ಭಟ್ಕಳ: ಮುರುಡೇಶ್ವರದ ನಿವಾಸಿ ಹಾಗೂ ಲೇಖಕಿ ಸೀಮಾ ನಾಯ್ಕ ಅವರ ಚೊಚ್ಚಲ ಕಾದಂಬರಿ ಕಾಲದ ಗಡಿಯಾರ ಕೃತಿಯ ಲೋಕಾರ್ಪಣೆ ಸಮಾರಂಭವು ಇಲ್ಲಿನ ಮಹಿಮಾ ಇವೆಂಟ್ ಹಾಲ್‌ನಲ್ಲಿ ಸಂಭ್ರಮದಿAದ ನಡೆಯಿತು. ಶಿರಸಿ ಸರ್ಕಾರಿ ಪ್ರೌಢಶಾಲೆ, ಬಂಡಲದ ಮುಖ್ಯೋಪಾಧ್ಯಾಯ ರಾಜೇಶ್ ಹೆಚ್. ನಾಯಕ್ ಕೃತಿಯನ್ನು ಲೋಕಾರ್ಪಣೆಗೊಳಿಸಿ, ಸಾಹಿತ್ಯವು ಸಮಾಜದ ಚಿಂತನೆಗಳನ್ನು ರೂಪಿಸುವ ಶಕ್ತಿಯುತ ಮಾಧ್ಯಮವಾಗಿದ್ದು, ಹೊಸ ಲೇಖಕರ ಸಾಹಿತ್ಯಿಕ ಕೊಡುಗೆಗಳು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡುತ್ತವೆ ಎಂದು ಹೇಳಿದರು.

ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಡಿ.ವಿ. ಪ್ರಕಾಶ್ ಹಾಗೂ ಕವಿ-ಸಾಹಿತಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕೃತಿಯ ಕುರಿತು ಮಾತನಾಡಿದರು. ತಲೆಮಾರುಗಳ ನಡುವಿನ ಅಂತರ, ಬದಲಾಗುತ್ತಿರುವ ಸಾಮಾಜಿಕ ಸಂಬAಧಗಳು ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ಕೃತಿಯು ಓದುಗರಲ್ಲಿ ಚಿಂತನೆ ಮೂಡಿಸುವಂತಿದೆ ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯಾಸಕ್ತರು, ಗಣ್ಯರು, ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಸೀಮಾ ನಾಯ್ಕ ಅವರ ಸಾಹಿತ್ಯ ಪಯಣಕ್ಕೆ ಶುಭ ಹಾರೈಸಲಾಯಿತು. ಕಾಲದ ಗಡಿಯಾರ ಕಾದಂಬರಿಯು ಸಾಮಾಜಿಕ ಬದುಕಿನ ವಿವಿಧ ಆಯಾಮಗಳನ್ನು ತೆರೆದಿಡುವ ಪ್ರಯತ್ನವಾಗಿದ್ದು, ಓದುಗರ ಮೆಚ್ಚುಗೆ ಪಡೆಯುವ ವಿಶ್ವಾಸ ವ್ಯಕ್ತವಾಯಿತು.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ