
ಸೂಕ್ತ ತನಿಖೆಗೆ ಜಿಲ್ಲಾಧಿಕಾರಿಗೆ ಮನವಿ
ಗದಗ: ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲ್ಲೂಕು ಹುಲ್ಲೂರು ಗ್ರಾಮದಲ್ಲಿ ಕಂದಾಯ ಇಲಾಖೆಯ ಗ್ರಾಮ ಸಹಾಯಕ ರಫೀಕ್ ಹುಸೇನ್ ಸಾಬ್ ನದಾಫ್ ಅವರ ಸಾವಿಗೆ ಅಕ್ರಮ ಮರಳು ದಂಧೆಕೋರರ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಆಗಸ್ಟ್ 15ರಂದು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಕ್ರಮ ಮರಳು ಸಾಗಣೆಯನ್ನು ತಡೆಯಲು ಮುಂದಾದ ರಫೀಕ್ ನದಾಫ್ ಅವರ ಮೇಲೆ ದುಷ್ಕರ್ಮಿಗಳು ಟ್ರ‍್ಯಾಕ್ಟರ್ ಹರಿಸಿ ಹತ್ಯೆಗೈದಿದ್ದಾರೆ ಎಂದು ಗ್ರಾಮಸ್ಥರು ಮತ್ತು ಸಹೋದ್ಯೋಗಿಗಳು ಆರೋಪಿಸಿದ್ದಾರೆ. ಈ ಘಟನೆ ಗ್ರಾಮ ಸಹಾಯಕರ ಜೀವಭದ್ರತೆಯ ಕುರಿತಂತೆ ತೀವ್ರ ಆತಂಕ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಗ್ರಾಮ ಸಹಾಯಕರ ಸಂಘ, ಕಂದಾಯ ನೌಕರರ ಸಂಘ ಹಾಗೂ ಗ್ರಾಮಾಡಳಿತ ಅಧಿಕಾರಿಗಳ ಸಂಘಗಳು ಒಟ್ಟಾಗಿ ಜಿಲ್ಲಾಧಿಕಾರಿ ಡಾ|| ಕುಮಾರ್ ಹಾಗೂ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮನವಿ ಸಲ್ಲಿಸಿ ಹತ್ಯೆಗೆ ಕಾರಣರಾದ ಮರಳು ದಂಧೆಕೋರರನ್ನು ಕೂಡಲೇ ಬಂಧಿಸಲು,ಮೃತರ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ನೀಡಲು ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಆಗ್ರಹಿಸಿವೆ.
ಘಟನೆಯ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಅಕ್ರಮ ಮರಳು ಸಾಗಾಟ ತಡೆಗಟ್ಟಲು ಮುಂಚೂಣಿಯಲ್ಲಿ ನಿಂತ ಗ್ರಾಮ ಸಹಾಯಕನ ಜೀವವೇ ಬಲಿಯಾದರೆ, ನೌಕರರ ಭದ್ರತೆ ಯಾರು ನೋಡಿಕೊಳ್ಳುತ್ತಾರೆ? ಎಂಬ ಪ್ರಶ್ನೆ ಎದ್ದಿದೆ.
More Stories
ಭಟ್ಕಳ ಟ್ಯಾಕ್ಸಿ ಚಾಲಕ-ಮಾಲಕರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ
ಪಾಳುಬಿದ್ದ ಗಾಂಧಿನಗರ ಬಸ್ ನಿಲ್ದಾಣ, ನಿರ್ವಹಣೆಗೆ ಕೊರತೆ, ಶಿಥಿಲ ಸ್ಥಿತಿ; ಜನತೆ ಆಕ್ರೋಶ
ಚಾತುರ್ಮಾಸ್ಯ ವ್ರತಚಾರಣೆ -ವರಮಹಾಲಕ್ಷ್ಮಿ ಪೂಜೆ