August 30, 2025

ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಕುಮಟಾದ ಸಹಾಯಕ ಆಯುಕ್ತರಿಗೆ ಹಾಗೂ ಕುಮಟಾ ತಹಶೀಲ್ದಾರರಿಗೆ ಮನವಿ

ಕುಮಟಾ : ಯುವಾ ಬ್ರಿಗೇಡ್ ಕುಮಟಾ ವತಿಯಿಂದ, ಧರ್ಮಸ್ಥಳದ ಮೇಲೆ ಆಗುತ್ತಿರುವ ಧರ್ಮನಿಂಧನೆ ಹಾಗೂ ಅಪಪ್ರಚಾರಕ್ಕೆ ಮುಖ್ಯ ಕಾರಣೀಕರ್ತರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣ, ಸಮೀರ್ ಎಮ್.ಡಿ ಯನ್ನು ಈ ಕೂಡಲೇ ಬಂಧಿಸುವAತೆ ಕುಮಟಾದ ಸಹಾಯಕ ಆಯುಕ್ತರಿಗೆ ಹಾಗೂ ಕುಮಟಾ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಶಬರಿಮಲೆ, ಶನಿಶಿಂಗಣಾಪುರ ಈಗ ಧರ್ಮಸ್ಥಳ! ಇನ್ನೆಷ್ಟು ಧಾರ್ಮಿಕ ದಾಳಿಯನ್ನು ಸಹಿಸುವುದು ಕಷ್ಟವಾಗಿದೆ ಹಿಂದೂ ಧರ್ಮದ ಕುರಿತು ಸಲುಗೆಯಿಂದ ಮಾತಾಡುವದು ಸಹಜವಾಗಿಬಿಟ್ಟಿದೆ ಇದೆ ಮುಂದುವರೆದು ಧರ್ಮಸ್ಥಳಕ್ಕೆ ಮಸಿ ಬಳಿಯುವ ಕೆಲಸ ಸಾಗಿದೆ.

ಧರ್ಮಸ್ಥಳದ ಪರಿಸ್ಥಿತಿಯೇ ಹೀಗಾದರೆ ನಮ್ಮೂರಿನ ಚಿಕ್ಕಪುಟ್ಟ ಮಠ-ಮಂದಿರಗಳ ಗತಿಯೇನು? ಇದಕ್ಕೆಲ್ಲ ಅಂತ್ಯ ಹಾಡಲೇಬೇಕಲ್ಲ. ಹಾಗಾಗಿ ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ಈ ಸಂಧರ್ಭದಲ್ಲಿ ಯುವಾ ಬ್ರಿಗೇಡ್ ಸದಸ್ಯರಾದ ಸಂದೀಪ ಮಡಿವಾಳ , ಕಿಶೋರ ಶೆಟ್ಟಿ, ಅಣ್ಣಪ್ಪ ನಾಯ್ಕ, ದೀಪಾ ಕೋಡಿಯ ಇತರರು ಹಾಜರಿದ್ದರು.

About The Author