ಹಂಗಾರಖ0ಡ (ಸಿದ್ದಾಪುರ, ಉತ್ತರ ಕನ್ನಡ): ನಮ್ಮ ಪವಿತ್ರ ನದಿಗಳ ಉಳಿವಿಗಾಗಿ ಹಾಗೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಅಸ್ಮಿತೆಯ ಪುನರುಜ್ಜೀವನಕ್ಕಾಗಿ ಶ್ರೀ ಸ್ವರ್ಣವಲ್ಲಿ ಮಹಾಸ್ವಾಮಿಗಳವರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇAದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಆದೇಶದಂತೆ ಹಾಗೂ “ಬೇಡ್ತಿ – ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ”ಯ ಸಲಹೆಯ ಮೇರೆಗೆ, ಹಂಗಾರಖAಡದ ಬಾಳೇಕೈ ಹೊಳೆ ಅಂಚಿನಲ್ಲಿ ಒಂದು ವಿಶಿಷ್ಟವಾದ “ನದಿ ಅಂಚಿನಲ್ಲಿ ವನ ಮಹೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ 07-06-2026ರ ಭಾನುವಾರ ಬೆಳಿಗ್ಗೆ 10:30ಕ್ಕೆ ಸರಿಯಾಗಿ ತ್ಯಾಗಲಿಯಿಂದ ಹಂಗಾರಖAಡಕ್ಕೆ ಹೋಗುವ ರಸ್ತೆಯ ಮಧ್ಯೆ ಇರುವ ಹಂಗಾರಖAಡ – ಬಾಳೇಕೈ ಹೊಳೆ ತೀರದಲ್ಲಿ ಈ ಪರಿಸರ ಜಾಗೃತಿ ಅಭಿಯಾನ ನಡೆಯಲಿದೆ.

ದಿವ್ಯ ಉಪಸ್ಥಿತಿ ಮತ್ತು ಪ್ರಮುಖರು:
ಕಾರ್ಯಕ್ರಮವು ವೇದಮೂರ್ತಿ ಶ್ರೀಯುತ ವಿನಾಯಕ ಸುಬ್ರಾಯ ಭಟ್ ಮತ್ತೀಹಳ್ಳಿ ಅವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ನೆರವೇರಲಿದ್ದು, ಪರಿಸರ ಪ್ರೇಮಿಗಳಿಗೆ ವಿಪ್ರಶೀರ್ವಾದ ಲಭಿಸಲಿದೆ. ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ: ಶ್ರೀ ಅನಂತ ಹೆಗಡೆ ಆಶಿಸರ (ಪ್ರಸಿದ್ಧ ಪರಿಸರ ವಾದಿಗಳು) ಶ್ರೀ ಅಜಯ್ ಕುಮಾರ್ (ಆರ್ ಎಪ್ ಒ) ಶ್ರೀ ಎಂ. ಆರ್. ಹೆಗಡೆ ಬಾಳೆಜಡ್ಡಿ, ಶ್ರೀ ಗೋಪಾಲಕೃಷ್ಣ ಹೆಗಡೆ ತಂಗಾರಮನೆ, ಶ್ರೀ ಸಚ್ಚಿದಾನಂದ ಜಿ. ಹೆಗಡೆ ಬೆಳಗದ್ಧೆ, ಶ್ರೀ ಮಂಜುನಾಥ ಎಂ. ಹೆಗಡೆ ಹಂಗಾರಖAಡ, ಶ್ರೀ ನಾರಾಯಣ ಹುಲಿಯಾ ನಾಯ್ಕ ಹಂಗಾರಖAಡ, ಶ್ರೀ ನಾಗರಾಜ ಆರ್. ನಾಯ್ಕ ಹಂಗಾರಖAಡ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿರಲಿದ್ದಾರೆ.

ಪ್ರಕೃತಿ ರಕ್ಷಣೆಗೆ ಕರೆ:
“ನದಿಗಳು ಉಳಿದರೆ ಉಳಿದವು ನಾಡು, ನದಿಗಳು ಆಳಿದರೆ ಆಳಿದವು ನಾಡು” ಹಾಗೂ “ಬೇಡ್ತಿ ನೀರನು ಬಿಡೆವು ಬಿಡೆವು… ಅಘನಾಶಿನಿ ಜಲ ಕೊಡೆವು ಕೊಡೆವು” ಎನ್ನುವ ದೃಢ ಸಂಕಲ್ಪದೊAದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪಾಪನಾಶಿನಿ ನದಿಯ ಅಂಚಿನಲ್ಲಿ ಗಿಡಗಳನ್ನು ನೆಟ್ಟು ಪ್ರಕೃತಿ ಮಾತೆಯ ರಕ್ಷಣೆಗೆ ಕೈಜೋಡಿಸುವಂತೆ ಮತ್ತು ಪೂಜ್ಯ ಶ್ರೀಗಳವರ ಆಶೀರ್ವಾದಕ್ಕೆ ಪಾತ್ರರಾಗುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

ಆಯೋಜಕರು ಮತ್ತು ಸಾರ್ವಜನಿಕ ಪ್ರಕಟಣೆ:
ಈ ಕಾರ್ಯಕ್ರಮಕ್ಕೆ ಅಘನಾಶಿನಿ ಸಮಿತಿ, ಹಂಗಾರಖAಡ-ಬಾಳೈಕೈ-ತ್ಯಾಗಲಿಯ ಸಮಸ್ತ ಗ್ರಾಮಸ್ಥರು, ಸ್ಥಳೀಯ ಸಂಘ-ಸAಸ್ಥೆಗಳು, ಸ್ವಸಹಾಯ ಸಂಘಗಳು, ಯುವಕ ಮತ್ತು ಯುವತಿ ಮಂಡಲಗಳು ಹಾಗೂ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ತ್ಯಾಗಲಿಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ, ತ್ಯಾಗಲಿ ಪಂಚಾಯತ್ ವ್ಯಾಪ್ತಿಯ ಸರ್ವ ನಾಗರಿಕರು ಜಂಟಿಯಾಗಿ ಸರ್ವರಿಗೂ ಆತ್ಮೀಯ ಸ್ವಾಗತವನ್ನು ಬಯಸಿದ್ದಾರೆ.

ವಿಶೇಷ ಸೂಚನೆ: ವನ ಮಹೋತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರು ಗಿಡ ನೆಡಲು ಬೇಕಾಗುವ ಸಲಕರಣೆಗಳನ್ನು (ಗುದ್ದಲಿ, ಪಿಕಾಸಿ, ಕತ್ತಿ ಇತ್ಯಾದಿ) ತಮ್ಮೊಂದಿಗೆ ತರಬೇಕಾಗಿ ಹಾಗೂ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಬೇಕಾಗಿ ಆಯೋಜಕರು ಪ್ರೀತಿಪೂರ್ವಕವಾಗಿ ವಿನಂತಿಸಿದ್ದಾರೆ.

More Stories
ಸಿದ್ದಾಪುರದಲ್ಲಿ ಉರ್ದು ಶಾಲೆ ತಡೆಗೋಡೆ ಕಾಮಗಾರಿಗೆ ಬಿಜೆಪಿ ವಿರೋಧ. ತಹಶೀಲ್ದಾರ್ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆದ ಕಾರ್ಯಕರ್ತರು
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬಿಳೆಕಲ್ನಲ್ಲಿ ಏ.16ಕ್ಕೆ “ಶ್ರೀಕೃತ” ನಾದೋಪಚಾರ ಸಂಗೀತ ಸಂಭ್ರಮ