಸಹ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಸ್ನಾನ್, ಖಜಾಂಚಿಯಾಗಿ ನಾರಾಯಣ ನಾಯ್ಕ ಹಾಗೂ ಸಹ ಖಜಾಂಚಿಯಾಗಿ ಮೊಹಮ್ಮದ್ ಸಲ್ಮಾನ್ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸರ್ಫರಾಜ್ ಶಾಬಂದ್ರಿ, ಶ್ರೀನಿವಾಸ ಮಂಜಯ್ಯ ನಾಯ್ಕ, ಲೋಕೇಶ್ ನಾಯ್ಕ, ರಾಘವೇಂದ್ರ ಶೇಟ, ಅಬ್ದುಲ್ ಬಾರಿ, ದಿನೇಶ್ ಮೊಗೇರ, ಕಫೀಲ್ ಅಹ್ಮದ್ ಹಾಗೂ ತಲಹ ಜಬೀರ್ ವಜೀರ್ ಅವರನ್ನು ನೇಮಕ ಮಾಡಲಾಗಿದೆ.

About The Author